ಕಟ್ಟಡ ಮಾಲೀಕರಿಗೆ ಸಮಾಜ ಕಲ್ಯಾಣ ಇಲಾಖೆಯ ಕರೆ
ಗದಗ, 25 ಮೇ (ಹಿ.ಸ.) : ಆ್ಯಂಕರ್ : 2026–27ನೇ ಸಾಲಿನ ವಿವಿಧ ಡಾ. ಬಿ.ಆರ್. ಅಂಬೇಡ್ಕರ್ ವಸತಿ ನಿಲಯಗಳಿಗೆ ಬಾಡಿಗೆ ಆಧಾರದಲ್ಲಿ ಕಟ್ಟಡ ಪೂರೈಸಲು ಅರ್ಹ ಕಟ್ಟಡ ಮಾಲೀಕರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತರು ಮೇ 30ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ ಎಂದು ರೋಣ ತಾಲೂಕಿನ ಸಮಾಜ ಕಲ್ಯಾಣ ಇಲಾಖೆ ಸ
ಫೋಟೋ


ಗದಗ, 25 ಮೇ (ಹಿ.ಸ.) :

ಆ್ಯಂಕರ್ : 2026–27ನೇ ಸಾಲಿನ ವಿವಿಧ ಡಾ. ಬಿ.ಆರ್. ಅಂಬೇಡ್ಕರ್ ವಸತಿ ನಿಲಯಗಳಿಗೆ ಬಾಡಿಗೆ ಆಧಾರದಲ್ಲಿ ಕಟ್ಟಡ ಪೂರೈಸಲು ಅರ್ಹ ಕಟ್ಟಡ ಮಾಲೀಕರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತರು ಮೇ 30ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ ಎಂದು ರೋಣ ತಾಲೂಕಿನ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಗಜೇಂದ್ರಗಡ ಪಟ್ಟಣದ ಡಾ. ಬಿ.ಆರ್. ಅಂಬೇಡ್ಕರ್ ಮೆಟ್ರಿಕ್ ನಂತರ ವೃತ್ತಿಪರ ಬಾಲಕರ ವಸತಿ ನಿಲಯ, ರೋಣ ಪಟ್ಟಣದ ಡಾ. ಬಿ.ಆರ್. ಅಂಬೇಡ್ಕರ್ ಮೆಟ್ರಿಕ್ ಪೂರ್ವ ಬಾಲಕಿಯರ ವಸತಿ ನಿಲಯ ಹಾಗೂ ರೋಣ ತಾಲೂಕಿನ ಡಾ. ಬಿ.ಆರ್. ಅಂಬೇಡ್ಕರ್ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯಗಳಿಗೆ ಬಾಡಿಗೆ ರೂಪದಲ್ಲಿ ಕಟ್ಟಡ ಪೂರೈಸಲು ಅರ್ಜಿ ಆಹ್ವಾನಿಸಲಾಗಿದೆ.

ಗಜೇಂದ್ರಗಡ ಪಟ್ಟಣದ ವೃತ್ತಿಪರ ಬಾಲಕರ ವಸತಿ ನಿಲಯಕ್ಕೆ 100 ವಿದ್ಯಾರ್ಥಿಗಳ ಸಾಮರ್ಥ್ಯಕ್ಕೆ ಅನುಗುಣವಾದ ಕಟ್ಟಡ ಅಗತ್ಯವಿದ್ದು, ಕನಿಷ್ಠ ಐದು ವಿಶಾಲ ವಾಸದ ಕೊಠಡಿಗಳೊಂದಿಗೆ ಸುಮಾರು 50 ಟು–ಟೈಯರ್ ಕಾಟ್ ವ್ಯವಸ್ಥೆ ಹೊಂದಿರಬೇಕು. ಇದೇ ರೀತಿ ರೋಣ ಪಟ್ಟಣದ ಬಾಲಕಿಯರ ವಸತಿ ನಿಲಯಕ್ಕೆ 65 ವಿದ್ಯಾರ್ಥಿಗಳ ಸಾಮರ್ಥ್ಯ ಹಾಗೂ ರೋಣ ತಾಲೂಕಿನ ಬಾಲಕರ ವಸತಿ ನಿಲಯಕ್ಕೆ 50 ವಿದ್ಯಾರ್ಥಿಗಳ ಸಾಮರ್ಥ್ಯಕ್ಕೆ ತಕ್ಕಂತೆ ಕಟ್ಟಡಗಳು ಇರಬೇಕು ಎಂದು ಇಲಾಖೆ ಸೂಚಿಸಿದೆ.

ಬಾಡಿಗೆಗೆ ನೀಡುವ ಕಟ್ಟಡಗಳು ಸಂಬಂಧಿತ ಪಟ್ಟಣಗಳ ಮಧ್ಯಭಾಗದಲ್ಲಿರಬೇಕು. ಬೋರವೆಲ್ ಅಥವಾ ಕೊಳವೆಬಾವಿ ನೀರಿನ ಸೌಲಭ್ಯ, ಆರ್ಸಿಸಿ ನೀರಿನ ಸಂಗ್ರಹಣಾ ಸಂಪು, ಸಮರ್ಪಕ ಶೌಚಾಲಯ ಮತ್ತು ಸ್ನಾನಗೃಹ ವ್ಯವಸ್ಥೆ, ಅಡುಗೆಮನೆ, ಡೈನಿಂಗ್ ಹಾಲ್, ಗ್ರಂಥಾಲಯ, ಕಚೇರಿ ಕೊಠಡಿ, ರೇಷನ್ ರೂಮ್ ಸೇರಿದಂತೆ ಪ್ರತ್ಯೇಕ ಸೌಲಭ್ಯಗಳನ್ನು ಹೊಂದಿರಬೇಕು. ಜೊತೆಗೆ ಆಟದ ಮೈದಾನ, ಕಂಪೌಂಡ್ ಗೋಡೆ, ಸುಸ್ಥಿತಿಯ ವಿದ್ಯುತ್ ಸಂಪರ್ಕ ಮತ್ತು ಸುರಕ್ಷಿತ ವೈಯರಿಂಗ್ ಕಡ್ಡಾಯವಾಗಿರಬೇಕು.

ಕಟ್ಟಡ ನಿರ್ಮಾಣದ ವರ್ಷ ಸೇರಿದಂತೆ ಅಗತ್ಯ ದಾಖಲೆಗಳೊಂದಿಗೆ 100 ರೂ. ಚಾಪಾ ಕಾಗದದ ಮುಚ್ಚಳಿಕೆಯನ್ನು ಸಲ್ಲಿಸಬೇಕಿದೆ. ತಾಲೂಕು ಮಟ್ಟದ ಸಮಿತಿ ಪರಿಶೀಲನೆ ಹಾಗೂ ಅನುಮೋದನೆಯ ಬಳಿಕ ಮಾತ್ರ ಕಟ್ಟಡವನ್ನು ಬಾಡಿಗೆ ಆಧಾರದಲ್ಲಿ ಪಡೆಯಲಾಗುವುದು. ನಿಯಮಾನುಸಾರ ಪಿ.ಡಬ್ಲ್ಯು.ಡಿ. ನಿಗದಿಪಡಿಸುವ ಬಾಡಿಗೆ ದರಕ್ಕೆ ಆಡಳಿತಾತ್ಮಕ ಅನುಮೋದನೆ ದೊರೆತ ಬಳಿಕ ಹಾಗೂ ಅನುದಾನ ಲಭ್ಯತೆಗೆ ಅನುಗುಣವಾಗಿ ಬಾಡಿಗೆ ಪಾವತಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಹೆಚ್ಚಿನ ಮಾಹಿತಿಗಾಗಿ ರೋಣ ತಾಲೂಕಿನ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸಬಹುದು.

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande