ಉತ್ಸಾಹ–ಸಕಾರಾತ್ಮಕ ಶಕ್ತಿ ಯಶಸ್ಸಿನ ಮಂತ್ರ : ಪ್ರಧಾನಿ ಮೋದಿ
ನವದೆಹಲಿ, 30 ಏಪ್ರಿಲ್ (ಹಿ.ಸ.) : ಆ್ಯಂಕರ್ : ದೇಶದ ಅಭಿವೃದ್ಧಿಗೆ ನಾಗರಿಕರ ಉತ್ಸಾಹ, ಪರಿಶ್ರಮ ಮತ್ತು ಸಕಾರಾತ್ಮಕ ಮನೋಭಾವವೇ ಮುಖ್ಯ ಚಾಲಕಶಕ್ತಿಯಾಗಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ. ಗುರುವಾರ ಎಕ್ಸನಲ್ಲಿ ಸಂದೇಶ ಹಂಚಿಕೊಂಡಿರುವ ಅವರು, ಉತ್ಸಾಹ ಮತ್ತು ಸಕಾರಾತ್ಮಕ ಶಕ್ತಿ ವ
Pm


ನವದೆಹಲಿ, 30 ಏಪ್ರಿಲ್ (ಹಿ.ಸ.) :

ಆ್ಯಂಕರ್ : ದೇಶದ ಅಭಿವೃದ್ಧಿಗೆ ನಾಗರಿಕರ ಉತ್ಸಾಹ, ಪರಿಶ್ರಮ ಮತ್ತು ಸಕಾರಾತ್ಮಕ ಮನೋಭಾವವೇ ಮುಖ್ಯ ಚಾಲಕಶಕ್ತಿಯಾಗಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.

ಗುರುವಾರ ಎಕ್ಸನಲ್ಲಿ ಸಂದೇಶ ಹಂಚಿಕೊಂಡಿರುವ ಅವರು, ಉತ್ಸಾಹ ಮತ್ತು ಸಕಾರಾತ್ಮಕ ಶಕ್ತಿ ವ್ಯಕ್ತಿಯನ್ನು ಸದಾ ಚುರುಕಾಗಿ ಮತ್ತು ಕ್ರಿಯಾಶೀಲವಾಗಿರಿಸುತ್ತದೆ. ಇವುಗಳೇ ವ್ಯಕ್ತಿಯ ಯಶಸ್ಸಿನ ಮೂಲ ಗುಣಗಳು ಎಂದು ತಿಳಿಸಿದ್ದಾರೆ. ಶ್ರಮಪಟ್ಟು ದುಡಿಯುವ ಶಕ್ತಿಯುತ ನಾಗರಿಕರೇ ರಾಷ್ಟ್ರದ ಅತಿದೊಡ್ಡ ಬಲವಾಗಿದ್ದು, ಅವರ ಪರಿಶ್ರಮ ದೇಶದ ಅಭಿವೃದ್ಧಿಗೆ ಹೊಸ ದಾರಿಗಳನ್ನು ತೆರೆದಿಡುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.

ಸಂಸ್ಕೃತದ ಗಾದೆಯನ್ನು ಉಲ್ಲೇಖಿಸಿದ ಅವರು, “ಅನಿರ್ವೇದೋ ಹೀ ಸತತಂ ಸರ್ವಾರ್ಥಮೇ ಪ್ರವರ್ತಕಃ” ಎಂಬ ಮಾತಿನ ಅರ್ಥವನ್ನು ವಿವರಿಸಿ, ನಿರಂತರ ಉತ್ಸಾಹವೇ ಎಲ್ಲ ಸಾಧನೆಗಳಿಗೆ ಚಾಲನೆ ನೀಡುತ್ತದೆ ಎಂದು ಹೇಳಿದರು. ವ್ಯಕ್ತಿಯೊಳಗಿನ ಈ ಅಚಲ ಶಕ್ತಿ, ಅವನ ಸಂಕಲ್ಪಗಳನ್ನು ಸಾಧನೆಗಳಾಗಿ ರೂಪಾಂತರಿಸುತ್ತದೆ ಎಂದು ಅವರು ಹೇಳಿದರು.

ನಾಗರಿಕರು ತಮ್ಮ ಕೆಲಸಗಳಲ್ಲಿ ಸ್ಥಿರತೆ, ಶಕ್ತಿ ಮತ್ತು ಸಕಾರಾತ್ಮಕ ಮನೋಭಾವವನ್ನು ಉಳಿಸಿಕೊಂಡರೆ, ವೈಯಕ್ತಿಕ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಪ್ರಗತಿ ಸಾಧ್ಯವಾಗುತ್ತದೆ ಎಂದು ಪ್ರಧಾನಿ ಕರೆ ನೀಡಿದರು. ಈ ರೀತಿಯ ಸಮೂಹ ಪ್ರಯತ್ನಗಳಿಂದ ದೇಶವು ಸ್ವಾವಲಂಬನೆ, ಸಮೃದ್ಧಿ ಮತ್ತು ಪ್ರಗತಿಯ ಶಿಖರ ತಲುಪಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande