ಬಸವಜ್ಯೋತಿಯೊಂದಿಗೆ ನಡಿಗೆ ಮತ್ತು ಓಟ
ವಿಜಯಪುರ, 17 ಏಪ್ರಿಲ್ (ಹಿ.ಸ.) : ಆ್ಯಂಕರ್ : ಸಮಾನತೆಯ ಹರಿಕಾರ ಹಾಗೂ ಕರ್ನಾಟಕದ ಸಾಂಸ್ಕೃತಿಕ ನಾಯಕ ಬಸವಣ್ಣ ಅವರ ಜಯಂತಿಯನ್ನು ವಿಶಿಷ್ಟವಾಗಿ ಆಚರಿಸಲು ವಿಜಯಪುರ ಸೈಕ್ಲಿಂಗ್ ಗ್ರೂಪ್ ವತಿಯಿಂದ ಬಸವಜ್ಯೋತಿ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಎಂ.ಬಿ. ಪಾಟೀಲ ತಿಳಿಸಿದ್ದಾರೆ. ಏಪ್ರಿಲ್ 19ರಂದು ಭಾ
ಬಸವ ಜಯಂತಿ


ವಿಜಯಪುರ, 17 ಏಪ್ರಿಲ್ (ಹಿ.ಸ.) :

ಆ್ಯಂಕರ್ : ಸಮಾನತೆಯ ಹರಿಕಾರ ಹಾಗೂ ಕರ್ನಾಟಕದ ಸಾಂಸ್ಕೃತಿಕ ನಾಯಕ ಬಸವಣ್ಣ ಅವರ ಜಯಂತಿಯನ್ನು ವಿಶಿಷ್ಟವಾಗಿ ಆಚರಿಸಲು ವಿಜಯಪುರ ಸೈಕ್ಲಿಂಗ್ ಗ್ರೂಪ್ ವತಿಯಿಂದ ಬಸವಜ್ಯೋತಿ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಎಂ.ಬಿ. ಪಾಟೀಲ ತಿಳಿಸಿದ್ದಾರೆ.

ಏಪ್ರಿಲ್ 19ರಂದು ಭಾನುವಾರ ಸಂಜೆ 7 ಗಂಟೆಗೆ ಬಸವನ ಬಾಗೇವಾಡಿ ವಿರಕ್ತಮಠದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪಾದಯಾತ್ರೆಗೆ ಚಾಲನೆ ನೀಡಲಾಗುವುದು. ಪಾದಯಾತ್ರೆಗೆ ವಿರಕ್ತಮಠದ ಪ.ಪೂ. ಸಿದ್ದಲಿಂಗ ಸ್ವಾಮೀಜಿ ಚಾಲನೆ ನೀಡಲಿದ್ದಾರೆ.

ಪಾದಯಾತ್ರೆ ಮಸಬಿನಾಳ, ಉಕ್ಕಲಿ ಹಾಗೂ ಉಕುಮನಾಳ ಮಾರ್ಗವಾಗಿ ಶಿವಗಿರಿ ತಲುಪಿ, ಬಳಿಕ ವಿಜಯಪುರ ನಗರದ ಬಸವೇಶ್ವರ ವೃತ್ತ ನಲ್ಲಿ ಸಮಾರೋಪಗೊಳ್ಳಲಿದೆ.

ಸುಮಾರು 50 ಕಿಲೋಮೀಟರ್ಗಳ ಪಾದಯಾತ್ರೆ ಮಾರ್ಗದುದ್ದಕ್ಕೂ ಭಾಗವಹಿಸುವವರಿಗೆ ಅಲ್ಪೋಪಹಾರ ಮತ್ತು ಲಘುಪಾನೀಯಗಳ ವ್ಯವಸ್ಥೆ ಕಲ್ಪಿಸಲಾಗುವುದು. ಈಗಾಗಲೇ 150ಕ್ಕೂ ಹೆಚ್ಚು ಬಸವಾನುಯಾಯಿಗಳು ಸ್ವಯಂಪ್ರೇರಿತವಾಗಿ ನೋಂದಣಿ ಮಾಡಿಕೊಂಡಿದ್ದಾರೆ.

ಪಾದಯಾತ್ರೆಯಲ್ಲಿ ಭಾಗವಹಿಸುವವರಿಗೆ ಟಿ-ಶರ್ಟ್, ಪದಕ ಹಾಗೂ ಪ್ರಮಾಣಪತ್ರ ವಿತರಿಸಲಾಗುವುದು. ಬಸವಜ್ಯೋತಿಯೊಂದಿಗೆ ನಡೆಯಲು ಎಲ್ಲರಿಗೂ ಮುಕ್ತ ಅವಕಾಶವಿದ್ದು, ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಡಾ. ರಾಜು ಯಲಗೊಂಡ ಅವರನ್ನು ಸಂಪರ್ಕಿಸಬಹುದು ಎಂದು ತಿಳಿಸಲಾಗಿದೆ.

“ಪ್ರತಿ ರಾತ್ರಿ ಸಾಮಾನ್ಯವೇ, ಆದರೆ ಏಪ್ರಿಲ್ 19ರ ರಾತ್ರಿ ‘ಬಸವರಾತ್ರಿ’ ಆಗಲಿ” ಎಂದು ಕರೆ ನೀಡಿರುವ ಎಂ.ಬಿ. ಪಾಟೀಲ, ಬಸವಣ್ಣನವರ ದಾರಿಯಲ್ಲಿ ನಡೆದು ಸಮಾನತೆಯ ಬೆಳಕನ್ನು ಸಮಾಜದೆಲ್ಲೆಡೆ ಹರಡುವ ಸುವರ್ಣಾವಕಾಶ ಇದಾಗಿದೆ ಎಂದು ಹೇಳಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande