
ನವದೆಹಲಿ, 08 ಮೇ (ಹಿ.ಸ.) :
ಆ್ಯಂಕರ್ : ಪ್ರಧಾನಿ ನರೇಂದ್ರ ಮೋದಿ ಅವರು ಭಾರತೀಯ ಸೇನೆಯ ಧೈರ್ಯ, ಶೌರ್ಯ ಮತ್ತು ದೇಶಭಕ್ತಿಗೆ ವಂದನೆ ಸಲ್ಲಿಸಿದ್ದಾರೆ. ದೇಶದ ಗೌರವ ಮತ್ತು ಭದ್ರತೆಯನ್ನು ಕಾಪಾಡಲು ಯೋಧರು ತೋರಿಸುತ್ತಿರುವ ಸಮರ್ಪಣೆ ಪ್ರತಿಯೊಬ್ಬ ಭಾರತೀಯನಿಗೂ ಹೆಮ್ಮೆಯ ವಿಷಯವಾಗಿದೆ ಎಂದು ಅವರು ಹೇಳಿದ್ದಾರೆ.
ಶುಕ್ರವಾರ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಹಂಚಿಕೊಂಡ ಸಂದೇಶದಲ್ಲಿ ಪ್ರಧಾನಿ ಮೋದಿ, “ದೇಶದ ಗೌರವ ಮತ್ತು ಘನತೆಯನ್ನು ರಕ್ಷಿಸುವಲ್ಲಿ ಭಾರತೀಯ ಸೇನೆಯ ಶೌರ್ಯ ಮತ್ತು ಪರಾಕ್ರಮವು ಪ್ರತಿಯೊಬ್ಬ ದೇಶವಾಸಿಗೂ ಹೆಮ್ಮೆಯನ್ನುಂಟು ಮಾಡುತ್ತದೆ. ಮಾತೃಭೂಮಿಗಾಗಿ ಬದುಕುವ ಮತ್ತು ತ್ಯಾಗಕ್ಕೆ ಸದಾ ಸಿದ್ಧರಾಗಿರುವ ಅವರ ಮನೋಭಾವ ಎಲ್ಲರಿಗೂ ಸ್ಫೂರ್ತಿದಾಯಕವಾಗಿದೆ” ಎಂದು ಬರೆದಿದ್ದಾರೆ.
ಈ ಸಂದರ್ಭದಲ್ಲಿ ಅವರು ಸಂಸ್ಕೃತದ “ಸ್ವಧರ್ಮಮಪಿ ಚಾವೇಕ್ಷ್ಯ ನ ವಿಕಂಪಿತುಮರ್ಹಸಿ” ಎಂಬ ಗೀತಾ ವಾಕ್ಯವನ್ನೂ ಉಲ್ಲೇಖಿಸಿದರು. ತಮ್ಮ ಕರ್ತವ್ಯವನ್ನು ಅರಿತು ಅದನ್ನು ನಿಭಾಯಿಸುವ ಸಂದರ್ಭದಲ್ಲಿ ಭಯ ಅಥವಾ ಗೊಂದಲಕ್ಕೆ ಅವಕಾಶ ಇರಬಾರದು ಎಂಬುದನ್ನು ಈ ವಾಕ್ಯ ಸಾರುತ್ತದೆ ಎಂದು ಪ್ರಧಾನಿ ತಿಳಿಸಿದ್ದಾರೆ.
ನ್ಯಾಯ, ಸದಾಚಾರ ಮತ್ತು ರಾಷ್ಟ್ರದ ಘನತೆಯನ್ನು ಕಾಪಾಡುವ ಹೋರಾಟವೇ ಯೋಧರಿಗೆ ಅತ್ಯುನ್ನತ ಕರ್ತವ್ಯವಾಗಿದ್ದು, ಅದೇ ಅವರ ಜೀವನದ ಮಹತ್ತರ ಧರ್ಮವಾಗಿದೆ ಎಂದು ಪ್ರಧಾನಿ ಮೋದಿ ಅಭಿಪ್ರಾಯಪಟ್ಟಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa