ಮಹಿಳಾ ಮೀಸಲಾತಿ ವಿರೋಧಿಸಿದ ಕಾಂಗ್ರೆಸ್ ವಿರುದ್ಧ ಬಿಜೆಪಿ ಪ್ರತಿಭಟನೆ
ಮಹಿಳಾ ಮೀಸಲಾತಿ ವಿರೋಧಿಸಿದ ಕಾಂಗ್ರೆಸ್ ವಿರುದ್ಧ ಬಿಜೆಪಿ ಪ್ರತಿಭಟನೆ
ಸಂಸತ್ತಿನಲ್ಲಿ ಮಹಿಳಾ ಮೀಸಲಾತಿಯನ್ನು ವಿರೋಧಿಸಿದ ಕಾಂಗ್ರೆಸ್ ನಡೆಯನ್ನು ಖಂಡಿಸಿ ಕೋಲಾರದಲ್ಲಿ ಬಿಜೆಪಿಯಿಂದ ಪ್ರತಿಭಟನೆ ನಡೆಸಲಾಯಿತು.


ಕೋಲಾರ, ೨೦ ಏಪ್ರಿಲ್ (ಹಿ.ಸ) :

ಆ್ಯಂಕರ್ : ಕೇಂದ್ರದ ಮೋದಿ ನೇತೃತ್ವದ ಸರ್ಕಾರ ಸಂಸತ್ನಲ್ಲಿ ಮಂಡಿಸಿದ್ದ `ನಾರಿಶಕ್ತಿ ವಂದನ್'ಮಸೂದೆಗೆ ಅಡ್ಡಿಪಡಿಸುವ ಮೂಲಕ ದೇಶದ ಮಹಿಳೆಯರ ಸ್ವಾಭಿಮಾನಕ್ಕೆ ಧಕ್ಕೆ ತಂದು ಮಹಾದ್ರೋಹ ಬಗೆದಿರುವ ಭ್ರಷ್ಟ ಕಾಂಗ್ರೆಸ್ ಮತ್ತವರ ಬೆಂಬಲಿಗ ಪಕ್ಷಗಳನ್ನು ಚುನಾವಣೆಯಲ್ಲಿ ಬಹಿಷ್ಕರಿಸಲು ಬಿಜೆಪಿ ಮುಖಂಡರು ಕರೆ ನೀಡಿದರು.

ನಗರದ ಬಸ್ನಿಲ್ದಾಣ ವೃತ್ತದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಓಂಶಕ್ತಿ ಚಲಪತಿ, ಮಾಜಿ ಸಚಿವ ವರ್ತೂರು ಪ್ರಕಾಶ್,ಮಾಜಿ ಸಂಸದ ಎಸ್.ಮುನಿಸ್ವಾಮಿ ಅವರ ಪತ್ನಿ ಶೈಲಜ ಮುನಿಸ್ವಾಮಿ, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಅರುಣಮ್ಮ ಮತ್ತಿತರರ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ನೂರಾರು ಮಹಿಳೆಯರು ಭಾಗವಹಿಸಿ ಮಾನವ ಸರಪಳಿ ನಿರ್ಮಿಸಿದ್ದಲ್ಲದೇ ರಾಹುಲ್ಗಾಂಧಿ,ಸಿದ್ದರಾಮಯ್ಯ,ಮಲ್ಲಿಕಾರ್ಜುನ ಖರ್ಗೆ ವಿರುದ್ದ ಘೋಷಣೆ ಕೂಗಿದರು.

ಮಾಜಿ ಸಚಿವ ವರ್ತೂರು ಪ್ರಕಾಶ್ ಮಾತನಾಡಿ, ಲೋಕಸಭೆಯಲ್ಲಿ ಮಹಿಳೆಯರಿಗೆ ಶೇ.೩೩ ರಷ್ಟು ಮೀಸಲಾತಿ ವಿಧೇಯಕ ಮಂಡಿಸಲಾಗಿದ್ದು ಈ ವಿಧೇಯಕ ಸೋಲಿಗೆ ಪ್ರಮುಖ ಪಾತ್ರ ವಹಿಸಿರುವ ಕಾಂಗ್ರೆಸ್ ಪಕ್ಷದ ವಿರುದ್ದ ಮಹಿಳೆಯರು ಹೋರಾಟ ನಡೆಸುವುದು ಮಾತ್ರವಲ್ಲ ಮುಂದಿನ ಚುನಾವಣೆಯಲ್ಲಿ ಬಹಿಷ್ಕರಿಸಬೇಕು. ಮಹಿಳೆಯರನ್ನು ಅಧಿಕಾರದಿಂದ ದೂರವಿಡಬೇಕು ಎಂಬುದು ಕಾಂಗ್ರೆಸ್ನ ಸಿದ್ದಾಂತವಾಗಿದೆ, ಇಂತಹ ಸಂದರ್ಭದಲ್ಲಿ ಮಹಿಳೆಯರು ಏಕೆ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಬೇಕು ಎಂದು ಪ್ರಶ್ನಿಸಿದ ಅವರು ಹೆತ್ತತಾಯಿಗೂ ಗೌರವ ನೀಡದ ಸಂಸ್ಕೃತಿ ಈ ಕಾಂಗ್ರೆಸ್ಸಿಗರದ್ದು ಎಂದು ಖಂಡಿಸಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಓಂಶಕ್ತಿ ಚಲಪತಿ ಮಾತನಾಡಿ,ದಶಕಗಳ ಕಾಲದಿಂದ ಮಹಿಳಾ ಮೀಸಲಾತಿ ಮಸೂದೆಯನ್ನು ಮೂಲೆ ಗುಂಪು ಮಾಡಿದ್ದ ಕಾಂಗ್ರೇಸ್ ಪಕ್ಷ ಇದೀಗ ಪ್ರಧಾನಿ ನರೇಂದ್ರ ಮೋದಿಯವರು ಇಚ್ಚಾಶಕ್ತಿ ಹಾಗೂ ಮಹಿಳೆಯರ ಮೇಲಿನ ಗೌರವದಿಂದ ಸಂಸತ್ನಲ್ಲಿ ನಾರಿಶಕ್ತಿ ವಂದನ್ ಮಸೂದೆ ಮೂಡಿಸಿದಾಗ ಅದನ್ನು ವಿರೋಧಿಸುವ ಮೂಲಕ ತಮ್ಮ ಕೀಳು ಮಟ್ಟದ ರಾಜಕೀಯ ಸಂಸ್ಕೃತಿಗೆ ಸಾಕ್ಷಿಯಾಗಿದ್ದಾರೆ ಎಂದು ಟೀಕಿಸಿದರು.

ಮಹಿಳಾ ಮೀಸಲಾತಿಯ ಬಿಲ್ ವಿರೋಧಿಸಿರುವ ಕಾಂಗೇಸ್ ಪಕ್ಷದ ವಿರುದ್ದ ರಾಜ್ಯ ಮಟ್ಟದಲ್ಲಿ ಬಿಜೆಪಿ ಬೃಹತ್ ಪ್ರತಿಭಟನೆಯನ್ನು ನಡೆಸಲಿದೆ ಎಂದ ಅವರು, ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಕಾಂಗ್ರೇಸ್ ವಿರುದ್ದ ಪ್ರತಿಭಟನೆ ನಡೆಸಲಾಗುವುದು ಮಹಿಳೆಯರಿಗಾದ ಅನ್ಯಾಯದ ವಿರುದ್ದ ಎಚ್ಚತ್ತು ಕೊಳ್ಳುವಂತೆ ಮಹಿಳೆಯರವನ್ನು ಸಂಘಟಿಸಿ ಹೋರಾಟ ಮಾಡಲಾಗುವುದು ಎಂದರು.

ಮಾಜಿ ಸಂಸದ ಎಸ್ಮುನಿಸ್ವಾಮಿ ಅವರ ಪತ್ನಿ ಶೈಲಜಾ ಮುನಿಸ್ವಾಮಿ ಮಾತನಾಡಿ, ಕಾಂಗ್ರೆಸ್ ಮತ್ತದರ ಮಿತ್ರ ಪಕ್ಷಗಳ ಇಂಡೀ ಕೂಟ ಮಹಿಳಾ ಮೀಸಲಾತಿ ಮಸೂದೆಗೆ ವಿರೋಧ ವ್ಯಕ್ತಪಡಿಸುವ ಮೂಲಕ ಭಾರತೀಯ ಸಂಸ್ಕೃತಿಯಲ್ಲಿ ಪವಿತ್ರ ಸ್ಥಾನ ಹೊಂದಿರುವ ಇಡೀ ಮಹಿಳಾ ಕುಲಕ್ಕೆ ಅಪಮಾನ ಮಾಡಿದ್ದಾರೆ ಎಂದು ಖಂಡಿಸಿದರು.

ಪ್ರಧಾನಿ ಮೋದಿಯವರು `ನಾರಿಶಕ್ತಿ ವಂದನ್' ಮಹಿಳೆಯರಿಗೆ ವಂದಿಸುವ ಪ್ರತೀಕವಾಗಿ ಮಸೂದೆ ಮಂಡಿಸಿದ್ದು, ಬಿಜೆಪಿಯ ಸಂಸ್ಕೃತಿಯನ್ನು ಅನಾವರಣಗೊಳಿಸಿದರು. ಆದರೆ ಕಾಂಗ್ರೆಸ್ ಮುಖಂಡರು ಇದಕ್ಕೆ ಧಕ್ಕೆ ತಂದು ಮಹಿಳೆಯರ ಸ್ವಾಭಿಮಾನಕ್ಕೆ ಧಕ್ಕೆ ತಂದರು, ಇದೇ ಕಾಂಗ್ರೆಸ್ ಹಿಂದೆ ದೇವೇಗೌಡರು ಪ್ರಧಾನಿಯಾಗಿದ್ದಾಗಲೂ ಈ ಮಸೂದೆಗೆ ವಿರೋಧ ವ್ಯಕ್ತಪಡಿಸಿದ್ದರು ಎಂದರು.

ಇ0ದಿರಾ,ಸೋನಿಯಾ,ಪ್ರಿಯಾ0ಕ ಈ ಕುಟುಂಬ ರಾಜಕೀಯದ ಕುಡಿಗಳು ಮಾತ್ರವೇ ಮಹಿಳೆಯರೇ ಎಂದು ಪ್ರಶ್ನಿಸಿದ ಅವರು, ಬಡ,ಸಾಮಾನ್ಯ ಮಹಿಳೆಯೂ ಸಂಸತ್,ವಿಧಾನಸಭೆ ಪ್ರವೇಶಿಸಿ ಅಲ್ಲಿ ಜನಪರ ಧ್ವನಿಯಾಗುವ ಅವಕಾಶವನ್ನು ಕಿತ್ತುಕೊಳ್ಳುವ ಕೀಳುಮಟ್ಟದ ರಾಜಕೀಯ ಮಾಡಿದ್ದಾರೆ ಎಂದು ಖಂಡಿಸಿದ ಅವರು, ಹೆಣ್ಣು ಅಬಲೆಯಲ್ಲ ಸಬಲೆ ಎಂಬುದನ್ನು ಮುಂದಿನ ಚುನಾವಣೆಯಲ್ಲಿ ತೋರಿಸಬೇಕು ಕಾಂಗ್ರೆಸ್ಸನ್ನು ಧಿಕ್ಕರಿಸಬೇಕು ಎಂದರು.

ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಅರುಣಮ್ಮ ಮಾತನಾಡಿ, ಮಹಿಳೆಯರು ಕಾಂಗ್ರೆಸ್ ಮಾಡಿರುವ ಈ ಮಹಾದ್ರೋಹದ ಕುರಿತು ಎಚ್ಚೆತ್ತುಕೊಳ್ಳಬೇಕು, ಬೀದಿಗಿಳಿದು ಹೋರಾಟ ಮಾಡುವ ಸಂಕಲ್ಪ ಮಾಡಬೇಕು, ನಿಮ್ಮೊಂದಿಗೆ ಬಿಜೆಪಿ ಮಹಿಳಾ ಮೋರ್ಚಾ ಸದಾ ನಿಲ್ಲುತ್ತದೆ ಎಂದು ತಿಳಿಸಿ, ಮುಂದಿನ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲು ಕರೆ ನೀಡಿದರು.

ಪ್ರತಿಭಟನೆಯಲ್ಲಿ ಬಿಜೆಪಿ ಮಹಿಳಾ ಮೋರ್ಚಾದ ಮಮತಮ್ಮ,ಅಶ್ವಿನಿ,ಗೀತಾ,ಶ್ವೇತಾ, ನಗರಸಭೆ ಮಾಜಿ ಸದಸ್ಯ ಪ್ರವೀಣ್ಗೌಡ, ಬಿಜೆಪಿ ಮುಖಂಡರಾದ ವಿಜಯಕುಮಾರ್, ಎಂಪಿ.ನಾರಾಯಣಸ್ವಾಮಿ, ಅಪ್ಪಿನಾರಾಯಣಸ್ವಾಮಿ, ಕೆಂಬೋಡಿ ನಾರಾಯಣಸ್ವಾಮಿ,ಒಬಿಸಿ ಮೋರ್ಚಾ ಬಾಲಾಜಿ,ತಿಮ್ಮರಾಯಪ್ಪ, ಮಾಲೂರು ಕೃಷ್ಣಪ್ಪ, ಮುಳಬಾಗಿಲು ಮಂಜುನಾಥಗೌಡ, ಶಿವಣ್ಣ, ಲಕ್ಷö್ಮಣಗೌಡ, ಸುರೇಶ್,ಕಿರಣ್,ಬಂಗಾರಪೇಟೆ ಮಹೇಶ್, ಮಾಲೂರು ಅಪ್ಪಿರಾಜು, ಸಾ.ಮಾ.ಅನಿಲ್ಬಾಬು ಮತ್ತಿತರರಿದ್ದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande