ಪಂಚ ರಾಜ್ಯ ಚುನಾವಣೆ ; ತಮಿಳುನಾಡು, ಕೇರಳದಲ್ಲಿ ಇಂಡಿಯಾ ಮೈತ್ರಿಗೆ ಗೆಲುವು-ಖರ್ಗೆ
ಕಲಬುರಗಿ, 30 ಏಪ್ರಿಲ್ (ಹಿ.ಸ.) : ಆ್ಯಂಕರ್ : ಪಂಚರಾಜ್ಯ ಚುನಾವಣೆಯ ಫಲಿತಾಂಶ ಕುರಿತು ಕೆಲವು ಕಡೆ ಇನ್ನೂ ಗೊಂದಲ ಇರುವುದಾಗಿ ವರದಿಗಳು ಬಂದಿದ್ದರೂ, ಮೇ ೪ರಂದು ಸ್ಪಷ್ಟ ಚಿತ್ರ ಸಿಗಲಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. ಕಲಬುರಗಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮ
Kharge


ಕಲಬುರಗಿ, 30 ಏಪ್ರಿಲ್ (ಹಿ.ಸ.) :

ಆ್ಯಂಕರ್ : ಪಂಚರಾಜ್ಯ ಚುನಾವಣೆಯ ಫಲಿತಾಂಶ ಕುರಿತು ಕೆಲವು ಕಡೆ ಇನ್ನೂ ಗೊಂದಲ ಇರುವುದಾಗಿ ವರದಿಗಳು ಬಂದಿದ್ದರೂ, ಮೇ ೪ರಂದು ಸ್ಪಷ್ಟ ಚಿತ್ರ ಸಿಗಲಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

ಕಲಬುರಗಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ತಮಿಳುನಾಡು ಮತ್ತು ಕೇರಳ ರಾಜ್ಯಗಳಲ್ಲಿ ಕಾಂಗ್ರೆಸ್ ಮೈತ್ರಿಕೂಟ ಗೆಲುವು ಸಾಧಿಸುವ ವಿಶ್ವಾಸ ವ್ಯಕ್ತಪಡಿಸಿದರು.

“ಅಸ್ಸಾಂನಲ್ಲಿ ನಮಗೆ ಕಡಿಮೆ ಸ್ಥಾನಗಳು ಸಿಗುತ್ತವೆ ಎಂದು ಚುನಾವಣೋತ್ತರ ಸಮೀಕ್ಷೆಗಳು ಹೇಳುತ್ತಿದ್ದರೂ, ನಾವು ಅದಕ್ಕಿಂತ ಹೆಚ್ಚು ಸೀಟುಗಳನ್ನು ಗೆಲ್ಲುತ್ತೇವೆ,” ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪಶ್ಚಿಮ ಬಂಗಾಳ ರಾಜಕೀಯ ಪರಿಸ್ಥಿತಿಯನ್ನು ಉಲ್ಲೇಖಿಸಿದ ಖರ್ಗೆ, “ಅಲ್ಲಿ ತೃಣಮೂಲ ಕಾಂಗ್ರೆಸ್ ಮುನ್ನಡೆ ಸಾಧಿಸುವ ಸಾಧ್ಯತೆ ಇದೆ. ಎನ್ಡಿಎ ಪಕ್ಷಗಳು ಟಿಎಂಸಿಗೆ ಕಠಿಣ ಪೈಪೋಟಿ ನೀಡಿವೆ. ನಾವು ಈ ಬಾರಿ ಮೊದಲ ಬಾರಿಗೆ ಒಂಟಿಯಾಗಿ ಸ್ಪರ್ಧಿಸಿದ್ದೆವೆ” ಎಂದರು. ಬಿಜೆಪಿ ಹಾಗೂ ಟಿಎಂಸಿ ಎರಡೂ ಪಕ್ಷಗಳು ಗೆಲುವಿನ ವಿಶ್ವಾಸ ವ್ಯಕ್ತಪಡಿಸುತ್ತಿವೆ. “ಇನ್ನೂ ಎರಡು ದಿನ ಕಾಯೋಣ, ನಂತರ ಸ್ಪಷ್ಟ ಚಿತ್ರ ಸಿಗಲಿದೆ. ಸಂಪೂರ್ಣ ಫಲಿತಾಂಶ ಬಂದ ಬಳಿಕ ಪಶ್ಚಿಮ ಬಂಗಾಳದಲ್ಲಿ ಟಿಎಂಸಿಗೆ ಬೆಂಬಲ ನೀಡುವ ಕುರಿತು ಚರ್ಚಿಸುತ್ತೇವೆ,” ಎಂದು ಹೇಳಿದರು

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande