ಗಂಗಾವತಿ : ಬೆಳೆ ವಿಮಾ ತಿರಸ್ಕೃತ ಪ್ರಸ್ತಾವನೆಗಳಿಗೆ ಆಕ್ಷೆಪಣೆ ಅವಕಾಶ
ಗಂಗಾವತಿ, 13 ಏಪ್ರಿಲ್ (ಹಿ.ಸ.) : ಆ್ಯಂಕರ್ : 2025 ಹಿಂಗಾರು ಹಂಗಾಮಿನ ಹವಮಾನ ಆಧಾರಿತ ಬೆಳೆ ವಿಮಾ ಯೋಜನೆಯ ತಿರಸ್ಕೃತಗೊಂಡ ಪ್ರಸ್ತಾವನೆಗಳಿಗೆ ಆಕ್ಷೆಪಣೆಗಳನ್ನು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಗಂಗಾವತಿ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ತಿಳಿಸಿದ್ದಾರೆ. 2025 ಹಿಂಗಾರು ಹಂಗಾಮಿನ
ಗಂಗಾವತಿ : ಬೆಳೆ ವಿಮಾ ತಿರಸ್ಕೃತ ಪ್ರಸ್ತಾವನೆಗಳಿಗೆ ಆಕ್ಷೆಪಣೆ ಅವಕಾಶ


ಗಂಗಾವತಿ, 13 ಏಪ್ರಿಲ್ (ಹಿ.ಸ.) :

ಆ್ಯಂಕರ್ : 2025 ಹಿಂಗಾರು ಹಂಗಾಮಿನ ಹವಮಾನ ಆಧಾರಿತ ಬೆಳೆ ವಿಮಾ ಯೋಜನೆಯ ತಿರಸ್ಕೃತಗೊಂಡ ಪ್ರಸ್ತಾವನೆಗಳಿಗೆ ಆಕ್ಷೆಪಣೆಗಳನ್ನು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಗಂಗಾವತಿ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ತಿಳಿಸಿದ್ದಾರೆ.

2025 ಹಿಂಗಾರು ಹಂಗಾಮಿನ ಹವಮಾನ ಆಧಾರಿತ ಬೆಳೆ ವಿಮಾ ಯೋಜನೆಯ ಮೆಣಸಿಕಾಯಿ ಬೆಳೆ ಸಮೀಕ್ಷೆಯ ದತ್ತಾಂಶಗಳನ್ನು ಬೆಳೆನೊಂದಣಿ ಪ್ರಸ್ತಾವನೆಗಳೊಂದಿಗೆ ಹೋಲಿಕೆ ಮಾಡಿ ಹೊಂದಾಣಿಕೆಯಾಗದ ತಿರಸ್ಕೃತಗೊಂಡ ಪ್ರಸ್ತಾವನೆಗಳಿಗೆ ರೈತರಿಂದ ಆಕ್ಷೆಪಣೆಗಳನ್ನು ಸ್ವಿಕರಿಸಲು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು (ಜಿ.ಪಂ) ಗಂಗಾವತಿ ರವರ ಕಛೇರಿಯಿಂದ ನೋಟಿಸಗಳನ್ನು ಹೊರಡಿಸಲಾಗಿದೆ.

ಈ ನೋಟಿಸ್ಗಳ ಪ್ರತಿಯನ್ನು ರೈತರ ವಿವರಗಳೊಂದಿಗೆ ಸಂಭಂದಿಸಿದ ತಹಶಿಲ್ದಾರರ ಕಛೇರಿ, ಗ್ರಾಮ ಪಂಚಾಯಿತಿ ಹಾಗೂ ನಾಡ ಕಚೇರಿಗಳ ನೋಟಿಸ್ ಬೊರ್ಡಗಳಲ್ಲಿ ಪ್ರಕಟಿಸಲಾಗಿರುತ್ತದೆ.

ಅದರಂತೆ, ರೈತರು ಹಸಿ ಮೆನಸಿನಕಾಯಿ ಬೆಳೆ ವಿಮೆಯನ್ನು ಪಾವತಿಸಿರುತ್ತಾರೆ. ಬೆಳೆ ಸಮೀಕ್ಷೆ ದತ್ತಾಂಶಗಳನ್ನು ಬೆಳೆ ನೊಂದಣಿ ಪ್ರಸ್ತಾವಣೆಗಳೊಂದಿಗೆ ಹೊಲಿಕೆ ಮಾಡಿ ಹೊಂದಾಣಿಕೆಯಾಗದ ತಿರಸ್ಕೃತಗೊಂಡ ಪ್ರಸ್ತಾವಣೆಗಳಿಗೆ ಅಗತ್ಯ ದಾಖಲಾತಿಗಳಾದ ವಿಮೆಗೆ ನೊಂದಾಯಿಸಿದ ಬೆಳೆ ಇರುವ ಪಹಣಿ ಪತ್ರಿಕೆ ಹಾಗೂ ಇತರೆ ದಾಖಲಾತಿಗಳೊಂದಿಗೆ ರೈತರು ಆಕ್ಷೇಪಣೆಗಳನ್ನು ಸಲ್ಲಿಸಬಹುದು.

ಆಕ್ಷೇಪನೆಗಳನ್ನು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು (ಜಿ.ಪಂ) ಗಂಗಾವತಿ ರವರ ಕಛೇರಿಗೆ ಏಪ್ರಿಲ್ 23ರ ಒಳಗಾಗಿ ಸಲ್ಲಿಸಿ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande