
ಕೋಲಾರ, ೧೭ ಏಪ್ರಿಲ್ (ಹಿ.ಸ) :
ಆ್ಯಂಕರ್ : ಕಲಿಕೆ, ಆಲಿಸುವಿಕೆ, ಸಮಸ್ಯೆ ಪರಿಹಾರ ಮತ್ತು ನಿರ್ಧಾರಗಳನ್ನು ಕೈಗೊಳ್ಳಲು ಎಐ ಬಳಸಲಾಗುತ್ತದೆ. ಆದರೆ, ರೋಗಗಳನ್ನು ಗುಣಪಡಿಸಲು ಮಾನವೀಯತೆ ಮುಖ್ಯವಾಗುತ್ತದೆ ಎಂದು ರಾಜೀವ್ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ರಿಜಿಸ್ಟರರ್ ಡಾ.ಎಸ್.ರಿಯಾಜ್ ಭಾಷ ತಿಳಿಸಿದರು.
ನಗರ ಹೊರವಲಯದ ಟಮಕದಲ್ಲಿರುವ ಸಂಸ್ಥೆಯ ರಜತ ಮಹೋತ್ಸವ ಸಭಾಂಗಣದಲ್ಲಿ ಶ್ರೀ ದೇವರಾಜ ಅರಸು ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿ ಹಾಗೂ ಶ್ರೀ ದೇವರಾಜ ಅರಸು ಸ್ಕೋಲ್ ಅಂಡ್ ಕಾಲೇಜ್ ಆಫ್ ನರ್ಸಿಂಗ್ ವತಿಯಿಂದ ನಡೆದ ಘಟಿಕೋತ್ಸವ ಸಮಾರಂಭದಲ್ಲಿ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿ ಮಾತನಾಡಿದ ಅವರು, ಈ ತಂತ್ರಜ್ಞಾನವು ಆರೋಗ್ಯ, ಶಿಕ್ಷಣ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ದೊಡ್ಡ ಬದಲಾವಣೆಗಳನ್ನು ತರುತ್ತಿದ್ದರೂ, ಅದರ ನೈತಿಕ ಮತ್ತು ಜವಾಬ್ದಾರಿಯುತ ಬಳಕೆ ಅತ್ಯಗತ್ಯವಾಗಿದೆ ಎಂದು ವಿವರಿಸಿದರು.
ನೀವು ಉತ್ತಮ ಅಂಕ ಗಳಿಸಿ ಪದವಿ ಪಡೆದಿದ್ದರೂ, ನಿಮ್ಮ ನಿಸ್ವಾರ್ಥ ಸೇವೆ, ರೋಗಿಗಳ ಆರೈಕೆ ಮೂಲಕ ನಿಮ್ಮ ವಿದ್ಯೆಗೆ ಗೌರವ ತರಬೇಕು. ಭಾರತದಲ್ಲಿ ನರ್ಸಿಂಗ್ ಉದ್ಯೋಗಗಳಿಗೆ ಬಹುಪೂರ ಅವಕಾಶಗಳಿದ್ದರೂ ವಿದೇಶಗಳಿಗೆ ತೆರಳಿ ಸೇವೆ ಮಾಡುತ್ತಿದ್ದಾರೆ. ಹಣ ಗಳಿಕೆಯೇ ಪ್ರಧಾನವಾಗಬಾರದು. ಜನ್ಮಭೂಮಿಯಲ್ಲಿ ಸೇವೆ ಸಲ್ಲಿಸಲು ಮುಂದಾಗಬೇಕು. ನರ್ಸಿಂಗ್ ಸೇವೆ ಮಾಡುವವರಿಗೆ ಜನರ ಮನಸ್ಸಿನಲ್ಲಿ ಉತ್ತಮ ಬಾಂಧವ್ಯವಿದೆ. ಸ್ವಂತ ತಾಯಿ ಅಕ್ಕ-ತಂಗಿಯ0ತೆ ನಿಮಗೆ ಗೌರವ ನೀಡುತ್ತಾರೆ. ಆದರಿಂದಲೇ ಎಲ್ಲಿ ನೋಡಿದರೂ ನರ್ಸಿಂಗ್ ಹೋಂ ಎಂದು ಗುರುತಿಸುತ್ತಾರೆ ವರೆತೂ ಡಾಕ್ಟರ್ ಹೋಂ ಎಂದು ಕರೆಯುವುದಿಲ್ಲ. ದಿನದ ೨೪ ಗಂಟೆಯಲ್ಲಿ ಒಂದು ಗಂಟೆ ಮಾತ್ರ ವೈದ್ಯರು ರೋಗಿಗಳ ಕ್ಷೇಮವನ್ನು ವಿಚಾರಿಸುತ್ತಾರೆ. ಇನ್ನ ಮಿಕ್ಕ ಅವಧಿಯಲ್ಲಿ ಶುಶ್ರೂಷಕಿಯರು ಯೋಗಕ್ಷೇಮ ವಿಚಾರಿಸುತ್ತಾರೆ. ನಿಮ್ಮ ಜೀವನದಲ್ಲಿ ಮುಖ್ಯ ಪಾತ್ರ ವಹಿಸುವ ಪೋಷಕರನ್ನು, ವಿದ್ಯೆ ಕಳಿಸಿಕೊಟ್ಟ ಗುರುಗಳನ್ನು ಹಾಗೂ ಶಿಕ್ಷಣ ಪಡೆದ ಸಂಸ್ಥೆಗಳನ್ನು ಮರೆಯಬಾರದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಶ್ರೀ ದೇವರಾಜ ಅರಸು ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿ ಮುಖ್ಯ ಆಡಳಿತಾಧಿಕಾರಿ ಡಾ.ಡಿ.ವಿ.ಎಲ್.ಎನ್.ಪ್ರಸಾದ್, ಉಪಕುಲಪತಿ ಡಾ.ಬಿ.ವೆಂಗಮ್ಮ, ವಯ್ಸ್ ಚೇರ್ಮನ್ ಜೆ.ರಾಜೇಂದ್ರ, ಜಾಲಪ್ಪ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ.ಜೆ.ಕೃಷ್ಣಪ್ಪ, ಅಕಾಡೆಮಿಯ ಕುಲಸಚಿವ ಡಾ.ಸಿ.ಮುನಿನಾರಾಯಣ, ಪ್ರಾಂಶುಪಾಲ ಡಾ.ಕೆ.ಪ್ರಭಾಕರ್, ಶ್ರೀ ದೇವರಾಜ ಅರಸು ಸ್ಕೋಲ್ ಅಂಡ್ ಕಾಲೇಜ್ ಆಫ್ ನರ್ಸಿಂಗ್ ಪ್ರಾಂಶುಪಾಲರಾದ ಡಾ.ಜಿ.ವಿಜಯಲಕ್ಷಿ÷್ಮ, ಪ್ರೊಫೆಸರ್ ಡಾ. ಜೀನತ್ ಕೆರಿನಾ ಜೋಸೆಫ್, ಉಪ ಪ್ರಾಂಶುಪಾಲರಾದ ಡಾ.ಲಾವಣ್ಯ ಸುಬ್ರಮಣಿ, ಡಾ. ಸರಳ, ಡಾ.ಸೆಂಡಿಲ್, ಲಾ ಕಾಲೇಜ್ ಪ್ರಾಂಶುಪಾಲ ಡಾ.ಕೌಶಿಕ್, ಡಾ.ಶಶಿಧರ್, ನರ್ಸಿಂಗ್ ವಿದ್ಯಾರ್ಥಿಗಳು, ಆಡಳಿತ ವರ್ಗ ಸೇರಿದಂತೆ ಪೋಷಕರು ಪಾಲ್ಗೊಂಡಿದ್ದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್