
ಕೋಲಾರ, ೨೦ ಏಪ್ರಿಲ್ (ಹಿ.ಸ) :
ಆ್ಯಂಕರ್ : ಎಂಟು ನೂರು ವರ್ಷಗಳ ಬಳಿಕ ಸಹ ಬಸವಣ್ಣನವರ ಬದುಕು ಮತ್ತು ಆದರ್ಶಗಳನ್ನು ಕಲಿಯಬೇಕಾಗಿದೆ. ಕಾರಣ ಅವರು ಮನುಷ್ಯರ ನೋವಿನ ಬಗ್ಗೆ ಚಿಂತನೆ ನಡೆಸಿ ಪರಿಹಾರ ಕಂಡುಹಿಡಿದರು. ಅದರಿಂದಾಗಿ ಅವರು ಇಂದಿಗೂ ಪ್ರಸ್ತುತ ಆಗಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅಭಿಪ್ರಾಯಪಟ್ಟರು.
ಜಿಲ್ಲಾಡಳಿತದಿಂದ ನಡೆದ ಬಸವ ಜಯಂತಿ ಉದ್ಘಾಟಿಸಿ ಮಾತನಾಡಿದ ಅವರು ಬಸವಣ್ಣ ಆಡು ಭಾಷೆಯಲ್ಲಿ ಸಾಮಾನ್ಯರಿಗೆ ಅರ್ಥ ಆಗುವ ರೀತಿಯಲ್ಲಿ ನೀಡಿರುವ ವಚನ ಸಾಹಿತ್ಯ ಸಮಾಜದ ಕಟ್ಟ ಕಡೆಯ ಜನರರಿಗೂ ತಲುಪುವಂತಾಗುವ ಮೂಲಕ ಹೆಚ್ಚು ಪ್ರಸ್ತುತವಾಗಿದೆ ಎಂದರು. ಸಮಾನತೆಯ ಕಾಯಕ ಮತ್ತು ಸತ್ಯದ ಮೇಲೆ ಹೋರಾಡುತ್ತಿದ್ದ ಶಿವಶರಣರ ವಿರುದ್ಧ ಷಡ್ಯಂತ್ರ ಕೆಲಸ ಮಾಡಲಿಲ್ಲ. ಅಸಮಾನತೆ,ಜಾತೀಯತೆ ಬಗ್ಗೆ ಬರೆದ ವಚನಗಳು ಆತ್ಮಸಾಕ್ಷಿಯನ್ನೇ ತಟ್ಟಿದ್ದು ಹೀಗಾಗಿ ಬಸವಣ್ಣ ಸಾಮಾಜಿಕ ಬದಲಾವಣೆಯ ಹರಿಕಾರರಾದರು ಎಂದರು.
ನುಡಿದ0ತೆ ನಡೆದ ಬಸವಣ್ಣನನ್ನು ಸಮಾಜ ಬದುಕಲು ಬಿಡಲಿಲ್ಲ. ಇಂದು ಸಮಾನತೆ ಕೇಳುವ ನಾವು ಬಸವಣ್ಣನ ನಿಲುವಿನ ಕುರಿತು ಆತ್ಮಾವಲೋಕನ ಮಾಡಿಕೊಳ್ಳಬೇಕು. ಕಾಯಕ, ಆದರ್ಶ, ಸಮಾನತೆಯನ್ನು ಮರೆತಿರುವ ಜನತೆ ಬಸವಣ್ಣನ ತತ್ವಗಳ ವಿರುದ್ಧ ಹೊರಟಿದ್ದು ಸತ್ಯ, ಪ್ರಾಮಾಣಿಕ ದುಡಿಮೆ ಮೂಲಕ ಜನತೆ ಜೀವನ ಮಟ್ಟವನ್ನು ಸುಧಾರಿಸಿಕೊಳ್ಳಬೇಕು. ಶರಣರ ಸಾಹಿತ್ಯ ಮತ್ತು ವಚನಗಳು ಮನಸಿಗೆ ಹತ್ತಿರವಾಗುವ ಜತೆಗೆ ಸಮಾಜವನ್ನು ಒಂದು ಮಾಡುತ್ತದೆ. ಜಾತಿ ಮತ್ತು ಅಸಮಾನತೆ ತೊಲಗಿದಾಗ ಹುಟ್ಟಿಗೆ ಅರ್ಥ ಬರುತ್ತದೆ. ಮನುಷ್ಯ ಮನುಷ್ಯನಾಗಿ ಬದುಕುವ ಮೂಲಕ ಸಮಾಜದಲ್ಲಿ ಒಂದಾಗಿ ಎಲ್ಲರೊಂದಿಗೆ ಒಟ್ಟಾಗಿ ಸಹಬಾಳ್ವೆ ನಡೆಸಲು ಸಾಧ್ಯವಾಗುತ್ತದೆ ಎಂದು ಡಿಸಿ ರವಿ ಹೇಳಿದರು.
ನಾಗಲಾಪುರ ಮಠದ ತೇಜೇಶಲಿಂಗ ವೀರಶೈವ ಶ್ರೀಗಳು ಮಾತನಾಡಿ, ಬಸವಣ್ಣನವರ ವಚನ ಸಾಹಿತ್ಯದ ಮೂಲಕ ಜೀವನವನ್ನು ತಿಳಿದುಕೊಳ್ಳಲು ಪ್ರಯತ್ನಿಸಬೇಕು. ಅಸಮಾನತೆ, ಜಾತಿಯತೆ, ಮೇಲುಕೀಳು ಭಾವನೆಗಳನ್ನು ಬಿಟ್ಟು ಎಲ್ಲರೂ ಒಂದೇ ಎಂದು ತಿಳಿದು ಜೀವನವನ್ನು ನಡೆಸಬೇಕು. ಅಸಮಾನತೆ, ಅಸ್ಪೃಶ್ಯತೆ, ಜಾತೀಯತೆ ಮುಂತಾದವುಗಳನ್ನು ಮನಸಿಂದ ತೊಡೆದು ಹಾಕಿ ಸಮಾಜದಲ್ಲಿ ಶಾಂತಿಯಿ0ದ ಜೀವನವನ್ನು ನಡೆಸಲು ನಿರ್ಧರಿಸಬೇಕು ಎಂದು ಶ್ರೀಗಳು ಹೇಳಿದರು.
ಸಮಾಜ ಸೇವಕ ಸಿಎಂಆರ್ ಶ್ರೀನಾಥ್ ಮಾತನಾಡಿ, ಜಾತಿ,ಅಸಮಾನತೆಯನ್ನು ಹೋಗಲಾಡಿಸಿ ಸಹಭಾಳ್ವೆಯ ಸತ್ಯ ಸಂದೇಶ ನೀಡಿದ ಬಸವಣ್ಣನ ವಚನಗಳು ಇಂದು ಜಾಗತಿಕ ಮಟ್ಟದಲ್ಲೂ ಮನ್ಯತೆ ಪಡೆದುಕೊಂಡಿದ್ದು ಅನುಭವ ಮಂಟಪದ ಮೂಲಕ ಸಂವಿಧಾನ ಹಾಗೂ ಪ್ರಜಾಪ್ರಭುತ್ವದ ನಿಲುವು ತಾಳಿದ ಮಾನವತಾವಾದಿ ನಡೆಗೆ ಇಂದು ವಿರುದ್ಧವಾಗಿ ನಡೆದುಕೊಳ್ಳಲಾಗುತ್ತಿದೆ. ಹೀಗಾಗಿ ಪರಿವರ್ತನೆ ಮೂಲಕ ಸಮಾಜದಲ್ಲಿ ಸುಧಾರಣೆ ಕಾಣಲು ನಾವೆಲ್ಲಾ ಪಣ ತೊಡಬೇಕಾಗಿದೆ ಎಂದು ಶ್ರೀನಾಥ್ ನುಡಿದರು.
ಉಪನ್ಯಾಸಕ ನಾಗಾನಂದಕೆ0ಪರಾಜ್ ಬಸವಣ್ಣನ ಕುರಿತು ಮಾತನಾಡಿದರು. ಜಿಲ್ಲಾ ಪಂಚಾಯತಿ ಯೋಜನಾ ನಿರ್ದೇಶಕ ರವಿಚಂದ್ರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ವಿಜಯಲಕ್ಷಿö್ಮ, ವಾರ್ತಾ ಇಲಾಖೆ ಅಧಿಕಾರಿ ಮಂಜೇಶ್, ಅಖಿಲ ಭಾರತ ವೀರಶೈವ ಮಹಾಸಭಾ ಮಹಿಳಾ ಘಟಕದ ಸೆಂಟ್ರಲ್ ಕಮಿಟಿ ಮಾಜಿ ಉಪಾಧ್ಯಕ್ಷೆ ಪ್ರಮೀಳಾ ಮಲ್ಲಿಕಾರ್ಜುನ್, ವೀರಶೈವ ಲಿಂಗಾಯಿತ ಸಮಾಜದ ಮುಖಂಡರಾದ ಚನ್ನಪ್ಪ, ಪಿಟಿಐ ಸುರೇಶ್, ಒಡೆಯರ್, ರಾಮಸಂದ್ರ ಕುಮಾರ್, ಬಿಜೆಪಿ ಶಿವಕುಮಾರ್, ಪತ್ರಕರ್ತ ನವೀನ್ಕುಮಾರ್ ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್