
ಸಿಲಿಗುರಿ, 12 ಏಪ್ರಿಲ್ (ಹಿ.ಸ.) :
ಆ್ಯಂಕರ್ : ಪಶ್ಚಿಮ ಬಂಗಾಳದಲ್ಲಿ ರಾಜಕೀಯ ಕಾವು ಏರಿಕೆಯಾಗಿರುವ ಹಿನ್ನೆಲೆ, ಪ್ರಧಾನಿ ನರೇಂದ್ರ ಮೋದಿ ಅವರು ತೃಣಮೂಲ ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. “ಈ ಬಾರಿಯ ಚುನಾವಣೆಯ ಬಳಿಕ ಬಂಗಾಳದಿಂದ ಮಮತಾ ಸರ್ಕಾರ ಹೊರಬರುವುದು ಖಚಿತ” ಎಂದು ಅವರು ಘೋಷಿಸಿದ್ದಾರೆ.
ಪಶ್ಚಿಮ ಬಂಗಾಳದ ಸಿಲಿಗುರಿಯಲ್ಲಿ ನಡೆದ ರ್ಯಾಲಿಯಲ್ಲಿ ಮಾತನಾಡಿದ ಪ್ರಧಾನಿ, “ಟಿಎಂಸಿ ಆಡಳಿತದಲ್ಲಿ ರಾಜ್ಯದ ಸ್ಥಿತಿ ಹದಗೆಟ್ಟಿದೆ. ಕಳೆದ ಕೆಲವು ವರ್ಷಗಳಲ್ಲಿ ಅದರ ಕುಸಿತವನ್ನು ಜನರು ನೇರವಾಗಿ ಕಂಡಿದ್ದಾರೆ” ಎಂದು ಟೀಕಿಸಿದರು.
ಡಾರ್ಜಿಲಿಂಗ್ ಜಿಲ್ಲೆಯ 5 ಸ್ಥಾನಗಳು ಹಾಗೂ ಜಲ್ಪೈಗುರಿ ಜಿಲ್ಲೆಯ 7 ಸ್ಥಾನಗಳಲ್ಲಿ ಬಿಜೆಪಿ ಅಭ್ಯರ್ಥಿಗಳಿಗೆ ಮತ ನೀಡುವಂತೆ ಕರೆ ನೀಡಿದ ಮೋದಿ, “ರಾಜ್ಯದ ಅಭಿವೃದ್ಧಿಗೆ ಬದಲು ಟಿಎಂಸಿ ಸರ್ಕಾರ ಮತ ಬ್ಯಾಂಕ್ ರಾಜಕಾರಣಕ್ಕೆ ಹೆಚ್ಚು ಒತ್ತು ನೀಡಿದೆ” ಎಂದು ಆರೋಪಿಸಿದರು.
ಮದರಸಾಗಳಿಗಾಗಿ ಸುಮಾರು ₹6000 ಕೋಟಿ ವೆಚ್ಚ ಮಾಡಿದರೂ, ಸಮಗ್ರ ಅಭಿವೃದ್ಧಿಗೆ ಗಮನ ನೀಡಿಲ್ಲ ಎಂದು ಟಿಎಂಸಿ ಸರ್ಕಾರವನ್ನು ಟೀಕಿಸಿದರು. “ಈ ಸರ್ಕಾರವು ನಿರ್ದಿಷ್ಟ ಸಮುದಾಯದ ಮತ ಬ್ಯಾಂಕ್ಗೆ ಮಾತ್ರ ಸೇವೆ ಮಾಡುತ್ತಿದೆ” ಎಂದು ಹೇಳಿದರು.
ಇದೇ ವೇಳೆ, ತಮ್ಮ ರೋಡ್ ಶೋಗೆ ದೊರೆತ ಜನಮೆಚ್ಚುಗೆಗೆ ಕೃತಜ್ಞತೆ ವ್ಯಕ್ತಪಡಿಸಿದ ಮೋದಿ, “ಸಿಲಿಗುರಿ ರ್ಯಾಲಿ ಟಿಎಂಸಿಗೆ ನಿದ್ದೆಯಿಲ್ಲದ ರಾತ್ರಿಗಳನ್ನು ನೀಡಲಿದೆ” ಎಂದು ಹೇಳಿದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa