ಅಲ್ಲೀಪುರದ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಬಾಲಕಿಯರ ವಸತಿ ಕಾಲೇಜಿಗೆ ಶೇ.99 ಫಲಿತಾಂಶ
ಬಳ್ಳಾರಿ, 13 ಏಪ್ರಿಲ್ (ಹಿ.ಸ.) : ಆ್ಯಂಕರ್ : ನಗರದ ಹೊರವಲಯದ ಅಲ್ಲೀಪುರದಲ್ಲಿರುವ ಡಾ.ಎ.ಪಿ.ಜೆ. ಅಬ್ದುಲ್ ಕಲಾಂ ಬಾಲಕಿಯರ ಪದವಿ ಪೂರ್ವ ವಸತಿ ಕಾಲೇಜು 2025-26ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಶೇ.99 ರಷ್ಟು ಅತ್ಯುತ್ತಮ ಗುಣಾತ್ಮಕ ಫಲಿತಾಂಶ ದಾಖಲಿಸುವ ಮೂಲಕ ಗಮನಾರ್ಹ ಸಾಧನೆ

ಬಳ್ಳಾರಿ, 13 ಏಪ್ರಿಲ್ (ಹಿ.ಸ.) :

ಆ್ಯಂಕರ್ : ನಗರದ ಹೊರವಲಯದ ಅಲ್ಲೀಪುರದಲ್ಲಿರುವ ಡಾ.ಎ.ಪಿ.ಜೆ. ಅಬ್ದುಲ್ ಕಲಾಂ ಬಾಲಕಿಯರ ಪದವಿ ಪೂರ್ವ ವಸತಿ ಕಾಲೇಜು 2025-26ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಶೇ.99 ರಷ್ಟು ಅತ್ಯುತ್ತಮ ಗುಣಾತ್ಮಕ ಫಲಿತಾಂಶ ದಾಖಲಿಸುವ ಮೂಲಕ ಗಮನಾರ್ಹ ಸಾಧನೆ ಮಾಡಿದೆ.

ಫಲಿತಾಂಶದ ವಿವರ :

ಕಾಲೇಜಿನ ವಿಜ್ಞಾನ ಮತ್ತು ವಾಣಿಜ್ಯ ವಿಭಾಗಗಳಿಂದ ಒಟ್ಟು 108 ವಿದ್ಯಾರ್ಥಿನಿಯರು ಪರೀಕ್ಷೆಗೆ ನೋಂದಾಯಿಸಿಕೊ0ಡಿದ್ದರು. ಇವರಲ್ಲಿ 107 ವಿದ್ಯಾರ್ಥಿನಿಯರು ಉತ್ತೀರ್ಣರಾಗಿದ್ದಾರೆ.

ಉತ್ತೀರ್ಣರಾದವರಲ್ಲಿ 57 ವಿದ್ಯಾರ್ಥಿನಿಯರು ಅತ್ಯುತ್ತಮ ದರ್ಜೆ, 47 ವಿದ್ಯಾರ್ಥಿನಿಯರು ಉತ್ತಮ ದರ್ಜೆ ಹಾಗೂ ಇಬ್ಬರು ದ್ವಿತೀಯ ದರ್ಜೆಯಲ್ಲಿ ಪಾಸಾಗಿದ್ದಾರೆ.

ವಿಜ್ಞಾನ ವಿಭಾಗದಲ್ಲಿ ಶೇ.100 ಸಾಧನೆ :

ವಿಜ್ಞಾನ ವಿಭಾಗದ ಒಟ್ಟು 56 ವಿದ್ಯಾರ್ಥಿನಿಯರು ಪರೀಕ್ಷೆ ಬರೆದಿದ್ದು, ಎಲ್ಲರೂ ಉತ್ತೀರ್ಣರಾಗುವ ಮೂಲಕ ಶೇ.100 ರಷ್ಟು ಫಲಿತಾಂಶ ತಂದಿದ್ದಾರೆ. ಈ ವಿಭಾಗದಲ್ಲಿ 36 ವಿದ್ಯಾರ್ಥಿನಿಯರು ಅತ್ಯುತ್ತಮ ದರ್ಜೆಯಲ್ಲಿ ತೇರ್ಗಡೆಯಾಗಿದ್ದು, 20ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಶೇ.90ಕ್ಕಿಂತ ಹೆಚ್ಚು ಅಂಕ ಗಳಿಸಿದ್ದಾರೆ.

ವಿಜ್ಞಾನ ವಿಭಾಗದ ಟಾಪರ್ಸ್ :

ದಾನೇಶ್ವರಿ (ಶೇ.97.33), ಫ್ರೀದೋಷ್.ಬಿ (ಶೇ.96.50), ಕೆ.ಎಂ.ಚAದನ (ಶೇ.96.16), ಸವಿತಾ (ಶೇ.96.16), ಸಂಗೀತ (ಶೇ.95.66) ಮತ್ತು ಕೆ.ಪೂರ್ಣಿಮಾ (ಶೇ.95.33) ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿನಿಯರು.

ವಾಣಿಜ್ಯ ವಿಭಾಗ :

ವಾಣಿಜ್ಯ ವಿಭಾಗದಲ್ಲಿ 52 ವಿದ್ಯಾರ್ಥಿನಿಯರು ಪರೀಕ್ಷೆ ಎದುರಿಸಿದ್ದು, ಇವರಲ್ಲಿ 21 ವಿದ್ಯಾರ್ಥಿನಿಯರು ಅತ್ಯುತ್ತಮ ದರ್ಜೆ ಹಾಗೂ 28 ವಿದ್ಯಾರ್ಥಿನಿಯರು ಉತ್ತಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ಈ ವಿಭಾಗದಲ್ಲಿ ಕಾಲೇಜು ಶೇ.98 ರಷ್ಟು ಫಲಿತಾಂಶ ಪಡೆದಿದೆ.

ವಾಣಿಜ್ಯ ವಿಭಾಗದ ಟಾಪರ್ಸ್ :

ಪವಿತ್ರಾ (ಶೇ.96), ಲೀಲಾವತಿ.ಎಂ. (ಶೇ.95.83), ಸಿಂಚನ (ಶೇ.95.50), ರೋಷನ್.ಬಿ(ಶೇ.93.83) ಮತ್ತು ಎಂ.ಸಹನಾ (ಶೇ.93.50) ವಿಭಾಗಕ್ಕೆ ಕೀರ್ತಿ ತಂದಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್

 rajesh pande