ಕೊಟ್ಟೂರು ಇಂದು ಕಾಲೇಜು, ಇಬ್ಬರು ವಿದ್ಯಾರ್ಥಿಗಳು ಟಾಪರ್
ಕೊಟ್ಟೂರು, 09 ಏಪ್ರಿಲ್ (ಹಿ.ಸ.) ಆ್ಯಂಕರ್ : ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ವಿಜಯನಗರ ಜಿಲ್ಲೆಯ ಕೊಟ್ಟೂರು ಪಟ್ಟಣದ ಇಂದೂ ಪಿಯು ಕಾಲೇಜಿನ ಕಲಾ ವಿಭಾಗದ ವಿದ್ಯಾರ್ಥಿಗಳಾದ ಡಿ.ಎಂ. ಅರ್ಚನಾ ಮತ್ತು ಸಂಗೀತಾ ಅವರು ತಲಾ 598 ಅಂಕಗಳನ್ನು ಪಡೆದು ರಾಜ್ಯಕ್ಕೆ ಟಾಪರ್ಗಳಾಗಿದ್ದಾರೆ. ಕೊಟ್ಟೂರಿನ ಇಂದು ಕಾ
ಕೊಟ್ಟೂರು ಇಂದು ಕಾಲೇಜು : ಇಬ್ಬರು ವಿದ್ಯಾರ್ಥಿಗಳು ಟಾಪರ್


ಕೊಟ್ಟೂರು ಇಂದು ಕಾಲೇಜು : ಇಬ್ಬರು ವಿದ್ಯಾರ್ಥಿಗಳು ಟಾಪರ್


ಕೊಟ್ಟೂರು ಇಂದು ಕಾಲೇಜು : ಇಬ್ಬರು ವಿದ್ಯಾರ್ಥಿಗಳು ಟಾಪರ್


ಕೊಟ್ಟೂರು ಇಂದು ಕಾಲೇಜು : ಇಬ್ಬರು ವಿದ್ಯಾರ್ಥಿಗಳು ಟಾಪರ್


ಕೊಟ್ಟೂರು, 09 ಏಪ್ರಿಲ್ (ಹಿ.ಸ.)

ಆ್ಯಂಕರ್ : ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ವಿಜಯನಗರ ಜಿಲ್ಲೆಯ ಕೊಟ್ಟೂರು ಪಟ್ಟಣದ ಇಂದೂ ಪಿಯು ಕಾಲೇಜಿನ ಕಲಾ ವಿಭಾಗದ ವಿದ್ಯಾರ್ಥಿಗಳಾದ ಡಿ.ಎಂ. ಅರ್ಚನಾ ಮತ್ತು ಸಂಗೀತಾ ಅವರು ತಲಾ 598 ಅಂಕಗಳನ್ನು ಪಡೆದು ರಾಜ್ಯಕ್ಕೆ ಟಾಪರ್ಗಳಾಗಿದ್ದಾರೆ.

ಕೊಟ್ಟೂರಿನ ಇಂದು ಕಾಲೇಜು ಆರಂಭ ಆದಾಗಿನಿಂದಲೂ 11 ವರ್ಷಗಳಿಂದ ಸತತವಾಗಿ ರ್ಯಾಂಕ್ಗಳನ್ನು ಪಡೆದು ರಾಜ್ಯಕ್ಕೇ ಪ್ರಥಮವಾಗುತ್ತಿದೆ.

ವಿದ್ಯಾರ್ಥಿನಿ ಡಿ.ಎಂ. ಅರ್ಚನಾ ಅವರು ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲ್ಲೂಕಿನ ಬಳಗನೂರು ಗ್ರಾಮದವರು. ತಂದೆ ಹನುಮಂತಪ್ಪ ಕೃಷಿಕರು. ತಾಯಿ ರೇಣುಕಮ್ಮ ಗೃಹಿಣಿ. ಎಸ್ಎಸ್ಎಲ್ಸಿಯಲ್ಲಿ ಶೇ. 78.24 ಅಂಕಗಳನ್ನು ಗಳಿಸಿದ್ದ ಅರ್ಚನಾ, ಪಿಯುಸಿಯಲ್ಲಿ ಕಠಿಣ ಪರಿಶ್ರಮದಿಂದ ರಾಜ್ಯಕ್ಕೆ ಮೊದಲ ಸ್ಥಾನಕ್ಕೇರಿದ್ದಾರೆ.

ವಿದ್ಯಾರ್ಥಿನಿ ಸಂಗೀತಾ ಅವರು ಕೊಪ್ಪಳ ಜಿಲ್ಲೆಯ ಕುಕನೂರು ತಾಲ್ಲೂಕಿನ ಮಂಗಳೂರು ಗ್ರಾಮದವರು. ತಂದೆ ಶೇಖರಗೌಡ ಪೆÇಲೀಸ್ ಪಾಟೀಲ್ ಕೃಷಿಕರು. ತಾಯಿ ಶ್ವೇತಾ ಅಂಗನವಾಡಿ ಕಾರ್ಯಕರ್ತೆರು. ಎಸ್ಎಸ್ಎಲ್ಸಿಯಲ್ಲಿ ಶೇ. 80.32 ಅಂಕ ಪಡೆದಿದ್ದ ಸಂಗೀತಾ, ಈಗ 598 ಅಂಕಗಳೊಂದಿಗೆ ಉತ್ತಮವಾದ ಸಾಧನೆ ಮಾಡಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande