ಕೋಲಾರದಲ್ಲಿ ಏ.೨೧ ರಿಂದ ೨೬ ಶಂಕರಾಚಾರ್ಯರ ಜಯಂತಿ
ಕೋಲಾರದಲ್ಲಿ ಏ.೨೧ ರಿಂದ ೨೬ ಶಂಕರಾಚಾರ್ಯರ ಜಯಂತಿ
ಕೋಲಾರದಲ್ಲಿ ಏ.೨೧ ರಿಂದ ೨೬ ಶಂಕರಾಚಾರ್ಯರ ಜಯಂತಿ


ಕೋಲಾರ, ೧೭ ಏಪ್ರಿಲ್ (ಹಿ.ಸ) :

ಆ್ಯಂಕರ್ : ಶೃಂಗೇರಿ ಶ್ರೀದಕ್ಷಿಣಾಮ್ನಾಯ ಶ್ರೀಶಾರದಾ ಪೀಠದ ಉಭಯ ಜಗದ್ಗುರುಗಳ ದಿವ್ಯ ಆಶೀರ್ವಾದದಿಂದ ಸನಾತನ ಧರ್ಮದ ಉದ್ಧಾರಕರೂ, ವೈದಿಕಮಾರ್ಗ ಪ್ರವರ್ತಕರೂ, ಚತುರಾಮ್ನಾಯ ಪೀಠಗಳ ಸ್ಥಾಪಕರೂ ಪ್ರಾತಃ ಸ್ಮರಣೀಯರೂ ಆದ ಶ್ರೀ ಆದಿ ಶಂಕರಭಗವತ್ಪಾದಾಚಾರ್ಯರ ಜಯಂತಿ ಮಹೋತ್ಸವವನ್ನು ಏ.೨೧ ರಿಂದ ಏ.೨೬ ರವರೆಗೂ ನಗರದ ಕೋಟೆಯ ಶೃಂಗೇರಿ ಶಂಕರಮಠದಲ್ಲಿ ಹಮ್ಮಿಕೊಳ್ಳಲಾಗಿದೆ.

ಏ.೨೧ ರ ಶಂಕರಪ0ಚಮಿಯ0ದು ವಿಶೇಷವಾದ ರಥೋತ್ಸವ ಕಾರ್ಯಕ್ರಮವು ಬೆಳಗ್ಗೆ ೭-೩೦ಕ್ಕೆ ಶಂಕರ ಮಠದಿಂದ ಸಾಗಿ ನಗರದ ರಾಜಬೀದಿಗಳಲ್ಲಿ ವೇದ-ನಾದ ಸ್ವರಗಳೊಂದಿಗೆ ಮತ್ತು ಶ್ರೀಶಂಕರರ ಛದ್ಮವೇಷ ತೊಟ್ಟ ಚಿಣ್ಣರೊಂದಿಗೆ ಸಾಗಿಬರಲಿದೆ. ಸಮಾಜದ ಎಲ್ಲ ಸನಾತನ ಧರ್ಮದ ಅನುಯಾಯಿಗಳು ಈ ಕಾರ್ಯಕ್ರಮಗಳಲ್ಲಿ ತಪ್ಪದೇ ಭಾಗವಹಿಸಿ, ಯಶಸ್ವಿಗೊಳಿಸಲು ಅಧ್ಯಕ್ಷ ಡಾ. ಎಮ್. ವಿ. ಜಯರಾಮ್ ಮತ್ತು ಧರ್ಮಾಧಿಕಾರಿ ಜೆ. ಎನ್. ರಾಮಕೃಷ್ಣ ಕೋರಿದ್ದಾರೆ.

ಶಂಕರ ಜಯಂತಿಯ ಕಾರ್ಯಕ್ರಮಗಳ ದಿನಗಳಂದು ಬೆಳಗ್ಗೆ ವೇದ, ಶಾಸ್ತç, ಸ್ತೋತ್ರ, ಶ್ರೀಶಾಂಕ ಭಾಷ್ಯ, ಭಗವದ್ಗೀತಾ ಪಾರಾಯಣಗಳು ನಡೆಯಲಿವೆ ಮತ್ತು ಬೆಳಗ್ಗೆ ೧೦-೩೦ ಗಂಟೆಗೆ ಬಾಲಶಂಕರ ವೇಷಧಾರಿಗಳ,ಶಾರದಾಂಭ ಛದ್ಮವೇಷ ಸ್ಪರ್ಧೆಗಳು ನಡೆಯಲಿವೆ. ಏ.೧೯ ರಂದು ಶಂಕರ ಜಯಂತಿ ಅಂಗವಾಗಿ ಜ್ಞಾನ ಶಂಕರ-ಶ0ಕರಸ್ತೊತ್ರಗಳ ಕಂಠಪಾಠ ಸ್ಪರ್ಧೆಗಳು ನಡೆಯಲಿದೆ ಎಂದು ತಿಳಿಸಿದ್ದಾರೆ.

ಸಾಂಸ್ಕöÈತಿಕ ಕಾರ್ಯಕ್ರಮಗಳ ಅಂಗವಾಗಿ ಶಂಕರಜಯAತಿ ಮಹೋತ್ಸವದ ಕಾರ್ಯಕ್ರಮದ ದಿನಗಳಂದು ಸಂಜೆ ೫.೩೦ ರಿಂದ ವಿವಿಧ ಭಕ್ತ ಮಂಡಳಿಗಳಿAದ ಶ್ರೀಶಾಂಕರ ಸ್ತೋತ್ರ ಗಾಯನ ಮತ್ತು ೬.೩೦ ರಿಂದ ಉಪನ್ಯಾಸ ಕಾರ್ಯಕ್ರಮಗಳು ಜರುಗಲಿವೆ. ಏ.೨೧ ರಂದು ಸಂಜೆ ವಿದ್ವಾನ್ ಸೋ.ನ.ಲಕ್ಷಿö್ಮÃನಾರಾಯಣ ಶಾಸ್ತಿçಗಳಿಂದ ಪ್ರವಚನ ನಡೆಯಲಿದೆ. ಪ್ರತಿದಿನ ಋತ್ವಿಜರಿಂದ ವೇದ ಪಾರಾಯಣ, ಶ್ರೀಶಾಂಕರ ಭಾಷ್ಯ ಸ್ತೊçÃತ್ರಗಳ ಪಾರಾಯಣ, ನವಗ್ರಹ ಜಪ, ಸೌರಸೂಕ್ತ ಅರುಣ ಪ್ರಶ್ನೆಗಳ ಜಪ ನಡೆಯಲಿದೆ.

ಏ.೨೨ ರಿಂದ ಏ.೨೬ ರವರೆಗೂ ಸಮಗ್ರ ಅರ್ಥವೇದ ಪಾರಾಯಣವನ್ನು ಹಾವೇರಿ ಜಿಲ್ಲೆಯ ಬ್ಯಾಡಗಿಯ ವೇದಬ್ರಹ್ಮಶ್ರೀ ಗೋಪಾಲ ಶಿವಪೂಜ ಅವರು ನಡೆಸಿಕೊಡಲಿದ್ದಾರೆ.

ಏ.೨೨ ರಿಂದ ೨೫ರವರೆಗೂ ಪ್ರತಿ ದಿನ ಸಂಜೆ ೬-೧೫ ರಿಂದ ೮ ಗಂಟೆವರೆಗೂ ವಿಜಯನಗರ ಜಿಲ್ಲೆಯ ಹೊಸಪೇಟೆಯ ಚಿಂತಾಮಣಿ ಮಠದ ಶ್ರೀಶಿವಾನಂದಭಾರತಿ ಚಿಂತಾಮಣಿ ಸ್ವಾಮೀಜಿಗಳಿಂದ `ಈಶಾವಾಸ್ಯೋಪನಿಷತ್' ಪ್ರವಚನ ಮಾಲಿಕೆ ನಡೆಯಲಿದೆ.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande