
ನವದೆಹಲಿ, 14 ಏಪ್ರಿಲ್ (ಹಿ.ಸ.) :
ಆ್ಯಂಕರ್ : ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಬೈಸಾಖಿ, ಬೋಹಾಗ್ ಬಿಹು, ಪುತಾಂಡು, ಪೊಯಿಲಾ ಬೈಸಾಖ್, ಬಿಜು ಹಾಗೂ ಮಹಾ ಬಿಶುಬಾ ಪಾನ ಸಂಕ್ರಾಂತಿ ಹಬ್ಬಗಳ ಅಂಗವಾಗಿ ದೇಶದ ಜನತೆಗೆ ಹಾರ್ದಿಕ ಶುಭಾಶಯಗಳನ್ನು ಕೋರಿದ್ದಾರೆ.
ಸಾಮಾಜಿಕ ಮಾಧ್ಯಮ ಎಕ್ಸನಲ್ಲಿ ಶುಭಾಶಯ ಸಂದೇಶ ಹಂಚಿಕೊಂಡಿರುವ ಅವರು, ದೇಶದ ವಿವಿಧ ಭಾಗಗಳಲ್ಲಿ ಹೊಸ ವರ್ಷದ ಆಗಮನವನ್ನು ಸೂಚಿಸುವ ಈ ಹಬ್ಬಗಳು ನವೀಕೃತ ಭರವಸೆ, ಆಶಾವಾದ ಮತ್ತು ಹೊಸ ಆರಂಭದ ಚೈತನ್ಯವನ್ನು ತರುತ್ತವೆ ಎಂದು ಅವರು ತಿಳಿಸಿದ್ದಾರೆ.
ಈ ಸಂದರ್ಭಗಳು ಪ್ರತಿಯೊಂದು ಮನೆಗೂ ಸಂತೋಷವನ್ನು ತಂದುಕೊಡಲಿ, ಸಮೃದ್ಧಿಗೆ ನಾಂದಿ ಹಾಡಲಿ ಹಾಗೂ ಸಮಾಜದಲ್ಲಿ ಏಕತೆ ಮತ್ತು ಸೌಹಾರ್ದತೆಯ ಬಂಧಗಳನ್ನು ಇನ್ನಷ್ಟು ಬಲಪಡಿಸಲಿ ಎಂದು ಖರ್ಗೆ ಆಶಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa