ಅಮಲಝರಿಯಲ್ಲಿ ‘ಹಳ್ಳಿ ಸಂತೆ’ ಪ್ರಾಂಗಣ ಉದ್ಘಾಟನೆ ; ರೈತರಿಗೆ ಹೊಸ ಮಾರುಕಟ್ಟೆ ಸೌಲಭ್ಯ
ಬಾಗಲಕೋಟೆ, 02 ಮೇ (ಹಿ.ಸ.) : ಆಂಕರ್ : ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಅಮಲಝರಿ ಗ್ರಾಮದಲ್ಲಿ ಗ್ರಾಮೀಣ ಆರ್ಥಿಕತೆಗೆ ಉತ್ತೇಜನ ನೀಡುವ ಉದ್ದೇಶದಿಂದ ‘ಹಳ್ಳಿ ಸಂತೆ’ ಪ್ರಾಂಗಣವನ್ನು ನಿರ್ಮಿಸಲಾಗಿದ್ದು, ಇದು ರೈತರು ಹಾಗೂ ಸ್ಥಳೀಯ ವ್ಯಾಪಾರಿಗಳಿಗೆ ಮಹತ್ವದ ಸೌಲಭ್ಯವಾಗಿ ಪರಿಣಮಿಸಿದೆ. ಸುಮಾರು 700
ಅಮಲಝರಿಯಲ್ಲಿ ‘ಹಳ್ಳಿ ಸಂತೆ’ ಪ್ರಾಂಗಣ ಉದ್ಘಾಟನೆ ; ರೈತರಿಗೆ ಹೊಸ ಮಾರುಕಟ್ಟೆ ಸೌಲಭ್ಯ


ಬಾಗಲಕೋಟೆ, 02 ಮೇ (ಹಿ.ಸ.) :

ಆಂಕರ್ : ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಅಮಲಝರಿ ಗ್ರಾಮದಲ್ಲಿ ಗ್ರಾಮೀಣ ಆರ್ಥಿಕತೆಗೆ ಉತ್ತೇಜನ ನೀಡುವ ಉದ್ದೇಶದಿಂದ ‘ಹಳ್ಳಿ ಸಂತೆ’ ಪ್ರಾಂಗಣವನ್ನು ನಿರ್ಮಿಸಲಾಗಿದ್ದು, ಇದು ರೈತರು ಹಾಗೂ ಸ್ಥಳೀಯ ವ್ಯಾಪಾರಿಗಳಿಗೆ ಮಹತ್ವದ ಸೌಲಭ್ಯವಾಗಿ ಪರಿಣಮಿಸಿದೆ.

ಸುಮಾರು 7000 ಚದರ ಅಡಿ ವಿಸ್ತೀರ್ಣದ ಜಾಗೆಯಲ್ಲಿ ಸರ್ಕಾರದ ಅನುದಾನ ಹಾಗೂ ಸಿಜೆಂಟಾ ಇಂಡಿಯಾ ಪ್ರೈವೇಟ್ ಕಂಪನಿಯ ಸಹಯೋಗದಲ್ಲಿ ಅಂದಾಜು ರೂ.35 ಲಕ್ಷ ವೆಚ್ಚದಲ್ಲಿ ಈ ಹಳ್ಳಿ ಸಂತೆ ನಿರ್ಮಾಣಗೊಂಡಿದೆ.

ಈ ಸಂತೆ ಪ್ರಾಂಗಣದಲ್ಲಿ ರೈತರು ತಮ್ಮ ಸ್ಥಳೀಯ ಉತ್ಪನ್ನಗಳು, ತರಕಾರಿ ಮತ್ತು ಹಣ್ಣುಗಳನ್ನು ನೇರವಾಗಿ ಮಾರಾಟ ಮಾಡಲು ಅವಕಾಶ ದೊರೆಯುವುದರಿಂದ ಮಧ್ಯವರ್ತಿಗಳ ಹಸ್ತಕ್ಷೇಪ ಕಡಿಮೆಯಾಗುವ ನಿರೀಕ್ಷೆಯಿದೆ.

ಇಂದು ಶಾಸಕರಾದ ಶ್ರೀ ಜೆ.ಟಿ. ಪಾಟೀಲ ಅವರು ಹಳ್ಳಿ ಸಂತೆಗೆ ಭೇಟಿ ನೀಡಿ, ಸ್ಥಳೀಯ ಹಿರಿಯರು ಮತ್ತು ಯುವಕರ ಸಂಘಟಿತ ಪ್ರಯತ್ನದಿಂದ ಈ ಯೋಜನೆ ಸಾಕಾರಗೊಂಡಿರುವುದನ್ನು ಕಂಡು ಸಂತಸ ವ್ಯಕ್ತಪಡಿಸಿದರು. ಗ್ರಾಮಸ್ಥರ ಸಹಕಾರ ಮತ್ತು ಉತ್ಸಾಹದಿಂದ ಈ ಸಂತೆ ಯಶಸ್ವಿಯಾಗಿ ಕಾರ್ಯನಿರ್ವಹಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಗ್ರಾಮೀಣ ಪ್ರದೇಶದ ರೈತರಿಗೆ ಸಮರ್ಪಕ ಮಾರುಕಟ್ಟೆ ವ್ಯವಸ್ಥೆ ಒದಗಿಸುವುದು ಸರ್ಕಾರದ ಪ್ರಮುಖ ಉದ್ದೇಶವಾಗಿದ್ದು, ಇಂತಹ ಯೋಜನೆಗಳು ರೈತರ ಆದಾಯ ಹೆಚ್ಚಿಸಲು ಸಹಕಾರಿಯಾಗಲಿವೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಸದಸ್ಯರು, ಸ್ಥಳೀಯ ಮುಖಂಡರು, ರೈತರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande