ಕಾಣೆಯಾದವರ ಬಗ್ಗೆ ಮಾಹಿತಿ ನೀಡಲು ಮನವಿ
ಶಿವಮೊಗ್ಗ, 17 ಏಪ್ರಿಲ್ (ಹಿ.ಸ.) : ಆ್ಯಂಕರ್ : ಶಿವಮೊಗ್ಗ ಜಿಲ್ಲೆಯ ಭದ್ರಾವತಿ ಹಳೆ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಅಂಬೇಡ್ಕರ್ ನಗರ ಕಂಚಿ ಬಾಗಿಲು ವಾಸಿ ನಾರಾಯಣ ಡಿ.ಎನ್. ಎಂಬುವವರ ತಾಯಿ 67 ವರ್ಷದ ತಿಮ್ಮಮ್ಮ ದೊಡ್ಡನರಸಯ್ಯ ಎಂಬ ಮಹಿಳೆ ಏ. 10 ರಂದು ಮನೆಯಿಂದ ಹೊರಗೆ ಹೋದವರು ಈವರೆಗೂ ವಾಪಾಸ್ಸಾಗಿರು
ಕಾಣೆಯಾದವರ ಬಗ್ಗೆ ಮಾಹಿತಿ ನೀಡಲು ಮನವಿ


ಶಿವಮೊಗ್ಗ, 17 ಏಪ್ರಿಲ್ (ಹಿ.ಸ.) :

ಆ್ಯಂಕರ್ : ಶಿವಮೊಗ್ಗ ಜಿಲ್ಲೆಯ ಭದ್ರಾವತಿ ಹಳೆ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಅಂಬೇಡ್ಕರ್ ನಗರ ಕಂಚಿ ಬಾಗಿಲು ವಾಸಿ ನಾರಾಯಣ ಡಿ.ಎನ್. ಎಂಬುವವರ ತಾಯಿ 67 ವರ್ಷದ ತಿಮ್ಮಮ್ಮ ದೊಡ್ಡನರಸಯ್ಯ ಎಂಬ ಮಹಿಳೆ ಏ. 10 ರಂದು ಮನೆಯಿಂದ ಹೊರಗೆ ಹೋದವರು ಈವರೆಗೂ ವಾಪಾಸ್ಸಾಗಿರುವುದಿಲ್ಲ.

ಈಕೆಯ ಚಹರೆ 5.1 ಅಡಿ ಎತ್ತರ, ಸಾಧಾರಣ ಮೈಕಟ್ಟು, ಕೋಲು ಮುಖ, ಎಣ್ಣೆಗೆಂಪು ಮೈಬಣ್ಣ ಹೊಂದಿದ್ದು, ಎಡಕೈ ಮೇಲೆ ಕೆಂಚಮ್ಮ ಎಂಬ ಹಚ್ಚೆಯ ಗುರುತಿದೆ. ಮನೆಯಿಂದ ಹೋಗುವಾಗ ಬಂಗಾರ ಬಣ್ಣದ ಅಂಚಿರುವ ಕಂದು ಬಣ್ಣದ ಸೀರೆ, ಗಿಳಿಹಸಿರು ಬಣ್ಣದ ರವಿಕೆ ಧರಿಸಿರುತ್ತಾರೆ.

ಈ ಮಹಿಳೆಯ ಬಗ್ಗೆ ಸುಳಿವು ದೊರೆತಲ್ಲಿ ಭದ್ರಾವತಿ ಹಳೇನಗರ ಪೊಲೀಸ್ ಠಾಣೆ ದೂ.ಸಂ.: 08282-266343 ನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಪೊಲೀಸ್ ಪ್ರಕಟಣೆ ತಿಳಿಸಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande