ರಾಹುಲ್ ಗಾಂಧಿ ವಿದೇಶ ಪ್ರವಾಸ ವೆಚ್ಚದ ಬಗ್ಗೆ ಬಿಜೆಪಿ ಪ್ರಶ್ನೆ
ಭಾರಿ
ಸಂಬಿತ ಪಾತ್ರಾ


ನವದೆಹಲಿ, 14 ಮೇ (ಹಿ.ಸ.) :

ಆ್ಯಂಕರ್ : ಲೋಕ ಸಭೆಯ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ಅವರ ವಿದೇಶ ಪ್ರವಾಸಗಳ ವೆಚ್ಚದ ಕುರಿತು ಭಾರತೀಯ ಜನತಾ ಪಕ್ಷ (ಬಿಜೆಪಿ) ಗಂಭೀರ ಪ್ರಶ್ನೆಗಳನ್ನು ಎತ್ತಿದೆ.

ಬಿಜೆಪಿ ವಕ್ತಾರ ಹಾಗೂ ಸಂಸದ ಸಂಬಿತ್ ಪಾತ್ರ ಗುರುವಾರ ನವದೆಹಲಿಯ ಪಕ್ಷದ ಪ್ರಧಾನ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ, 2004ರಿಂದ 2026ರವರೆಗೆ ರಾಹುಲ್ ಗಾಂಧಿ 54 ಬಾರಿ ವಿದೇಶ ಪ್ರವಾಸ ಮಾಡಿದ್ದಾರೆ ಎಂದು ಆರೋಪಿಸಿದರು.

ಈ ಪ್ರವಾಸಗಳಿಗೆ ಸುಮಾರು ₹60 ಕೋಟಿ ವೆಚ್ಚವಾಗಿದೆ ಎಂದು ಹೇಳಿದ ಅವರು, ಈ ಹಣದ ಮೂಲ ಮತ್ತು ಪ್ರವಾಸಗಳ ಸಂಪೂರ್ಣ ವಿವರಗಳನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಲಾಗಿಲ್ಲ ಎಂದು ಆರೋಪಿಸಿದರು.

ಅಮೆರಿಕ, ಇಟಲಿ, ಯುನೈಟೆಡ್ ಕಿಂಗ್ಡಮ್, ಜರ್ಮನಿ, ವಿಯೆಟ್ನಾಂ, ಕಾಂಬೋಡಿಯಾ, ಸಿಂಗಾಪುರ, ಬಹ್ರೇನ್, ಮಾಲ್ಡೀವ್ಸ್, ಕತಾರ್, ಯುಎಇ ಹಾಗೂ ಇತ್ತೀಚಿನ ಓಮನ್-ಮಸ್ಕತ್ ಪ್ರವಾಸಗಳು ಇದರಲ್ಲಿ ಸೇರಿವೆ ಎಂದು ಅವರು ತಿಳಿಸಿದರು.

ಸಂಬಿತ್ ಪಾತ್ರ ಅವರ ಪ್ರಕಾರ, 2013-14ರಿಂದ 2022-23ರ ಅವಧಿಯಲ್ಲಿ ರಾಹುಲ್ ಗಾಂಧಿ ಘೋಷಿತ ಆದಾಯ ಸುಮಾರು ₹11 ಕೋಟಿಯಾಗಿದ್ದರೂ, ವಿದೇಶ ಪ್ರವಾಸಗಳಿಗೆ ಮಾತ್ರ ಭಾರಿ ಮೊತ್ತ ಖರ್ಚಾಗಿದ್ದು ಆದಾಯ ಮತ್ತು ವೆಚ್ಚದ ನಡುವೆ ದೊಡ್ಡ ಅಂತರ ಕಾಣಿಸುತ್ತಿದೆ” ಎಂದು ಅವರು ಆರೋಪಿಸಿದರು.

2015ರಲ್ಲಿ ಆಗ್ನೇಯ ಏಷ್ಯಾ ಪ್ರವಾಸಕ್ಕೆ ₹4.5 ಕೋಟಿ ವೆಚ್ಚವಾಗಿದೆ ಎಂದು ಹೇಳಿದ ಅವರು, ಅದೇ ವರ್ಷ ರಾಹುಲ್ ಗಾಂಧಿಯವರ ಘೋಷಿತ ಆದಾಯ ₹86.55 ಲಕ್ಷ ಮಾತ್ರವಾಗಿತ್ತು ಎಂದು ತಿಳಿಸಿದರು.

ಅದೇ ರೀತಿ, 2025ರ ಡಿಸೆಂಬರ್ನಲ್ಲಿ ಲಂಡನ್ ಮತ್ತು ಬರ್ಲಿನ್ ಪ್ರವಾಸಕ್ಕೆ ₹1.4 ಕೋಟಿ, ಸೆಪ್ಟೆಂಬರ್-ಅಕ್ಟೋಬರ್ 2025ರ ಲ್ಯಾಟಿನ್ ಅಮೆರಿಕ ಪ್ರವಾಸಕ್ಕೆ ₹5.5 ಕೋಟಿ ಹಾಗೂ ಏಪ್ರಿಲ್ 2025ರ ಬೋಸ್ಟನ್ ಪ್ರವಾಸಕ್ಕೆ ₹1.2 ಕೋಟಿ ವೆಚ್ಚವಾಗಿದೆ ಎಂದು ಬಿಜೆಪಿ ಆರೋಪಿಸಿದೆ.

ಏಪ್ರಿಲ್ 2025ರಲ್ಲಿ ದುಬೈ ಹಾಗೂ ಮೇ 2026ರಲ್ಲಿ ಮಸ್ಕತ್ಗೆ ನಡೆದ ಪ್ರವಾಸಗಳು “ಅಘೋಷಿತ”ವಾಗಿದ್ದವು ಎಂದು ಬಿಜೆಪಿ ಹೇಳಿದೆ.

ಈ ಸಂಬಂಧ ಸಿಆರ್ಪಿಎಫ್ ಪತ್ರ ಬರೆದಿದ್ದು, ಕೆಲವು ಪ್ರವಾಸಗಳಲ್ಲಿ ಕಾರ್ಯಕ್ರಮದ ವಿವರ, ಆತಿಥೇಯರ ಮಾಹಿತಿ ಮತ್ತು ಭದ್ರತಾ ಶಿಷ್ಟಾಚಾರಗಳ ವಿವರಗಳು ಲಭ್ಯವಿರಲಿಲ್ಲ ಎಂದು ಸಂಬಿತ್ ಪಾತ್ರ ಆರೋಪಿಸಿದರು.

ಭಾರತೀಯ ಕಾನೂನು ಮತ್ತು ಎಫ್ಸಿಆರ್ಎ ನಿಯಮಗಳ ಪ್ರಕಾರ, ಸಂಸದರು ಅಥವಾ ಸಾರ್ವಜನಿಕ ಹುದ್ದೆಯಲ್ಲಿರುವವರು ವಿದೇಶಿ ಆತಿಥ್ಯ ಸ್ವೀಕರಿಸುವ ಮುನ್ನ ಅನುಮತಿ ಪಡೆಯಬೇಕು ಎಂದು ಬಿಜೆಪಿ ಹೇಳಿದೆ.

ಈ ಪ್ರವಾಸಗಳಿಗೆ ವಿದೇಶಿ ಮೂಲಗಳಿಂದ ಹಣಕಾಸು ನೆರವು ದೊರೆತಿದ್ದರೆ, ಅನುಮತಿ ಪತ್ರಗಳು ಮತ್ತು ಸಂಬಂಧಿತ ದಾಖಲೆಗಳನ್ನು ಸಾರ್ವಜನಿಕಗೊಳಿಸಬೇಕು ಎಂದು ಪಕ್ಷ ಆಗ್ರಹಿಸಿದೆ.

ಇದೇ ವೇಳೆ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಸಿಆರ್ಪಿಎಫ್ ಬರೆದಿದೆ ಎನ್ನಲಾದ ಪತ್ರವನ್ನೂ ಉಲ್ಲೇಖಿಸಿದ ಬಿಜೆಪಿ, ಡಿಸೆಂಬರ್ 2024ರಿಂದ ಸೆಪ್ಟೆಂಬರ್ 2025ರವರೆಗೆ ಆರು ಅಘೋಷಿತ ವಿದೇಶ ಪ್ರವಾಸಗಳು ನಡೆದಿವೆ ಎಂದು ಆರೋಪಿಸಿದೆ.

ಮೇ 2026ರಲ್ಲಿ ನಡೆದ ಓಮನ್ ಪ್ರವಾಸಕ್ಕೆ ಹಣಕಾಸು ಒದಗಿಸಿದವರು ಯಾರು ಎಂಬುದನ್ನು ಕಾಂಗ್ರೆಸ್ ಸ್ಪಷ್ಟಪಡಿಸಬೇಕು ಎಂದು ಬಿಜೆಪಿ ಆಗ್ರಹಿಸಿದೆ.

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande