ಇಂದು ದೆಹಲಿ-ಡೆಹ್ರಾಡೂನ್ ಆರ್ಥಿಕ ಕಾರಿಡಾರ್ ಗೆ ಚಾಲನೆ
ನವದೆಹಲಿ, 14 ಏಪ್ರಿಲ್ (ಹಿ.ಸ.) : ಆ್ಯಂಕರ್ : ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಬಹು ನಿರೀಕ್ಷಿತ ದೆಹಲಿ-ಡೆಹ್ರಾಡೂನ್ ಆರ್ಥಿಕ ಕಾರಿಡಾರ್ ಯೋಜನೆಗೆ ಚಾಲನೆ ನೀಡಲಿದ್ದಾರೆ. ಸುಮಾರು 212 ಕಿಲೋಮೀಟರ್ ಉದ್ದದ ಆರು ಪಥದ ಪ್ರವೇಶ ನಿಯಂತ್ರಿತ ಹೆದ್ದಾರಿ ಯೋಜನೆಗೆ ₹12,000 ಕೋಟಿ ವೆಚ್ಚವಾಗಿದ್ದು, ದೇಶದ
Pm


ನವದೆಹಲಿ, 14 ಏಪ್ರಿಲ್ (ಹಿ.ಸ.) :

ಆ್ಯಂಕರ್ : ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಬಹು ನಿರೀಕ್ಷಿತ ದೆಹಲಿ-ಡೆಹ್ರಾಡೂನ್ ಆರ್ಥಿಕ ಕಾರಿಡಾರ್ ಯೋಜನೆಗೆ ಚಾಲನೆ ನೀಡಲಿದ್ದಾರೆ. ಸುಮಾರು 212 ಕಿಲೋಮೀಟರ್ ಉದ್ದದ ಆರು ಪಥದ ಪ್ರವೇಶ ನಿಯಂತ್ರಿತ ಹೆದ್ದಾರಿ ಯೋಜನೆಗೆ ₹12,000 ಕೋಟಿ ವೆಚ್ಚವಾಗಿದ್ದು, ದೇಶದ ಪ್ರಮುಖ ಮೂಲಸೌಕರ್ಯ ಯೋಜನೆಗಳಲ್ಲಿ ಒಂದಾಗಿ ಪರಿಗಣಿಸಲಾಗಿದೆ.

ಪ್ರಧಾನಮಂತ್ರಿಗಳ ಕಚೇರಿ ಪ್ರಕಟಿಸಿದ ಮಾಹಿತಿಯಂತೆ, ಈ ಕಾರಿಡಾರ್ ದೆಹಲಿ, ಉತ್ತರ ಪ್ರದೇಶ ಮತ್ತು ಉತ್ತರಾಖಂಡ ರಾಜ್ಯಗಳ ನಡುವೆ ಸಂಪರ್ಕ ವ್ಯವಸ್ಥೆಯನ್ನು ವೇಗಗೊಳಿಸಲಿದೆ. ಇದರ ಮೂಲಕ ವ್ಯಾಪಾರ, ಸಾರಿಗೆ ಹಾಗೂ ಪ್ರವಾಸೋದ್ಯಮ ಕ್ಷೇತ್ರಗಳಿಗೆ ಉತ್ತೇಜನ ದೊರೆಯಲಿದೆ.

ಪ್ರಧಾನಿ ಮೋದಿ ಅವರು ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ ಸಹರಾನ್ಪುರಗೆ ಭೇಟಿ ನೀಡಿ ವನ್ಯಜೀವಿ ಎತ್ತರದ ಕಾರಿಡಾರ್ ಪರಿಶೀಲಿಸಲಿದ್ದಾರೆ. ನಂತರ ಡೆಹ್ರಾಡೂನ್ ಸಮೀಪದ ಜೈ ಮಾ ದತ್ ಕಾಳಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಲಿದ್ದಾರೆ. ಬಳಿಕ ಮಧ್ಯಾಹ್ನ ಡೆಹ್ರಾಡೂನ್ನಲ್ಲಿ ನಡೆಯುವ ಸಾರ್ವಜನಿಕ ಸಮಾರಂಭದಲ್ಲಿ ಕಾರಿಡಾರ್ ಉದ್ಘಾಟನೆ ನೆರವೇರಿಸಿ ಜನರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ಈ ಕಾರಿಡಾರ್ ಕಾರ್ಯಾರಂಭವಾದ ನಂತರ ದೆಹಲಿಯಿಂದ ಡೆಹ್ರಾಡೂನ್ಗೆ ಪ್ರಯಾಣ ಸಮಯವು ಈಗಿನ 6 ಗಂಟೆಗಳಿಗಿಂತ ಹೆಚ್ಚು ಇರುವುದರಿಂದ ಸುಮಾರು 2 ಗಂಟೆಗೆ ಇಳಿಯಲಿದೆ. ಇದರಿಂದ ಪ್ರಯಾಣಿಕರಿಗೆ ವೇಗದ ಹಾಗೂ ಸುರಕ್ಷಿತ ಸಂಚಾರ ಸೌಲಭ್ಯ ದೊರೆಯಲಿದೆ.

ಯೋಜನೆಯಡಿ 10 ಇಂಟರ್ಚೇಂಜ್ಗಳು, 3 ರೈಲ್ವೆ ಮೇಲ್ಸೇತುವೆಗಳು, 4 ಪ್ರಮುಖ ಸೇತುವೆಗಳು ಹಾಗೂ 12 ರಸ್ತೆ ಬದಿ ಸೌಲಭ್ಯ ಕೇಂದ್ರಗಳನ್ನು ನಿರ್ಮಿಸಲಾಗಿದೆ. ಜೊತೆಗೆ, ಸುಧಾರಿತ ಸಂಚಾರ ನಿರ್ವಹಣಾ ವ್ಯವಸ್ಥೆ ಅಳವಡಿಸಲಾಗಿದೆ.

ಪರಿಸರ ಸಂರಕ್ಷಣೆಯನ್ನು ಗಮನದಲ್ಲಿಟ್ಟುಕೊಂಡು 12 ಕಿಲೋಮೀಟರ್ ಉದ್ದದ ವನ್ಯಜೀವಿ ಎತ್ತರದ ಕಾರಿಡಾರ್ ನಿರ್ಮಿಸಲಾಗಿದ್ದು, ಇದು ಏಷ್ಯಾದಲ್ಲೇ ಅತಿ ಉದ್ದದ ಕಾರಿಡಾರ್ಗಳಲ್ಲಿ ಒಂದಾಗಿದೆ. ಇದರೊಂದಿಗೆ ಜಾನುವಾರು ಮಾರ್ಗಗಳು, ಆನೆ ಅಂಡರ್ಪಾಸ್ಗಳು ಹಾಗೂ ಸುರಂಗ ಮಾರ್ಗಗಳನ್ನು ಸಹ ನಿರ್ಮಿಸಲಾಗಿದೆ.

ಒಟ್ಟಿನಲ್ಲಿ, ದೆಹಲಿ-ಡೆಹ್ರಾಡೂನ್ ಆರ್ಥಿಕ ಕಾರಿಡಾರ್ ಯೋಜನೆ ಪ್ರಾದೇಶಿಕ ಆರ್ಥಿಕಾಭಿವೃದ್ಧಿಗೆ ಹೊಸ ಉತ್ತೇಜನ ನೀಡುವ ಜೊತೆಗೆ ಪ್ರವಾಸೋದ್ಯಮ ಹಾಗೂ ಉದ್ಯಮಾವಕಾಶಗಳ ವೃದ್ಧಿಗೆ ಸಹಕಾರಿಯಾಗಲಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande