ದ್ವಿತೀಯ ಪಿಯು ಫಲಿತಾಂಶ ; ಕೋಲಾರಕ್ಕೆ ೧೪ನೇ ಸ್ಥಾನ
ದ್ವಿತೀಯ ಪಿಯು ಫಲಿತಾಂಶ ; ಕೋಲಾರಕ್ಕೆ ೧೪ನೇ ಸ್ಥಾನ
ಕೋಲಾರ ಜಿಲ್ಲೆಯ ದ್ವಿತೀಯ ಪಿಯುಸಿಯ ಸಾಧಕ ವಿದ್ಯಾರ್ಥಿಗಳು  ವಾಣಿಜ್ಯವಿಭಾಗ-ಚಿರಂತನ, ವಿಜ್ಞಾನವಿಭಾಗ-ಮದನ್ ಕಲಾ ವಿಭಾಗ ನಯನ, ವಿಕಲಚೇತನ ಚರಣ್.


ಕೋಲಾರ, ೦೯ ಏಪ್ರಿಲ್ (ಹಿ.ಸ) :

ಆ್ಯಂಕರ್ : ದ್ವಿತೀಯ ಪಿಯು ಫಲಿತಾಂಶ ಪ್ರಕಟಗೊಂಡಿದ್ದು, ಈ ಬಾರಿ ಜಿಲ್ಲೆ ಫಲಿತಾಂಶದಲ್ಲಿ ೧೬ನೇ ಸ್ಥಾನದಿಂದ ೧೪ನೇ ಸ್ಥಾನಕ್ಕೇರುವ ಮೂಲಕ ಅತ್ಯುತ್ತಮ ಸಾಧನೆ ಮಾಡಲಾಗಿದೆ.

ವಾಣಿಜ್ಯ ವಿಭಾಗದಲ್ಲಿ ನಗರದ ಮಹಿಳಾ ಸಮಾಜ ಕಾಲೇಜಿನ ವಿದ್ಯಾರ್ಥಿನಿ ಚಿರಂತನ,ವಿಜ್ಞಾನ ವಿಭಾಗದಲ್ಲಿ ಬೇತಮಂಗಲದ ಸಾಯಿಪದವಿ ಪೂರ್ವ ಕಾಲೇಜಿನ ಮದನ್ ಬಂಗಾರಪೇಟೆ ಎಸ್ಡಿಸಿ ಕಾಲೇಜಿನ ಅರ್ಚನಾ, ಕಲಾ ವಿಭಾಗದಲ್ಲಿ ನಗರದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ನಯನ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ ಎಂದು ಪದವಿ ಪೂರ್ವ ಉಪನಿರ್ದೇಶಕ ರಾಜಶೇಖರ್ ಪಟ್ಟಣಶೆಟ್ಟಿ ತಿಳಿಸಿದ್ದಾರೆ.

ಕೋಲಾರ ಜಿಲ್ಲೆಗೆ ಕಳೆದ ೨೦೨೫ರ ಫಲಿತಾಂಶದಲ್ಲಿ ಶೇ.೭೨.೪೫ ಫಲಿತಾಂಶ ಬಂದಿತ್ತು ಆದರೆ ಈ ಬಾರಿ ಅದು ಶೇ.೮೭.೩೮ಕ್ಕೇರುವ ಮೂಲಕ ಜಿಲ್ಲೆಗೆ ೧೪ನೇ ಸ್ಥಾನದ ಗೌರವಕ್ಕೆ ಪಾತ್ರವಾಗಿರುವ ಹಿನ್ನಲೆಯಲ್ಲಿ ಪಿಯು ಉಪನಿರ್ದೇಶಕರು ಹರ್ಷ ವ್ಯಕ್ತಪಡಿಸಿದ್ದಾರೆ.

ವಾಣಿಜ್ಯವಿಭಾಗದಲ್ಲಿ ೫೯೬ ಅಂಕ ಪಡೆದು ಜಿಲ್ಲೆಗೆ ಮೊದಲಿಗರಾಗಿರುವ ಚಿರಂತನ ರಾಜ್ಯಕ್ಕೆ ನಾಲ್ಕನೇ ರ್ಯಾಂಕ್ಗೆ ಭಾಜನರಾಗಿದ್ದು, ಈಕೆ ನಗರದ ಮಹಿಳಾ ಸಮಾಜ ಕಾಲೇಜಿನ ವಿದ್ಯಾರ್ಥಿನಿಯಾಗಿದ್ದು, ಕೋಲಾರ ನಗರದ ಕೆಂಪಮ್ಮ-ಮಾರುತಿ ದಂಪತಿಗಳ ಪುತ್ರಿಯಾಗಿದ್ದಾರೆ. ಈ ವಿದ್ಯಾರ್ಥಿನಿ ಕನ್ನಡದಲ್ಲಿ ೯೮, ಇಂಗ್ಲೀಷ್ನಲ್ಲಿ ೯೮ ಅಂಕ ಪಡೆದಿದ್ದು, ಉಳಿದಂತೆ ಐಚ್ಚಿಕ ವಿಷಯಗಳಾದ ಅರ್ಥಶಾಸ್ತç, ಬಿಸಿನೆಸ್ ಸ್ಟಡಿಸ್, ಅಕೌಂಟೆನ್ಸಿ, ಇತಿಹಾಸದಲ್ಲಿ ೧೦೦ಕ್ಕೆ ೧೦೦ ಅಂಕಗಳ ಸಾಧನೆ ಮಾಡಿದ್ದಾರೆ.

ವಿಜ್ಞಾನ ವಿಭಾಗದಲ್ಲಿ ೫೯೬ ಅಂಕಗಳೊ0ದಿಗೆ ಸಾಧನೆ ಮಾಡಿರುವ ಮದನ್ ಬೇತಮಂಗಲದ ಸಾಯಿ ಪಿಯು ಕಾಲೇಜಿನ ವಿದ್ಯಾರ್ಥಿಯಾಗಿದ್ದಾನೆ. ಉಳಿದಂತೆ ವಿಜ್ಞಾನ ವಿಭಾಗದಲ್ಲಿ ೫೯೫ ಅಂಕಗಳೊ0ದಿಗೆ ಶೇ.೯೯.೧ ರಷ್ಟು ಅಂಕಗಳೊ0ದಿಗೆ ಸಾಧನೆ ಮಾಡಿರುವ ಅರ್ಚನಾ ಬಂಗಾರಪೇಟೆ ಎಸ್ಡಿಸಿ ಕಾಲೇಜಿನ ವಿದ್ಯಾರ್ಥಿನಿಯಾಗಿದ್ದು, ರಾಘವರೆಡ್ಡಿ ಮತ್ತು ಸುರೇಖಾ ದಂಪತಿಯ ಪುತ್ರಿಯಾಗಿದ್ದು, ತಂದೆ ರಾಘವರೆಡ್ಡಿ ದಿನಸಿ ಅಂಗಡಿ ಇಟ್ಟುಕೊಂಡು ಜೀವನ ಸಾಗಿಸುತ್ತಿದ್ದು, ಮಗಳ ಈ ಸಾಧನೆಗೆ ಸಂತಸ ವ್ಯಕ್ತಪಡಿಸಿದ್ದಾರೆ. ಅರ್ಚನಾ ಕನ್ನಡದಲ್ಲಿ ೧೦೦ ಅಂಕ, ಇಂಗ್ಲೀಷ್ನಲ್ಲಿ ೯೯, ಭೌತಶಾಸ್ತç-೯೮, ಗಣಿತದಲ್ಲಿ೧೦೦, ರಸಾಯನಶಾಸ್ತçದಲ್ಲಿ ೯೮, ಕಂಪ್ಯೂಟರ್ ಸೈನ್ಸ್ನಲ್ಲಿ ೧೦೦ ಅಂಕಗಳ ಸಾಧನೆ ಮಾಡಿದ್ದಾರೆ.

ಕಲಾ ವಿಭಾಗದಲ್ಲಿ ನಗರದ ಸರ್ಕಾರಿ ಬಾಲಕಿಯರ ಪಿಯು ಕಾಲೇಜಿನ ನಯನ೫೭೫ ಅಂಕಗಳ ಸಾಧನೆ ಮಾಡಿದ್ದು, ಈಕೆ ಕನ್ನಡದಲ್ಲಿ ೯೭,ಇಂಗ್ಲೀಷ್-೮೫, ಇತಿಹಾಸ-೧೦೦, ಅರ್ಥಶಾಸ್ತç-೯೫, ಸಮಾಜಶಾಸ್ತç-೯೮ ಹಾಗೂ ರಾಜ್ಯಶಾಸ್ತçದಲ್ಲಿ ೧೦೦ ಸಾಧನೆ ಮಾಡಿದ್ದು, ಈ ಬಾಲಕಿ ಕೋಲಾರ ಗಾಂಧಿನಗರದ ನಾಗರಾಜ,ಸೀದೀಪಾ ದಂಪತಿಗಳ ಪುತ್ರಿಯಾಗಿದ್ದಾರೆ. ಉಳಿದಂತೆ ವಿಜ್ಞಾನ ವಿಭಾಗದಲ್ಲಿ ನಗರದ ಸಹ್ಯಾದ್ರಿ ಕಾಲೇಜಿನ ಲಯಾ ೬೦೦ಕ್ಕೆ ೫೯೩ ಅಂಕಗಳನ್ನು ಗಳಿಸಿ ಕಾಲೇಜಿಗೆ ಪ್ರಥಮ ಹಾಗೂ ಜಿಲ್ಲೆಗೆ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ. ಈ ವಿದ್ಯಾರ್ಥಿನಿ ಬಂಗಾರಪೇಟೆ ಪಟ್ಟಣದ ಶ್ರೀನಿವಾಸ್ ಹಾಗೂ ವರಲಕ್ಷಿ÷್ಮÃ ದಂಪತಿ ಪುತ್ರಿಯಾಗಿದ್ದಾರೆ. ಕನ್ನಡ-೧೦೦, ಇಂಗ್ಲೀಷ್-೯೫, ಭೌತಶಾಸ್ತç-೯೯, ರಸಾಯನ ಶಾಸ್ತç-೧೦೦, ಗಣಿತ-೧೦೦, ಜೀವಶಾಸ್ತç-೯೯ ಅಂಕಗಳ ಸಾಧನೆ ಮಾಡಿದ್ದಾರೆ.

ಈ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶವು ಪ್ರಕಟಗೊಂಡಿದ್ದು, ನಗರದ ಸರ್ಕಾರಿ ಪದವಿಪೂರ್ವ ಕಾಲೇಜು (ಜೂನಿಯರ್ ಕಾಲೇಜ್) ತೀವ್ರ ಶ್ರವಣದೋಷವಿರುವ ವಿಕಲಚೇತನ ವಿದ್ಯಾರ್ಥಿ ಚರಣ್.ಕೆ.ಸಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ೫೩೪ ಶೇ ೯೦ % ಉತ್ತಮ ಅಂಕಗಳನ್ನು ಪಡೆದು ಅತ್ಯುತ್ತಮ ಶ್ರೇಣಿಯಲ್ಲಿ ಉತೀರ್ಣನಾಗಿದ್ದು, ಕಲಾ ವಿಭಾಗ ದಲ್ಲಿ ಉತ್ತಮ ಅಂಕಗಳಿಸುವ ಮೂಲಕ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ಕೀರ್ತಿಯನ್ನು ತಂದಿದ್ದಾನೆ.

ನಗರದ ಕುರುಬರಪೇಟೆಯ ನಿವಾಸಿಗಳಾದ ಪತ್ರಕರ್ತ ಕೆ.ಎನ್.ಚಂದ್ರಶೇಖರ್ ಮತ್ತು ಕೆ.ಎಂ.ರಮ್ಯ ದಂಪತಿಗಳ ಮಗನಾದ ಕೆ.ಸಿ.ಚರಣ್ ಹುಟ್ಟಿದಾಗಿನಿಂದ ಶ್ರವಣದೋಷ ಹೊಂದಿದ್ದಾನೆ. ಮೈಸೂರಿನ ರೋಟರಿ ವೆಸ್ಟ್ ಹಾಗೂ ಪೋಷಕರ ಅಸೋಸಿಯೇಷನ್ ಕಿವುಡ ಮಕ್ಕಳ ಟ್ರಸ್ಟ್ ಸಂಸ್ಥೆಯಲ್ಲಿ ತರಬೇತಿ ಪಡೆದು ನಂತರ ಮಹಿಳಾ ಸಮಾಜ ಕನ್ನಡ ಮಾಧ್ಯಮ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣವನ್ನು ಮುಗಿಸಿ ನಂತರ ನಗರದ ಸರ್ಕಾರಿ ಪದವಿಪೂರ್ವ ಪ್ರೌಢ ಶಾಲೆಯಲ್ಲಿ ವ್ಯಾಸಂಗ ಮಾಡಿದ. ೨೦೨೩-೨೪ ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಸರ್ಕಾರದಿಂದ ವಿಕಲಚೇತನರಿಗೆ ಸಿಗುವ ವಿನಾಯಿತಿ ಹಾಗೂ ಸಹಾಯಕ ಪರೀಕ್ಷಾರ್ಥಿ ಸೌಲಭ್ಯ ಪಡೆಯದೇ ಸಾಮಾನ್ಯ ವಿದ್ಯಾರ್ಥಿಯಂತೆ ಪರೀಕ್ಷೆ ಬರೆದು ಕನ್ನಡ ಮಾಧ್ಯಮದಲ್ಲಿ ಶೇ ೬೦.೬೪ ಅಂಕಗಳನ್ನು ಪಡೆದಿದ್ದರು.

ಇದೀಗ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಶ್ರೇಣಿಯಲ್ಲಿ ಉತೀರ್ಣನಾಗಿದ್ದು, ಕಲಾ ವಿಭಾಗ ದಲ್ಲಿ ಶೇ ೯೦% ಉತ್ತಮ ಅಂಕಗಳಿಸಿದ್ದಾನೆ, ಶೇ ೭೫% ತೀವ್ರ ಶ್ರವಣದೋಷವಿರುವ ವಿಕಲಚೇತನಾದರು ಕಠಿಣ ಪರಿಶ್ರಮ ಹಾಗೂ ತಂದೆ ತಾಯಿಗಳ ಸಹಕಾರ ದಿಂದ ಪಿಯುಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಗಳನ್ನು ಗಳಿಸಿದ ಚರಣ್.ಕೆ.ಸಿ. ನನ್ನು ಕಾಲೇಜಿನ ಪ್ರಾಂಶುಪಾಲರು ಹಾಗೂ ಶಿಕ್ಷಕ ವೃಂದದವರು ಅಭಿನಂದಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande