ಸೌದಿ ಭೇಟಿಯಲ್ಲಿ ಅಜಿತ್ ದೋವಲ್ ; ದ್ವಿಪಕ್ಷೀಯ ಸಂಬಂಧ, ಪ್ರಾದೇಶಿಕ ಸ್ಥಿತಿಗತಿ ಕುರಿತು ಚರ್ಚೆ
ನವದೆಹಲಿ, 20 ಏಪ್ರಿಲ್ (ಹಿ.ಸ.) : ಆ್ಯಂಕರ್ : ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರು ಸೌದಿ ಅರೇಬಿಯಾ ಪ್ರವಾಸದ ಅಂಗವಾಗಿ ಭಾನುವಾರ ರಿಯಾದ್ ಗೆ ಆಗಮಿಸಿದರು. ರಿಯಾದ್ ವಿಮಾನ ನಿಲ್ದಾಣದಲ್ಲಿ ಭಾರತ ರಾಯಭಾರಿ ಡಾ. ಸುಹೇಲ್ ಖಾನ್ ಹಾಗೂ ಸೌದಿ ಅರೇಬಿಯಾದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ರಾಜಕ
Doval


ನವದೆಹಲಿ, 20 ಏಪ್ರಿಲ್ (ಹಿ.ಸ.) :

ಆ್ಯಂಕರ್ : ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರು ಸೌದಿ ಅರೇಬಿಯಾ ಪ್ರವಾಸದ ಅಂಗವಾಗಿ ಭಾನುವಾರ ರಿಯಾದ್ ಗೆ ಆಗಮಿಸಿದರು.

ರಿಯಾದ್ ವಿಮಾನ ನಿಲ್ದಾಣದಲ್ಲಿ ಭಾರತ ರಾಯಭಾರಿ ಡಾ. ಸುಹೇಲ್ ಖಾನ್ ಹಾಗೂ ಸೌದಿ ಅರೇಬಿಯಾದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ರಾಜಕೀಯ ವ್ಯವಹಾರಗಳ ಉಪ ಸಚಿವ ಡಾ. ಸೌದ್ ಅಲ್-ಸತಿ ಅವರು ಅಜಿತ್ ದೋವಲ್ ಅವರನ್ನು ಸ್ವಾಗತಿಸಿದರು.

ಏಪ್ರಿಲ್ 19ರಂದು ಅಜಿತ್ ದೋವಲ್ ಅವರು ರಿಯಾದ್ ಗೆ ಅಧಿಕೃತ ಭೇಟಿ ನೀಡಿದ್ದು, ಈ ಬಗ್ಗೆ ಸೌದಿ ಅರೇಬಿಯಾದಲ್ಲಿರುವ ಭಾರತೀಯ ರಾಯಭಾರ ಕಚೇರಿ ‘ಎಕ್ಸ್’ನಲ್ಲಿ ಮಾಹಿತಿ ನೀಡಿದೆ.

ಈ ಭೇಟಿಯ ಸಂದರ್ಭದಲ್ಲಿ ಅವರು ಸೌದಿ ಅರೇಬಿಯಾದ ಇಂಧನ ಸಚಿವ ರಾಜಕುಮಾರ ಅಬ್ದುಲ್ ಅಜೀಜ್ ಬಿನ್ ಸಲ್ಮಾನ್, ವಿದೇಶಾಂಗ ಸಚಿವ ರಾಜಕುಮಾರ ಫೈಸಲ್ ಬಿನ್ ಫರ್ಹಾನ್ ಹಾಗೂ ರಾಷ್ಟ್ರೀಯ ಭದ್ರತಾ ಸಲಹೆಗಾರರೊಂದಿ ಗೆ ಮಹತ್ವದ ಮಾತುಕತೆ ನಡೆಸಿದರು.

ಈ ಸಭೆಗಳಲ್ಲಿ ಭಾರತ ಮತ್ತು ಸೌದಿ ಅರೇಬಿಯಾ ನಡುವಿನ ದ್ವಿಪಕ್ಷೀಯ ಸಂಬಂಧವನ್ನು ಮತ್ತಷ್ಟು ಬಲಪಡಿಸುವ ಬಗ್ಗೆ ಎರಡೂ ದೇಶಗಳ ನಾಯಕರು ಒತ್ತು ನೀಡಿದರು.

ಇದೇ ವೇಳೆ ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷ, ಪ್ರಾದೇಶಿಕ ಭದ್ರತಾ ಪರಿಸ್ಥಿತಿ ಹಾಗೂ ಪರಸ್ಪರ ಹಿತಾಸಕ್ತಿಯ ಇತರ ಪ್ರಮುಖ ವಿಷಯಗಳ ಕುರಿತೂ ಚರ್ಚೆಗಳು ನಡೆದವು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande