ಜುಲೈ 3ರಿಂದ ಅಮರನಾಥ ಯಾತ್ರೆ ಆರಂಭ ; ಏಪ್ರಿಲ್ 15ರಿಂದ ನೋಂದಣಿ
ಜಮ್ಮು, 12 ಏಪ್ರಿಲ್ (ಹಿ.ಸ.) : ಆ್ಯಂಕರ್ : ಜಮ್ಮು-ಕಾಶ್ಮೀರದ ಪವಿತ್ರ ಅಮರನಾಥ ಗುಹೆಗೆ ನಡೆಯುವ ವಾರ್ಷಿಕ ಅಮರನಾಥ ಯಾತ್ರೆ ಈ ವರ್ಷ ಜುಲೈ 3ರಂದು ಪ್ರಾರಂಭವಾಗಿ ಆಗಸ್ಟ್ 28ರಂದು ಕೊನೆಗೊಳ್ಳಲಿದೆ. ಒಟ್ಟು 57 ದಿನಗಳ ಕಾಲ ನಡೆಯುವ ಈ ಯಾತ್ರೆಗೆ ಏಪ್ರಿಲ್ 15ರಿಂದ ನೋಂದಣಿ ಪ್ರಕ್ರಿಯೆ ಆರಂಭವಾಗಲಿದೆ. ಶ
ಅಮರನಾಥ ಯಾತ್ರೆ


ಜಮ್ಮು, 12 ಏಪ್ರಿಲ್ (ಹಿ.ಸ.) :

ಆ್ಯಂಕರ್ : ಜಮ್ಮು-ಕಾಶ್ಮೀರದ ಪವಿತ್ರ ಅಮರನಾಥ ಗುಹೆಗೆ ನಡೆಯುವ ವಾರ್ಷಿಕ ಅಮರನಾಥ ಯಾತ್ರೆ ಈ ವರ್ಷ ಜುಲೈ 3ರಂದು ಪ್ರಾರಂಭವಾಗಿ ಆಗಸ್ಟ್ 28ರಂದು ಕೊನೆಗೊಳ್ಳಲಿದೆ. ಒಟ್ಟು 57 ದಿನಗಳ ಕಾಲ ನಡೆಯುವ ಈ ಯಾತ್ರೆಗೆ ಏಪ್ರಿಲ್ 15ರಿಂದ ನೋಂದಣಿ ಪ್ರಕ್ರಿಯೆ ಆರಂಭವಾಗಲಿದೆ.

ಶ್ರೀ ಅಮರನಾಥ ದೇವಾಲಯ ಮಂಡಳಿ ಸಭೆಯಲ್ಲಿ ಈ ವೇಳಾಪಟ್ಟಿಯನ್ನು ಅಂತಿಮಗೊಳಿಸಲಾಗಿದ್ದು, ಸಭೆಗೆ ಜಮ್ಮು-ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ

ಅವರು ಅಧ್ಯಕ್ಷತೆ ವಹಿಸಿದ್ದರು.

ಯಾತ್ರೆಗೆ 13ರಿಂದ 70 ವರ್ಷದೊಳಗಿನ ಭಕ್ತರಿಗೆ ಮಾತ್ರ ಅವಕಾಶ ನೀಡಲಾಗಿದ್ದು, ನೋಂದಣಿ ಕಡ್ಡಾಯವಾಗಿದೆ. ದೇಶಾದ್ಯಂತ ಸುಮಾರು 556 ಬ್ಯಾಂಕ್ ಶಾಖೆಗಳ ಮೂಲಕ ಮುಂಗಡ ನೋಂದಣಿ ಸೌಲಭ್ಯ ಲಭ್ಯವಿದ್ದು, ಆನ್ಲೈನ್ ಮೂಲಕವೂ ನೋಂದಣಿ ಮಾಡಿಕೊಳ್ಳಬಹುದಾಗಿದೆ.

ನೋಂದಣಿಗಾಗಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಪಂಜಾಬ್ ನ್ಯಾಷನಲ್ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಆಕ್ಸಿಸ್ ಬ್ಯಾಂಕ್, ಎಸ್ ಬ್ಯಾಂಕ್ ಶಾಖೆಗಳು ಸೌಲಭ್ಯ ಒದಗಿಸಲಿವೆ.

ಜೂನ್ 19ರಂದು ಜ್ಯೇಷ್ಠ ಪೂರ್ಣಿಮೆಯ ಅಂಗವಾಗಿ ಮೊದಲ ಪೂಜೆ ನೆರವೇರಲಿದೆ. ಯಾತ್ರಾರ್ಥಿಗಳು ಎರಡು ಮಾರ್ಗಗಳ ಮೂಲಕ ಪವಿತ್ರ ಗುಹೆಯನ್ನು ತಲುಪಬಹುದು—ಅನಂತನಾಗ್ ಜಿಲ್ಲೆಯ ಸಾಂಪ್ರದಾಯಿಕ 48 ಕಿಮೀ ಉದ್ದದ ಪಹಲ್ಗಾಮ್ ಮಾರ್ಗ ಹಾಗೂ ಗಂಡರ್ಬಲ್ ಜಿಲ್ಲೆಯ 14 ಕಿಮೀ ಉದ್ದದ, ಹೆಚ್ಚು ಎತ್ತರದ ಬಾಲ್ತಾಲ್ ಮಾರ್ಗ.

ಪ್ರತಿ ವರ್ಷ ಸಾವಿರಾರು ಭಕ್ತರನ್ನು ಆಕರ್ಷಿಸುವ ಅಮರನಾಥ ಯಾತ್ರೆ, ದೇಶದ ಪ್ರಮುಖ ಧಾರ್ಮಿಕ ಯಾತ್ರೆಗಳಲ್ಲಿ ಒಂದಾಗಿ ಪರಿಗಣಿಸಲಾಗುತ್ತದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande