ಕೇಂದ್ರದ ಅಧಿಕಾರ ಬಳಸಿ ಚುನಾವಣೆ ಗೆಲ್ಲಲು ಬಿಜೆಪಿ ಯತ್ನ : ಮಮತಾ ಬ್ಯಾನರ್ಜಿ
ಕೋಲ್ಕತ್ತಾ, 25 ಏಪ್ರಿಲ್ (ಹಿ.ಸ.) : ಆ್ಯಂಕರ್ : ಪಶ್ಚಿಮ ಬಂಗಾಳ ವಿಧಾನ ಸಭಾ ಚುನಾವಣಾ ಪ್ರಚಾರದ ಮಧ್ಯೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಶನಿವಾರ ಹೂಗ್ಲಿ ಜಿಲ್ಲೆಯ ಉತ್ತರಪಾರದಲ್ಲಿ ನಡೆದ ಸಾರ್ವಜನಿಕ ರ್ಯಾಲಿಯಲ್ಲಿ ತೃಣಮೂಲ ಕಾಂಗ್ರೆಸ್ ಅಭ್ಯರ್ಥಿ ಶಿರ್ಷ್ಣಯ್ ಬಂಡೋಪಾಧ್ಯಾಯ ಪರ ಪ್ರಚಾರ ನಡೆಸಿ,
ಮಮತಾ ಬ್ಯಾನರ್ಜಿ


ಕೋಲ್ಕತ್ತಾ, 25 ಏಪ್ರಿಲ್ (ಹಿ.ಸ.) :

ಆ್ಯಂಕರ್ : ಪಶ್ಚಿಮ ಬಂಗಾಳ ವಿಧಾನ ಸಭಾ ಚುನಾವಣಾ ಪ್ರಚಾರದ ಮಧ್ಯೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಶನಿವಾರ ಹೂಗ್ಲಿ ಜಿಲ್ಲೆಯ ಉತ್ತರಪಾರದಲ್ಲಿ ನಡೆದ ಸಾರ್ವಜನಿಕ ರ್ಯಾಲಿಯಲ್ಲಿ ತೃಣಮೂಲ ಕಾಂಗ್ರೆಸ್ ಅಭ್ಯರ್ಥಿ ಶಿರ್ಷ್ಣಯ್ ಬಂಡೋಪಾಧ್ಯಾಯ ಪರ ಪ್ರಚಾರ ನಡೆಸಿ, ಭಾರತೀಯ ಜನತಾ ಪಕ್ಷ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, “ಚುನಾವಣೆ ಗೆಲ್ಲಲು ಬಿಜೆಪಿ ಕೇಂದ್ರ ಸಂಸ್ಥೆಗಳು, ಭದ್ರತಾ ಪಡೆಗಳು ಮತ್ತು ಸಂಪನ್ಮೂಲಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ” ಎಂದು ಆರೋಪಿಸಿದರು.

ಹಲವಾರು ಮುಖ್ಯಮಂತ್ರಿಗಳು, ಕೇಂದ್ರ ಮಂತ್ರಿಗಳು ಮತ್ತು ಹೆಲಿಕಾಪ್ಟರ್ಗಳನ್ನು ಪ್ರಚಾರಕ್ಕೆ ಬಳಸಲಾಗುತ್ತಿದೆ ಎಂದು ಹೇಳಿ, ಅಂತಿಮ ತೀರ್ಪು ಮತದಾರರದ್ದೇ ಎಂದು ಒತ್ತಿ ಹೇಳಿದರು.

ನಂದಿಗ್ರಾಮ ಮತ್ತು ಭವಾನಿಪುರ ಕ್ಷೇತ್ರಗಳನ್ನು ಉಲ್ಲೇಖಿಸಿದ ಮಮತಾ ಬ್ಯಾನರ್ಜಿ, ಪ್ರತಿ ಪಕ್ಷಗಳು ಮತದಾನ ಪ್ರಕ್ರಿಯೆಯನ್ನು ಪ್ರಭಾವಿಸಲು ಪ್ರಯತ್ನಿಸುತ್ತಿವೆ ಎಂದು ಆರೋಪಿಸಿ, “ಜನರು ಅಂತಹ ಪ್ರಯತ್ನಗಳನ್ನು ವಿಫಲಗೊಳಿಸಲಿದ್ದಾರೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಉದ್ಯೋಗ ಮತ್ತು ಕೈಗಾರಿಕಾ ಅಭಿವೃದ್ಧಿ ವಿಷಯಗಳನ್ನೂ ಅವರು ಪ್ರಸ್ತಾಪಿಸಿದರು. ಪಶ್ಚಿಮ ಬಂಗಾಳದಲ್ಲಿ ನಿರುದ್ಯೋಗ ಪ್ರಮಾಣ ಕಡಿಮೆಯಾಗಿದ್ದು, ಹೊಸ ಕೈಗಾರಿಕೆಗಳು ನಿರಂತರವಾಗಿ ಸ್ಥಾಪನೆಯಾಗುತ್ತಿವೆ ಎಂದು ಹೇಳಿದರು. ಹೌರಾದಿಂದ ಬರ್ಧಮಾನ್ವರೆಗೆ ಅಭಿವೃದ್ಧಿ ಸ್ಪಷ್ಟವಾಗಿದ್ದು, ಹಿಂದ್ಮೋಟರ್ ಪ್ರದೇಶದಲ್ಲಿ ಹೊಸ ಕಾರ್ಖಾನೆಗಳು ಆರಂಭಗೊಂಡಿದ್ದು ಭವಿಷ್ಯದಲ್ಲಿ ಹೆಚ್ಚಿನ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ ಎಂದರು.

ಕೇಂದ್ರ ಸರ್ಕಾರದ ಯೋಜನೆಗಳ ಬಗ್ಗೆ ಟೀಕೆ ಮಾಡಿದ ಅವರು, “ಚುನಾವಣಾ ಸಮಯದಲ್ಲಿ ಘೋಷಣೆಗಳು ಬರುತ್ತವೆ, ಆದರೆ ಲಾಭಗಳನ್ನು ಸಮಾನವಾಗಿ ವಿತರಿಸಲಾಗುವುದಿಲ್ಲ” ಎಂದು ಆರೋಪಿಸಿದರು. ಪೆಟ್ರೋಲ್ ಬೆಲೆ ಹಾಗೂ ಹಣದುಬ್ಬರದ ವಿಚಾರವನ್ನೂ ಎತ್ತಿದರು.

ಪ್ರಜಾಪ್ರಭುತ್ವದಲ್ಲಿ ಮತದಾರರು ಮುಕ್ತ ವಾತಾವರಣದಲ್ಲಿ ಮತ ಚಲಾಯಿಸಬೇಕು ಎಂದು ಹೇಳಿದ ಅವರು, ಪೊಲೀಸ್ ಆಡಳಿತವು ಸಂಯಮದಿಂದ ವರ್ತಿಸಬೇಕೆಂದು ಮನವಿ ಮಾಡಿದರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande