ಸಮಾಜದಲ್ಲಿ ಅಂಧಕಾರ ತೊಲಗಿಸಲು ಮೊದಲ ಪ್ರಜಾಪ್ರಭುತ್ವ ಅನುಭವ ಮಂಟಪ ಜಾರಿಗೆ ತಂದ ಬಸವಣ್ಣ
ಸಮಾಜದಲ್ಲಿ ಅಂಧಕಾರ ತೊಲಗಿಸಲು ಮೊದಲ ಪ್ರಜಾಪ್ರಭುತ್ವ ಅನುಭವ ಮಂಟಪ ಜಾರಿಗೆ ತಂದ ಬಸವಣ್ಣ
ಮುಳಬಾಗಿಲಿನ ಭಾರತೀಯ ಕಿಸಾನ್ ಸಂಘ ಕಾರ್ಯಾಲಯದಲ್ಲಿ ಸೋಮವಾರ ಸಂಜೆ ಏರ್ಪಡಿಸಿದ್ದ ಬಸವ ಜಯಂತಿ ಕಾರ್ಯಕ್ರಮ ನಡೆಯಿತು.


ಕೋಲಾರ, 20 ಏಪ್ರಿಲ್ (ಹಿ.ಸ) :

ಆ್ಯಂಕರ್ : ಸಮಾಜದಲ್ಲಿ ಇದ್ದ ಅಂಧಕಾರವನ್ನು ತೊಲಗಿಸಲು ವಿಶ್ವದ ಮೊದಲ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಅನುಭವ ಮಂಟಪ ಜಾರಿಗೆ ತಂದ ಜಗಜ್ಯೋತಿ ಬಸವೇಶ್ವರರು ವಿಶ್ವಗುರುಗಳು ಈ ನೆಲದ ಸಾಂಸ್ಕೃತಿಕ ನಾಯಕ ಅವರ ಆದರ್ಶಗಳು ಸರ್ವಕಾಲಿಕವಾಗಿ ಅಮರವಾಗಿ ಇರುತ್ತದೆ ಎಂದು ಬಿಕೆಎಸ್ ತಾಲೂಕು ಸಂಘಟನಾ ಕಾರ್ಯದರ್ಶಿ ನಿವೃತ್ತ ಮುಖ್ಯೋಪಾಧ್ಯಾಯ ಹಳೇ ಕುಪ್ಪ ಎಂ. ಚಂಗಲರಾಯಪ್ಪ ಅಭಿಮತ ವ್ಯಕ್ತಪಡಿಸಿದರು.

ಮುಳಬಾಗಿಲಿನ ಭಾರತೀಯ ಕಿಸಾನ್ ಸಂಘ ಕಾರ್ಯಾಲಯದಲ್ಲಿ ಸೋಮವಾರ ಸಂಜೆ ಏರ್ಪಡಿಸಿದ್ದ ಬಸವ ಜಯಂತಿ ಮತ್ತು ಅಕ್ಷಯ ತೃತೀಯ ವಿಶೇಷ ಪೂಜಾ ಕಾರ್ಯಕ್ರಮದಲ್ಲಿ ಭಾರತಮಾತಾ, ಭಗವಾನ್ ಬಲರಾಮ ಹಾಗೂ ಜಗಜ್ಯೋತಿ ಬಸವೇಶ್ವರ ಫೋಟೋಗಳಿಗೆ ಪೂಜೆ ಸಲ್ಲಿಸಿ ಮಾತನಾಡಿ ಭಾರತ ವಿಶ್ವಕ್ಕೆ ಎಲ್ಲಾ ರೀತಿಯಲ್ಲೂ ಮಾದರಿಯಾದ ದೇಶವಾಗಿದೆ ರಾಮಾಯಣ ಮಹಾಭಾರತ ಕಾಲಘಟ್ಟದಲ್ಲಿ ಭಗವಂತನೇ ಹಲವಾರು ರೂಪಗಳಲ್ಲಿ ಜನಿಸಿ ಧರ್ಮದ ರಕ್ಷಣೆಗೆ ಕಾರ್ಯನಿರ್ವಹಿಸಿದ್ದಾರೆ, ಯುಗ ಯುಗಾಂತರಗಳಲ್ಲಿ ಸಮಾಜದಲ್ಲಿ ಅಡಗಿದ್ದ ಅಸ್ಪೃಶ್ಯತೆ , ಅಂಧಕಾರವನ್ನು ತೊಲಗಿಸಲು ಹಲವಾರು ಪುಣ್ಯ ಪುರುಷರು , ದಾರ್ಶನಿಕರು ಜನಿಸಿ ಸಮಾಜಕ್ಕೆ ಮಾರ್ಗದರ್ಶನ ನೀಡಿದ್ದರು ಅದನ್ನು ಅರ್ಥೈಸಿಕೊಳ್ಳುವಲ್ಲಿ ವಿಫಲರಾಗಿದ್ದ ಪರಿಣಾಮ ಈಗಲೂ ಮೇಲು-ಕೀಳು ಎಂಬ ಮನೋಭಾವ ಕೆಲವು ಕಡೆ ಕಂಡು ಬರುತ್ತಿದೆ ಅದನ್ನು ತೊಲಗಿಸಲು ಭಾರತೀಯ ಕಿಸಾನ್ ಸಂಘ ಪಂಚ ಪರಿವರ್ತನೆ ಕಾರ್ಯಕ್ರಮಗಳ ಮೂಲಕ ಸಮಾಜದಲ್ಲಿ ಅರಿವು ಮೂಡಿಸಲಾಗುತ್ತಿರುವುದು ಶ್ಲಾಘನೀಯ ವಿಷವಾಗಿದೆ ಎಂದರು.

ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಗಡಿನಾಡು ಪ್ರತಿನಿಧಿ ನಿವೃತ್ತ ಶಿಕ್ಷಕ ತಾಯಲೂರು ಗೋಪಿನಾಥ್ ಮಾತನಾಡಿ ಭಗವಂತನ ಕೊನೆ ಅವತಾರವಾದ ಭಗವಾನ್ ಬುದ್ಧ ಶಾಂತಿ ಮಾರ್ಗದ ಮೂಲಕ ವಿಶ್ವಜ್ಯೋತಿಯಾಗಿದ್ದರು , ೧೨ನೇ ಶತಮಾನದಲ್ಲಿ ಬಸವಣ್ಣನವರು ಸಕಲ ಜೀವರಾಶಿಗಳ ಶ್ರೇಯಸ್ಸು ಬಯಸಿದವರು ಸಮಾಜಕ್ಕೆ ಬೆಳಕು ನೀಡಿದರು ಅವರ ತತ್ವ ಆದರ್ಶಗಳು ಎಂದೆ0ದಿಗೂ ಸೂರ್ಯನಂತೆ ಸದಾಕಾಲ ಪ್ರಜ್ವಲಿಸುತ್ತದೆ ಅವರ ಚಿಂತನೆಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಅತ್ಯುತ್ತಮ ವ್ಯಕ್ತಿ ನಿರ್ಮಾಣ ಸಾಧ್ಯವಾಗುತ್ತದೆ ಎಂದರು.

ಸಿದ್ದಗ0ಗಾ ಮಠದ ಹಳೆ ವಿದ್ಯಾರ್ಥಿ ಎಸ್. ಸಿ. ಶಿವಕುಮಾರ್, ಬಿಕೆಎಸ್ ಜಿಲ್ಲಾ ಖಜಾಂಚಿ ವಕೀಲ ವಿ. ಜಯಪ್ಪ ಬಸವಣ್ಣವರ ಕೀರ್ತನೆಗಳು ಮತ್ತು ವಚನಗಳನ್ನು ಹಾಡಿದರು, ಭಾರತೀಯ ಕಿಸಾನ್ ಸಂಘದ ದಕ್ಷಿಣ ಪ್ರಾಂತ ಉಪಾಧ್ಯಕ್ಷ ಎ. ಅಪ್ಪಾಜಿಗೌಡ, ತಾಲೂಕು ಅಧ್ಯಕ್ಷ ಉಗಿನಿ ಆರ್. ನಾರಾಯಣಗೌಡ, ನಗರ ಘಟಕದ ಅಧ್ಯಕ್ಷ ಬೆಮ್ಮೆಲ್ ಧನಂಜಯ, ಡಿವಿಜಿ ಕನ್ನಡ ಸಂಘದ ಅಧ್ಯಕ್ಷ ಕೆ. ಮಧುಸೂದನ್, ಪ್ರಧಾನ ಮಂತ್ರಿ ಜನೌಷಧಿ ಕೇಂದ್ರದ ಮುಖ್ಯಸ್ಥೆ ಗೀತಾ, ಕಿಸಾನ್ ಸಂಘದ ಸದಸ್ಯರಾದ ಕವಿತಾ, ಪ್ರಕಾಶ್, ವೆಂಕಟಪತಿ, ಆಟೋ ಭಾಸ್ಕರ್, ರಾಮಚಂದ್ರಪ್ಪ, ಇರ್ಫಾನ್ ಮತ್ತಿತರರು ಇದ್ದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande