ಮೇ-7 ರಿಂದ ಕೊಪ್ಪಳ ಸಾಂಸ್ಕøತಿಕ ಪ್ರವಾಸೋದ್ಯಮ ಹಾಗೂ ಅಖಿಲ ಕರ್ನಾಟಕ ಮಕ್ಕಳ ಸಾಹಿತ್ಯ ಮತ್ತು ಸಾಂಸ್ಕøತಿಕ 12ನೇ ಸಮ್ಮೇಳನ
ಕೊಪ್ಪಳ, 09 ಏಪ್ರಿಲ್ (ಹಿ.ಸ.) : ಆ್ಯಂಕರ್ : ಕೊಪ್ಪಳದ ಶ್ರೀ ಮಳೆ ಮಲ್ಲೇಶ್ವರ ದೇವಸ್ಥಾನದ ಬಯಲು ರಂಗಮಂದಿರದಲ್ಲಿ ದಿನಾಂಕ 7, 8, 9, 10-ಮೇ-2026ರಲ್ಲಿ ನಾಲ್ಕು ದಿನಗಳ ಕಾಲ ಬೆಳಿಗ್ಗೆ 9 ರಿಂದ ರಾತ್ರಿ 9.30 ರವರೆಗೆ ಕೊಪ್ಪಳ ಜಿಲ್ಲಾ ಸಾಂಸ್ಕøತಿಕ ಪ್ರವಾಸೋದ್ಯಮ ಸಪ್ತಾಹ, ಅಖಿಲ ಕರ್ನಾಟಕ ಮಕ್ಕಳ ಸಾಹ
ಮೇ-7 ರಿಂದ ಕೊಪ್ಪಳ ಜಿಲ್ಲಾ ಸಾಂಸ್ಕøತಿಕ ಪ್ರವಾಸೋದ್ಯಮ ಸಪ್ತಾಹ ಹಾಗೂ ಅಖಿಲ ಕರ್ನಾಟಕ ಮಕ್ಕಳ ಸಾಹಿತ್ಯ ಮತ್ತು ಸಾಂಸ್ಕøತಿಕ 12ನೇ ಸಮ್ಮೇಳನ


ಮೇ-7 ರಿಂದ ಕೊಪ್ಪಳ ಜಿಲ್ಲಾ ಸಾಂಸ್ಕøತಿಕ ಪ್ರವಾಸೋದ್ಯಮ ಸಪ್ತಾಹ ಹಾಗೂ ಅಖಿಲ ಕರ್ನಾಟಕ ಮಕ್ಕಳ ಸಾಹಿತ್ಯ ಮತ್ತು ಸಾಂಸ್ಕøತಿಕ 12ನೇ ಸಮ್ಮೇಳನ


ಕೊಪ್ಪಳ, 09 ಏಪ್ರಿಲ್ (ಹಿ.ಸ.) :

ಆ್ಯಂಕರ್ : ಕೊಪ್ಪಳದ ಶ್ರೀ ಮಳೆ ಮಲ್ಲೇಶ್ವರ ದೇವಸ್ಥಾನದ ಬಯಲು ರಂಗಮಂದಿರದಲ್ಲಿ ದಿನಾಂಕ 7, 8, 9, 10-ಮೇ-2026ರಲ್ಲಿ ನಾಲ್ಕು ದಿನಗಳ ಕಾಲ ಬೆಳಿಗ್ಗೆ 9 ರಿಂದ ರಾತ್ರಿ 9.30 ರವರೆಗೆ ಕೊಪ್ಪಳ ಜಿಲ್ಲಾ ಸಾಂಸ್ಕøತಿಕ ಪ್ರವಾಸೋದ್ಯಮ ಸಪ್ತಾಹ, ಅಖಿಲ ಕರ್ನಾಟಕ ಮಕ್ಕಳ ಸಾಹಿತ್ಯ ಮತ್ತು ಸಾಂಸ್ಕøತಿಕ 12ನೇ ಸಮ್ಮೇಳನ, 75ನೇ ಸಾಂಸ್ಕøತಿಕ ಕಲಾ ಪ್ರತಿಭೋತ್ಸವು ಕೊಪ್ಪಳ ತಾಲ್ಲೂಕಿನ ಬಿಸರಹಳ್ಳಿಯ ಹಿರಿಯ ಸಾಹಿತಿಗಳಾದ ಶ್ರೀ ಮಲ್ಲಿಕಾರ್ಜುನ ಹಿರೇಮಠರ ಸರ್ವಾಧ್ಯಕ್ಷತೆಯಲ್ಲಿ ಮೇಲ್ಕಂಡ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಈಗಾಗಲೇ ಸಂಸ್ಥೆ 11 ಮಕ್ಕಳ ಸಮ್ಮೇಳನಗಳನ್ನು ಮಾಡಿದ್ದು, ಇದು 12ನೇ ಮಕ್ಕಳ ಸಮ್ಮೇಳನ. ಮುಂದಿನ ಈ ಸಮ್ಮೇಳನದ ರೂಪರೇಖೆ ಸಂಪೂರ್ಣ ಬದಲಾಗಲಿದ್ದು, ನಮ್ಮೆಲ್ಲ ಕಾರ್ಯಕ್ರಮಗಳನ್ನು 12 ರಂತೆ ಮಾಡಿ, ಬದಲಾವಣೆಗಳನ್ನು ತರುತ್ತಿದ್ದೇವೆ.

ಈ ಸಲ ಮಕ್ಕಳ ಸಮ್ಮೇಳನದ ಸವಿನೆನಪಿಗಾಗಿ, ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಈ ಸಂದರ್ಭದಲ್ಲಿ ದಶಕದ ಶ್ರೇಷ್ಠ ಕಾದಂಬರಿ ಸ್ಪರ್ಧೆ ಮತ್ತು 15 ವರ್ಷದೊಳಗಿನ ಮಕ್ಕಳು ಬರೆದು ಪ್ರಕಟಿಸಿದ ಸಾಹಿತ್ಯ ಕೃತಿಗಳ ಸ್ಪರ್ಧೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಕನ್ನಡಿಗರಿಗಾಗಿ ಏರ್ಪಡಿಸಲಾಗಿದೆ. ದ್ವಿತೀಯ ಹಂತದಲ್ಲಿ ಕೊಪ್ಪಳ ಜಿಲ್ಲೆಯ ಕೊಪ್ಪಳ ಜಿಲ್ಲಾ ಸಾಂಸ್ಕøತಿಕ ಪ್ರವಾಸೋದ್ಯಮ ಸಪ್ತಾಹ ವಿಶೇಷವಾಗಿದ್ದು, ಪ್ರತಿದಿನ ಸಂಜೆ 5.30 ರಿಂದ ರಾತ್ರಿ 9.30 ರವರೆಗೆ ನಾಲ್ಕು ವಿಚಾರ ಸಂಕಿರಣದಲ್ಲಿ, 16 ಜನ ಸಾಹಿತಿಗಳಿಂದ ವಿಷಯಮಂಡನೆ ವಿಶೇಷ ಅತಿಥಿಗಳ ಸಮ್ಮುಖದಲ್ಲಿ ಜರುಗಲಿದೆ.

ತೃತೀಯ ಹಂತದಲ್ಲಿ, ಕೊಪ್ಪಳ ಜಿಲ್ಲೆಯ ಏಳು ತಾಲ್ಲೂಕಗಳ ಪ್ರವಾಸಿ ಮಾಹಿತಿ ಕುರಿತು, ಪ್ರತಿ ದಿನ 5 ಜನರಂತೆ ಸಾಹಿತಿಗಳು ಮತ್ತು ಶಿಕ್ಷಣ ತಜ್ಞರು, ಉಪನ್ಯಾಸಗಳನ್ನು ನೀಡಲಿದ್ದಾರೆ. ಚತುರ್ಥ ಹಂತದಲ್ಲಿ ನಾಲ್ಕು ಜನ ರಾಜ್ಯಮಟ್ಟದ ಗಾಯಕರು, ಪ್ರತಿದಿನ ಸಂಜೆ 4 ರಿಂದ 5 ರವರೆಗೆ ಸಂಗೀತ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ.

ವಿಶೇಷವಾಗಿ ನಾಲ್ಕು ದಿನದಲ್ಲಿ 100 ಕ್ಕೂ ಹೆಚ್ಚು ನೃತ್ಯ ಕಲಾವಿದರು, ವೈವಿದ್ಯಮಯ ನೃತ್ಯಗಳನ್ನು ಪ್ರಸ್ತುತ ಪಡಿಸಲಿದ್ದಾರೆ. ಜೊತೆಗೆ ಉತ್ತರ ಕರ್ನಾಟಕ ಅನೇಕ ತಂಡಗಳು, ಜನಪದ ಗಾಯಕವನ್ನು ಪ್ರಸ್ತುತ ಪಡಿಸಲಿದ್ದಾರೆ. ಇದರ ಹೊರತಾಗಿ 50ಕ್ಕೂ ಹೆಚ್ಚು ಗಾಯಕರು, ಸುಗಮ ಸಂಗೀತ, ಭಕ್ತಿಗೀತೆ, ಚಿತ್ರಗೀತೆ ಮತ್ತು ಜನಪದ ಗೀತೆಗಳನ್ನು ಹಾಡಲಿದ್ದಾರೆ.

ಕೊಪ್ಪಳದ ಕು. ಅಕ್ಷರ ಗೊಂಡಬಾಳ, ಮಾ. ಅಖಿಲೇಶ್ ಯಾದವ್, ಕು. ಪ್ರಿಯಾಂಕ ಯಾದವ್, ಗದಗಿನ ಕು. ಪ್ರಣತಿ ಗಡಾದ, ಬೆಂಗಳೂರಿನ ಕು. ತೇಜೋಮಯಿ ಗದ್ದಿಯವರನ್ನು ಕಾರ್ಯಕ್ರಮದಲ್ಲಿ ಮಕ್ಕಳ ಪ್ರತಿನಿಧಿಯಾಗಿ 5 ಮಕ್ಕಳನ್ನು ಆಯ್ಕೆ ಮಾಡಿ ಪ್ರೋತ್ಸಾಹಿಸಲಾಗುತ್ತಿದೆ. ಇವರಿಂದ ವೈವಿದ್ಯಮಯ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಲಿವೆ.

ಕೊಪ್ಪಳ ಜಿಲ್ಲಾ ಸಾಂಸ್ಕøತಿಕ ಪ್ರವಾಸಿ ಸಪ್ತಾಹದ ಅಂಗವಾಗಿ ನಡೆಯುವ, ಈ ಕಾರ್ಯಕ್ರಮವನ್ನು ಪ್ರವಾಸೋದ್ಯಮ ಸಚಿವರಾದ ಎಚ್.ಕೆ. ಪಾಟೀಲ್ರವರು ಉದ್ಘಾಟಿಸಲಿದ್ದು, ಸ್ವಾಗತ ಸಮಿತಿ ಅಧ್ಯಕ್ಷರಾಗಿ ಕೊಪ್ಪಳದ ಶಾಸಕ

ರಾಘವೇಂದ್ರ ಹಿಟ್ನಾಳ್, ಸಮ್ಮೇಳನಾಧ್ಯಕ್ಷ ಮಲ್ಲಿಕಾರ್ಜುನ ಹಿರೇಮಠ, ಸಂಸ್ಥೆಯ ಗೌರವ ಅಧ್ಯಕ್ಷರಾದ ಡಾ. ಶೇಖರಗೌಡ ಮಾಲಿಪಾಟೀಲ್ ಉಪಸ್ಥಿತರಿರುತ್ತಾರೆ. ಮುಖ್ಯಕಾರ್ಯಕ್ರಮದಲ್ಲಿ ಇಡಿ ಜಿಲ್ಲೆಯನ್ನೊಳಗೊಂಡಂತೆ 7 ತಾಲ್ಲೂಕಿನಿಂದ ನಾಲ್ಕು ಜನರಂತೆ, 40 ಜನರನ್ನು ಈ ಸಪ್ತಾಹದಲ್ಲಿ ತೊಡಗಿಸಿಕೊಳ್ಳಲಾಗಿದೆ. ಅದರ ವಿವರಗಳನ್ನು ಲಗತ್ತಿಸಲಾಗಿದೆ.

ಇದರ ಹೊರತಾಗಿ ನಮ್ಮ ಊರು - ನಮ್ಮ ಜಿಲ್ಲೆ ಕುರಿತು ಕವನ ವಾಚನ ಮತ್ತು ಜಿಲ್ಲೆಯ ಪ್ರವಾಸಿ ತಾಣಗಳ ಬಗ್ಗೆ ಕಿರು ಲೇಖನಗಳನ್ನು ಬರೆದು ಕಳುಹಿಸಲು, ನಿಮ್ಮ ಮೂಲಕ ವಿನಂತಿಸಲಾಗುತ್ತಿದೆ. ಈಗಾಗಲೇ ಬರೆದಿದ್ದು, ಪತ್ರಿಕೆಗಳಲ್ಲಿ ಪ್ರಕಟವಾಗಿದ್ದು, ಪುಸ್ತಕ ರೂಪದಲ್ಲಿ ಬಾರದೆ ಇರುವ ಲೇಖನಗಳಿಗೆ ಸ್ವಾಗತವಿದೆ. ಲೇಖಕರು ತಮ್ಮ ಫೋಟೋ, ಲೇಖನ ಮತ್ತು ಲೇಖನಕ್ಕೆ ಸಂಬಂಧ ಛಾಯಾಚಿತ್ರಗೊಳಡನೆ ಸಂಸ್ಥೆಯ ವಿಳಾಸಕ್ಕೆ ಕಳುಹಿಸಬಹುದು. ವಿಶೇಷವಾಗಿ ಜ್ಯೂ. ಶಂಕರನಾಗ್, ಜ್ಯೂ. ರವಿಚಂದ್ರನ್ ತಲಾ ಒಂದೊಂದು ದಿನ ಜನರನ್ನು ನೃತ್ಯ, ಡೈಲಾಗ್ ಹಾಗೂ ಮಿಮಿಕ್ರಿ ಮೂಲಕ ರಂಜಿಸಲಿದ್ದಾರೆ.

ಸುಮಾರು 600 ಪುಟಗಳ ಈ ಪ್ರವಾಸಿ ಸಾಹಿತ್ಯ ಕೈಪಿಡಿ, ಮುಂಬರುವ ದಿನಗಳಲ್ಲಿ ಕೊಪ್ಪಳಕ್ಕೆ ಬರುವ ಪ್ರವಾಸಿಗರಿಗೆ ಮಾರ್ಗದರ್ಶಿಯಾಗಬಲ್ಲದು. ಪ್ರಸ್ತುತ ದಾವಣಗೆರೆ ಮತ್ತು ಬಾಗಲಕೋಟೆ ಚುನಾವಣೆ ನಿಮಿತ್ಯ ಅನೇಕ ಸಚಿವರು ಮತ್ತು ಜಿಲ್ಲೆಯ ಶಾಸಕರು ಬಿಜಿಯಾಗಿದ್ದರಿಂದ ಅನೇಕರನ್ನು ಆಮಂತ್ರಿಸಲಾಗಿದೆ. ಸಾಹಿತಿಗಳು, ಪೂಜ್ಯ ಸ್ವಾಮೀಜಿಗಳು ಮತ್ತು ಚಲನಚಿತ್ರ ಕಲಾವಿದರು ನಾಲ್ಕು ದಿನವು ವೇದಿಕೆ ಹಂಚಿಕೊಳ್ಳಲಿದ್ದು, ಸಮಾರಂಭದಲ್ಲಿ 400ಕ್ಕೂ ಹೆಚ್ಚು ರಾಜ್ಯಮಟ್ಟದ ಕಲಾವಿದರು, ವಿವಿಧ ಕಲಾ ಪ್ರಕಾರಗಳನ್ನು ಪ್ರಸ್ತುತ ಪಡಿಸಲಿದ್ದಾರೆ. ಇದರ ಹೊರತಾಗಿ ಮಳೆಮಲ್ಲೇಶ್ವರ ದೇವಸ್ಥಾನದ ಅಂಗಳದಲ್ಲಿ ವ್ಯಂಗ್ಯಚಿತ್ರ ಪ್ರದರ್ಶನ, ಕರಕುಶಲ ಪ್ರದರ್ಶನ, ಪುಸ್ತಕ ಪ್ರದರ್ಶನ, ಛಾಯಾಚಿತ್ರ ಪ್ರದರ್ಶನ ಜರುಗಲಿವೆ. ಪ್ರೇಕ್ಷಕರಾಗಿ ಬರಲು ಸಾರ್ವಜನಿಕರಿಗೆ ಮುಕ್ತ ಪ್ರವೇಶವಿದೆ. ಪ್ರತಿದಿನ ಮದ್ಯಾಹ್ನ ಸಿಹಿಯೊಂದಿಗೆ ಅನ್ನ ಪ್ರಸಾದವಿರುತ್ತದೆ.

ವಿಚಾರ ಸಂಕಿರಣದ ಮಾಹಿತಿ :

7-5-2026 ರಂದು “ಕೊಪ್ಪಳ ಜಿಲ್ಲೆಯ ಪ್ರವಾಸೋದ್ಯಮದ ಮೇಲೆ ಕಾರ್ಖಾನೆಗಳ ಕರಿನೆರಳು” ಅಧ್ಯಕ್ಷತೆ :

ಅಲ್ಲಮಪ್ರಭು ಬೆಟದೂರು, ಸಾಹಿತಿಗಳು, ಕೊಪ್ಪಳ. ವಿಷಯ ಮಂಡನೆ : ಮಲ್ಲಿಕಾರ್ಜುನ ಬಿ. ಗೋನಾಳ್, ಹೋರಾಟಗಾರರು, ಕೊಪ್ಪಳ, ರಾಜು ಬಾಕಳೆ, ವಕೀಲರು, ಕೊಪ್ಪಳ, ಶ್ರೀಮತಿ ಹನುಮಾಕ್ಷಿ ಗೋಗಿ, ಸಾಹಿತಿಗಳು, ಹೋರಾಟಗಾರರು ಕೊಪ್ಪಳ, ಮಂಜುನಾಥ ಗೊಂಡಬಾಳ, ಪತ್ರಕರ್ತರು, ಕೊಪ್ಪಳ, ಡಾ. ಮಂಜುನಾಥ ಸಜ್ಜನ್, ಜನಪ್ರಿಯ ವೈದ್ಯರು, ಕೊಪ್ಪಳ ವಿಷಯವನ್ನು ಮಂಡಿಸಲಿದ್ದಾರೆ.

8-5-2026 ರಂದು “ಕೊಪ್ಪಳ ಜಿಲ್ಲಾ ಪ್ರವಾಸೋದ್ಯಮಕ್ಕೆ ರಾಜಮನೆತನಗಳ ಕೊಡುಗೆ” ಅಧ್ಯಕ್ಷತೆ : ಈಶ್ವರ್ ಹತ್ತಿ, ರಂಗ ತಜ್ಞರು, ಸಾಹಿತಿಗಳು, ಕೊಪ್ಪಳ ಷಯ ಮಂಡನೆ : ಜೀವನಸಾಬ್ ವಾಲಿಕಾರ, ಸದಸ್ಯರು, ಕರ್ನಾಟಕ ಜಾನಪದ ಅಕಾಡೆಮಿ, ಕೊಪ್ಪಳ, ಶ್ರೀಮತಿ ಅರುಣಾ ನರೇಂದ್ರ, ಸಾಹಿತಿಗಳು, ಕೊಪ್ಪಳ, ಶ್ರೀ ಸೋಮರೆಡ್ಡಿ ಅಳವಂಡಿ, ಹಿರಿಯ ಪತ್ರಕರ್ತರು, ಕನ್ನಡ ಪ್ರಭ, ಕೊಪ್ಪಳ, ಕೆ.ಬಿ. ಬ್ಯಾಳಿ, ಶಿಕ್ಷಣ ತಜ್ಞರು, ಸಾಹಿತಿಗಳು, ಕುಕನೂರು ವಿಷಯವನ್ನು ಮಂಡಿಸಲಿದ್ದಾರೆ.

9-5-2026 ರಂದು “ಕೊಪ್ಪಳ ಜಿಲ್ಲಾ ಪ್ರವಾಸೋದ್ಯಮಕ್ಕೆ ಕೊಡುಗೆ ನೀಡಿದ ಧರ್ಮಗಳು”, ಅಧ್ಯಕ್ಷತೆ : ಡಾ. ಸಿದ್ಧಲಿಂಗಪ್ಪ ಕೊಟ್ನೆಕಲ್, ನಿವೃತ್ತ ಪ್ರಾಚಾರ್ಯರು, ಸಾಹಿತಿಗಳು, ಕೊಪ್ಪಳ, ವಿಷಯ ಮಂಡನೆ : ಪ್ರಕಾಶ ಬಳ್ಳಾರಿ, ಸಾಹಿತಿಗಳು, ಶಿಕ್ಷಣ ತಜ್ಞರು, ಕೊಪ್ಪಳ, ಶ್ರೀಮತಿ ವಿಜಯಲಕ್ಷ್ಮೀ ಕೊಟಗಿ, ಶಿಕ್ಷಕರು, ಲೇಖಕರು, ಕೊಪ್ಪಳ, ಸಂಗಮೇಶ ಬಾದವಾಡಗಿ, ಸಾಹಿತಿಗಳು, ಕೊಪ್ಪಳ ಮೂಲ, ಬೆಂಗಳೂರು ನಿವಾಸಿ, ಡಾ. ಮಹಂತೇಶ ನೆಲಾಗಣಿ, ಉಪನ್ಯಾಸಕರು, ಲೇಖಕರು, ಕೊಪ್ಪಳ ವಿಷಯವನ್ನು ಮಂಡಿಸಲಿದ್ದಾರೆ.

10-5-2026 ರಂದು “ಕೊಪ್ಪಳ ಜಿಲ್ಲಾ ಪ್ರವಾಸೋದ್ಯಮ ಹಾಗೂ ಮೂಲಭೂತ ಸೌಕರ್ಯಗಳು” ಅಧ್ಯಕ್ಷತೆ : ಡಾ. ವಿ.ಬಿ. ರಡ್ಡೇರ, ಶಿಕ್ಷಣ ತಜ್ಞರು, ಸಾಹಿತಿಗಳು, ಕೊಪ್ಪಳ ವಿಷಯ ಮಂಡನೆ : ಶ್ರೀಮತಿ ಸಾವಿತ್ರಿ ಮುಜುಮ್ದಾರ್, ಲೇಖಕರು, ಹೋರಾಟಗಾರ್ತಿ, ಕೊಪ್ಪಳ, ಡಾ. ರಾಜೇಂದ್ರ ಎಸ್. ಗಡಾದ, ಸಾಹಿತಿಗಳು, ಗದಗ, ಸಂತೋಷ್ ಕುಮಾರ್ ಮೆಹಂದಳೆ, ಸಾಹಿತಿಗಳು, ಕಾರವಾರ, ಬಸವರಾಜ್ ಪೂಜಾರ್, ಉಪನ್ಯಾಸಕರು, ಲೇಖಕರು, ಕೊಪ್ಪಳ ವಿಷಯವನ್ನು ಮಂಡಿಸಲಿದ್ದಾರೆ.

ಪ್ರವಾಸೋದ್ಯಮ ಕುರಿತು 16 ಉಪನ್ಯಾಸಗಳು :

ಕೊಪ್ಪಳ ತಾಲ್ಲೂಕು ವಿಷಯ : ಸಮಗ್ರ ಪ್ರವಾಸೋದ್ಯಮ ಮಾಹಿತಿ ಹಾಗೂ ಶ್ರೀ ಗವಿಮಠ ಮತ್ತು ಮಳೆಮಲ್ಲೇಶ್ವರ ದೇಗುಲ ಕುರಿತು ಪ್ರೊ. ಶರಣಬಸಪ್ಪ ಬಿಳಿಎಲಿ, ಸಾಹಿತಿಗಳು, ಶಿಕ್ಷಣ ತಜ್ಞರು, ಕೊಪ್ಪಳ, ಮಂಜುನಾಥ ಚಿತ್ರಗಾರ, ಸಾಹಿತಿಗಳು, ಶಿಕ್ಷಣ ತಜ್ಞರು, ಕೊಪ್ಪಳ.

ಯಲಬುರ್ಗಾ ತಾಲ್ಲೂಕು ವಿಷಯ : ಸಮಗ್ರ ಪ್ರವಾಸೋದ್ಯಮ ಮಾಹಿತಿ ಹಾಗೂ ಕಲ್ಲೂರಿನ ಕಲ್ಲಿನಾಥ ದೇಗುಲ ಕುರಿತು ಸಂಗಪ್ಪ ಎಂ. ಕೊಪ್ಪಳ, ಪ್ರವಚನಕಾರರು, ಯಲಬುರ್ಗಾ, ಶ್ರೀಮತಿ ಸುನಿತಾ ಪತಂಗರಾಯ, ಮುಖ್ಯ ಗುರುಗಳು, ಲೇಖಕರು, ಯಲಬುರ್ಗಾ.

ಕುಕನೂರು ತಾಲ್ಲೂಕು ವಿಷಯ : ಸಮಗ್ರ ಪ್ರವಾಸೋದ್ಯಮ ಮಾಹಿತಿ ಹಾಗೂ ಇಟಗಿ ಮಹಾದೇವ ಮತ್ತು ಮಹಾಮಾಯಾ ದೇಗುಲ ಕುರಿತು ಅಲ್ಲಾವುದ್ಧಿನ್ ಎಮ್ಮಿ, ಪತ್ರಕರ್ತರು, ಸಾಹಿತಿಗಳು, ಕುಕನೂರು, ಶ್ರೀ ಬಿ.ಎಂ. ಹಳ್ಳಿ, ಸಾಹಿತಿಗಳು, ಶಿಕ್ಷಣ ತಜ್ಞರು, ಸಾಹಿತಿಗಳು, ಇಟಗಿ.

ಕುಷ್ಟಗಿ ತಾಲ್ಲೂಕು ವಿಷಯ : ಸಮಗ್ರ ಪ್ರವಾಸೋದ್ಯಮ ಮಾಹಿತಿ ಹಾಗೂ ಪುರದ ಕೋಟಿ ಲಿ ಕುರಿತು ಡಾ. ನಾಗರಾಜ ಹೀರಾ, ಪ್ರಾಚಾರ್ಯರು, ಸಂಶೋಧಕರು, ಕುಷ್ಟಗಿ, ರವೀಂದ್ರ ಸಾ. ಬಾಕಳೆ, ಪತ್ರಕರ್ತರು, ಸಾಹಿತಿಗಳು, ಕುಷ್ಟಗಿ.

ಗಂಗಾವತಿ ತಾಲ್ಲೂಕು ವಿಷಯ : ಸಮಗ್ರ ಪ್ರವಾಸೋದ್ಯಮ ಮಾಹಿತಿ ಹಾಗೂ ಆನೆಗೊಂದಿ ಮತ್ತು ಅಂಜನಾದ್ರಿ, ಪಂಪಾ ಸರೋವರ ಕುರಿತು ಡಾ. ಶರಣಬಸಪ್ಪ ಕೋಲ್ಕಾರ, ಪ್ರಾಚಾರ್ಯರು, ಸಂಶೋಧಕರು, ಗಂಗಾವತಿ, ಡಾ. ದೇವೇಂದ್ರಪ್ಪ ಜಾಜಿ, ಸಹಾಯಕ ಪ್ರಾಧ್ಯಾಪಕರು, ಸಾಹಿತಿಗಳು, ಗಂಗಾವತಿ.

ಕಾರಿಟಗಿ ತಾಲ್ಲೂಕು ವಿಷಯ : ಸಮಗ್ರ ಪ್ರವಾಸೋದ್ಯಮ ಮಾಹಿತಿ ಹಾಗೂ ಬೀರೇಶ್ವರ ಶ್ರೀ ದೇವಿ ಗುಡ್ಡ, ಕುಂಟೋಜಿ ಸಂರಕ್ಷಿತ ಅರಣ್ಯ ಕುರಿತು ವಿರುಪಾಕ್ಷೇಶ್ವರ ಸ್ವಾಮಿ, ಸಾಹಿತಿಗಳು, ಶಿಕ್ಷಣ ತಜ್ಞರು, ಕಾರಿಟಗಿ, ರಮೇಶ ಬನ್ನಿಕೊಪ್ಪ, ಸಾಹಿತಿಗಳು, ಶಿಕ್ಷಣ ತಜ್ಞರು, ಕಾರಿಟಗಿ.

ಕನಕಗಿರಿ ತಾಲ್ಲೂಕು ವಿಷಯ : ಸಮಗ್ರ ಪ್ರವಾಸೋದ್ಯಮ ಮಾಹಿತಿ ಹಾಗೂ ಶ್ರೀ ಕನಕಾಚಲ ದೇಗುಲ ಕುರಿತು ಅಲ್ಲಾಗಿರಿರಾಜ್, ಕವಿಗಳು, ಪತ್ರಕರ್ತರು, ಕನಕಗಿರಿ, ನಾಗೇಶ ಪೂಜಾರ, ಸಂಶೋಧಕರು, ಕನಕಗಿರಿ

ಸಮಗ್ರ ಕೊಪ್ಪಳ ಜಿಲ್ಲಾ ವಿಶೇಷ ಉಪನ್ಯಾಸ ಕುರಿತು ಶ್ರೀ ವೀರಣ್ಣ ವಾಲಿ, ಸಾಹಿತಿಗಳು, ಕೊಪ್ಪಳ, ಅಕ್ಬರ್ ಕಾಲಿಮಿರ್ಚಿ, ಸಾಹಿತಿಗಳು, ಕೊಪ್ಪಳ, ಹುಸೇನ್ ಪಾಷಾ, ಪತ್ರಕರ್ತರು, ಕೊಪ್ಪಳ

ಉಪನ್ಯಾಸಗಳನ್ನು ಹೊರತು ಪಡಿಸಿ, ಕಿಷ್ಕಿಂದೆ, ವಾಲಿಗುಹೆ, ತುಂಗಭದ್ರ ಆಣೆಕಟ್ಟು, ಶ್ರೀ ಮಳೆಮಲ್ಲೇಶ್ವರ, ಅಶೋಕನ ಶಿಲಾ ಶಾಸನ, ಬೆಣಕಲ್ಲು ಶಿಲಾಯುಗದ ಕುರುಹುಗಳು, ಹುಲಿಗಿ ಹೀಗೆ ಇನ್ನಿತರ ಕೊಪ್ಪಳ ಜಿಲ್ಲೆಯ ಪ್ರವಾಸಿ ತಾಣಗಳ ಕುರಿತು 20ಕ್ಕೂ ಹೆಚ್ಚು ಲೇಖಕರ ಲೇಖನಗಳನ್ನು ಸೇರಿಸಿ, 500 ಪುಟಗಳ “ ಕೊಪ್ಪಳ ಜಿಲ್ಲಾ ಪ್ರವಾಸೋದ್ಯಮ ಮಾಹಿತಿ” ಪುಸ್ತಕ ಪ್ರಕಟಗೊಳ್ಳಲಿದೆ.

ಸಾಹಿತಿಯೊಂದಿಗೆ ಸಂವಾದ : “ವೈಜಯಂತಿಪುರ, ವಾತಾಪಿ, ವಿಕ್ರಮಾದಿತ್ಯ” ಕಾದಂಬರಿಗಳ ಲೇಖಕ ಹಾಗೂ ಸಂಶೋಧಕರಾದ ಸಂತೋಷ್ ಕುಮಾರ್ ಮೆಹಂದಳೆಯವರೊಂದಿಗೆ ಡಾ. ರಾಜೇಂದ್ರ ಎಸ್. ಗಡಾದ ನೆರವೇರಿಸಿಕೊಡಲಿದ್ದಾರೆ.

ಸಾಹಿತಿಗಳಾದ ಜಿ.ಎಸ್. ಗೋನಾಳ್ ನೇತೃತ್ವದಲ್ಲಿ ಕವನ ವಾಚನ ನಡೆಯಲಿದ್ದು, “ನಮ್ಮೂರು-ನಮ್ಮಜಿಲ್ಲೆ” ಹಾಗೂ ಸ್ವರಚಿತ ಕವನ ವಾಚನ (ಕವನ 20 ಸಾಲಿನೊಳಗಿರಬೇಕು. ಕವನ ಡಿಟಿಪಿ ಮಾಡಿಸಿ, ವಿಳಾಸ ಮತ್ತು 2 ಫೋಟೋದೊಂದಿಗೆ ಕೊಡಬೇಕು)

ಕೊಪ್ಪಳ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷರಾದ ರುದ್ರಪ್ಪ ಭಂಡಾರಿ ನೇತೃತ್ವದಲ್ಲಿ ಚುಟುಕು ಕವನ ವಾಚನ ಸ್ವರಚಿತ ಚುಟುಕು ವಾಚನ (4 ಸಾಲಿನ 3 ಚುಟುಕುಗಳನ್ನು ಓದಲು ಮತ್ತು ಡಿಟಿಪಿ ಮಾಡಿಸಿ, ವಿಳಾಸ ಮತ್ತು 2 ಫೋಟೋದೊಂದಿಗೆ ಕೊಡಬೇಕು)

ಈ ಸಂಪೂರ್ಣ ಪ್ರವಾಸೋದ್ಯಮ ಸಪ್ತಾಹ ಮತ್ತು 12ನೇ ಮಕ್ಕಳ ಸಮ್ಮೇಳನ ಮತ್ತು ಎಲ್ಲಾ ಸಾಂಸ್ಕøತಿಕ ಸಮ್ಮೇಳನದ ಕಾರ್ಯಕ್ರಮದ ಮಾಹಿತಿಯನ್ನು ಪತ್ರಿಕಾ ಗೋಷ್ಠಿಯಲ್ಲಿ ಸಂಸ್ಥೆಯ ಅಧ್ಯಕ್ಷರಾದ ರಮೇಶ ಸುರ್ವೆಯವರು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande