
ನವದೆಹಲಿ, 12 ಏಪ್ರಿಲ್ (ಹಿ.ಸ.) :
ಆ್ಯಂಕರ್ : ಖ್ಯಾತ ಹಿನ್ನೆಲೆ ಗಾಯಕಿ, ಪದ್ಮವಿಭೂಷಣೆ ಆಶಾ ಬೋಸ್ಲೆ ಅಗಲಿಕೆಯಿಂದ ಸಂಗೀತದ ಒಂದು ಸುವರ್ಣ ಯೋಗವೇ ಅಂತ್ಯಗೊಂಡಂತಾಗಿದೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ ಜೋಶಿ ಕಂಬನಿ ಮಿಡಿದಿದ್ದಾರೆ.
ಆಶಾ ಭೋಸ್ಲೆ ಅವರು ಭಾರತೀಯ ಸಂಗೀತ ಲೋಕದ ಅಪ್ರತಿಮ ಹಿನ್ನೆಲೆ ಗಾಯಕಿಯಾಗಿದ್ದು, ಇವರ ನಿಧನದ ಸುದ್ದಿ ಕೇಳಿ ತೀವ್ರ ದುಃಖವಾಗಿದೆ. ಗಾನ ಕೋಗಿಲೆ ಅಗಲಿಕೆ ಸಂಗೀತ ಕ್ಷೇತ್ರಕ್ಕೆ ತುಂಬಲಾರದ ನಷ್ಟ ಉಂಟು ಮಾಡಿದೆ ಎಂದು ಸಂತಾಪ ವ್ಯಕ್ತಪಡಿಸಿದ್ದಾರೆ.
7 ದಶಕಗಳ ಕಾಲ ಸಂಗೀತ ಲೋಕವನ್ನಾಳಿದ ಈ ಬಹು ಭಾಷಾ ಗಾಯಕಿ, 12000ಕ್ಕೂ ಹೆಚ್ಚು ಹಾಡುಗಳಿಗೆ ಅದ್ಭುತ ಕಂಠಸಿರಿ ಮೂಲಕ ಭಾರತೀಯ ಚಿತ್ರರಂಗಕ್ಕೆ ನೀಡಿದ ಕೊಡುಗೆ ಅನನ್ಯ ಮತ್ತು ಚಿರಸ್ಮರಣೀಯ. ಅವರ ಹಾಡುಗಳು ಎಂದೆಂದಿಗೂ ಅಮರವಾಗಿ ಉಳಿಯಲಿವೆ ಎಂದು ಜೋಶಿ ಸ್ಮರಿಸಿದ್ದಾರೆ.
ಭಗವಂತ ಆಶಾ ಭೋಸ್ಲೆ ಅವರ ಆತ್ಮಕ್ಕೆ ಚಿರಶಾಂತಿ ಕರುಣಿಸಲಿ ಹಾಗೂ ಕುಟುಂಬಕ್ಕೆ, ಕೋಟ್ಯಂತರ ಅಭಿಮಾನಿಗಳಿಗೆ ನೋವು ಭರಿಸುವ ಶಕ್ತಿ ನೀಡಲೆಂದು ಪ್ರಲ್ಹಾದ ಜೋಶಿ ಪ್ರಾರ್ಥಿಸಿದ್ದಾರೆ
ಹಿಂದೂಸ್ತಾನ್ ಸಮಾಚಾರ್ / Rakesh Mahadevappa