ಮಣಿಪುರದಲ್ಲಿ ಭಾರಿ ಪ್ರಮಾಣದ ಶಸ್ತ್ರಾಸ್ತ್ರ, ಮದ್ದುಗುಂಡು ವಶ
ಇಂಫಾಲ್, 08 ಮೇ (ಹಿ.ಸ.) : ಆ್ಯಂಕರ್ : ಮಣಿಪುರ ರಾಜ್ಯದಲ್ಲಿ ಭದ್ರತಾ ಪಡೆಗಳು ಹಾಗೂ ಪೊಲೀಸರು ಉಗ್ರರ ವಿರುದ್ಧ ಕಾರ್ಯಾಚರಣೆಯನ್ನು ಮತ್ತಷ್ಟು ತೀವ್ರಗೊಳಿಸಿದ್ದು, ವಿವಿಧ ಪ್ರದೇಶಗಳಲ್ಲಿ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳ ಭಾರಿ ಸಂಗ್ರಹವನ್ನು ವಶಪಡಿಸಿಕೊಂಡಿದ್ದಾರೆ. ಮಣಿಪುರ ಪೊಲೀಸ್ ಪ್ರಧಾನ ಕಚ
Arrest


ಇಂಫಾಲ್, 08 ಮೇ (ಹಿ.ಸ.) :

ಆ್ಯಂಕರ್ : ಮಣಿಪುರ ರಾಜ್ಯದಲ್ಲಿ ಭದ್ರತಾ ಪಡೆಗಳು ಹಾಗೂ ಪೊಲೀಸರು ಉಗ್ರರ ವಿರುದ್ಧ ಕಾರ್ಯಾಚರಣೆಯನ್ನು ಮತ್ತಷ್ಟು ತೀವ್ರಗೊಳಿಸಿದ್ದು, ವಿವಿಧ ಪ್ರದೇಶಗಳಲ್ಲಿ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳ ಭಾರಿ ಸಂಗ್ರಹವನ್ನು ವಶಪಡಿಸಿಕೊಂಡಿದ್ದಾರೆ.

ಮಣಿಪುರ ಪೊಲೀಸ್ ಪ್ರಧಾನ ಕಚೇರಿಯ ಪ್ರಕಟಣೆ ಪ್ರಕಾರ, ಸೇನಾಪತಿ ಜಿಲ್ಲೆಯ ಸೇನಾಪತಿ ಪೊಲೀಸ್ ಠಾಣೆ ವ್ಯಾಪ್ತಿಯ ಮಾರೆಮೈ–ಹೆಂಗ್ಬಂಗ್ ಬೆಟ್ಟ ಪ್ರದೇಶದಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಭದ್ರತಾ ಪಡೆಗಳು ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ಪತ್ತೆಹಚ್ಚಿವೆ.

ವಶಪಡಿಸಿಕೊಂಡ ಸಾಮಗ್ರಿಗಳಲ್ಲಿ ಮ್ಯಾಗಜೀನ್ಗಳೊಂದಿಗೆ ಎರಡು .22 ಬೋರ್ ಬಂದೂಕುಗಳು, ಮ್ಯಾಗಜೀನ್ನೊಂದಿಗೆ ಒಂದು .303 ಬೋರ್ ರೈಫಲ್, ಒಂದು ಎಂಪಿ–5 ಮ್ಯಾಗಜೀನ್, ಮ್ಯಾಗಜೀನ್ನೊಂದಿಗೆ ಒಂದು ಎಕೆ–47 ರೈಫಲ್, ಸ್ಥಳೀಯವಾಗಿ ತಯಾರಿಸಿದ ನಾಲ್ಕು ಬೋಲ್ಟ್ ಆಕ್ಷನ್ ರೈಫಲ್ಗಳು, ಒಂದು ಶಾಟ್ಗನ್, ಮ್ಯಾಗಜೀನ್ಗಳೊಂದಿಗೆ ಮೂರು .32 ಪಿಸ್ತೂಲುಗಳು, ಎರಡು .22 ಬೋರ್ ಪಿಸ್ತೂಲುಗಳು, 79 ವಿವಿಧ ಕ್ಯಾಲಿಬರ್ಗಳ ಜೀವಂತ ಕಾರ್ಟ್ರಿಜ್ಗಳು ಹಾಗೂ 13 ಖಾಲಿ ಚಿಪ್ಪುಗಳು ಸೇರಿವೆ.

ಇನ್ನೊಂದು ಕಾರ್ಯಾಚರಣೆಯಲ್ಲಿ ಚುರಾಚಂದ್ಪುರ ಜಿಲ್ಲೆಯ ಚುರಾಚಂದ್ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಹೆಂಗ್ಕಾಪ್ಕೋಟ್ ಪ್ರದೇಶದಲ್ಲಿ ಭದ್ರತಾ ಪಡೆಗಳು ಶಸ್ತ್ರಾಸ್ತ್ರಗಳ ಜೊತೆಗೆ ಸ್ಫೋಟಕ ವಸ್ತುಗಳನ್ನೂ ವಶಪಡಿಸಿಕೊಂಡಿವೆ.

ಈ ಕಾರ್ಯಾಚರಣೆಯಲ್ಲಿ ಮೂರು ಸಿಂಗಲ್ ಬ್ಯಾರೆಲ್ ರೈಫಲ್ಗಳು, ಒಂದು .303 ರೈಫಲ್, ಒಂದು ಪಾಂಪೇ, ನಾಲ್ಕು ರಾಕೆಟ್ ಚಿಪ್ಪುಗಳು, 500 ಗ್ರಾಂ ಸ್ಫೋಟಕ ಸಾಮರ್ಥ್ಯದ ಸಿಲಿಂಡರ್ ಆಕಾರದ ಐಇಡಿ, 4 ಕೆಜಿ ತೂಕದ ಶಂಕುವಿನಾಕಾರದ ಐಇಡಿ, ನಾಲ್ಕು ಬುಲೆಟ್ಪ್ರೂಫ್ ಜಾಕೆಟ್ಗಳು, ಎರಡು ಹೆಲ್ಮೆಟ್ಗಳು, ಏಳು ಖಾಲಿ ಎಕೆ–47 ಚಿಪ್ಪುಗಳು, ನಾಲ್ಕು ಖಾಲಿ 7.62 ಎಂಎಂ ಚಿಪ್ಪುಗಳು ಹಾಗೂ ಒಂದು ರೇಡಿಯೋ ಸೆಟ್ ಚಾರ್ಜರ್ ವಶಪಡಿಸಿಕೊಳ್ಳಲಾಗಿದೆ.

ಈವರೆಗೆ ಯಾವುದೇ ಆರೋಪಿಗಳನ್ನು ಬಂಧಿಸಲಾಗಿಲ್ಲ. ಪ್ರಕರಣಗಳ ಸಂಬಂಧ ಪೊಲೀಸರು ಮುಂದಿನ ತನಿಖೆ ಮತ್ತು ಕಾನೂನು ಕ್ರಮ ಕೈಗೊಂಡಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande