






ಬಳ್ಳಾರಿ, 11 ಏಪ್ರಿಲ್ (ಹಿ.ಸ.) :
ಆ್ಯಂಕರ್ : ಬಳ್ಳಾರಿಯ ಶ್ರೀ ವಾಸವಿ ಪಿಯು ಕಾಲೇಜಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ 70 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿ 07 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್, 34 ವಿದ್ಯಾರ್ಥಿಗಳು ಪ್ರಥಮದರ್ಜೆ ಮತ್ತು 13 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ತೇರ್ಗಡೆ ಹೊಂದಿ ಕಾಲೇಜು ಒಟ್ಟು ಶೇ. 85.50 ರಷ್ಟು ಫಲಿತಾಂಶವನ್ನು ಪಡೆದಿದೆ.
ಕಾಲೇಜಿನ ಪ್ರಾಂಶುಪಾಲರಾದ ರಾಜಾಭಕ್ಷಿ ಅವರು ಈ ಮಾಹಿತಿ ನೀಡಿದ್ದು, ವಿಜ್ಞಾನ ವಿಭಾಗದಲ್ಲಿ ಕುಮಾರಿ ಇ. ರಮಾದೇವಿ ಅವರು 600 ಅಂಕಗಳಿಗೆ 572 (ಶೇ. 95.33) ಅಂಕಗಳನ್ನು ಪಡೆಯುವ ಮೂಲಕ ಕಾಲೇಜಿನ ಟಾಪರ್ ಆಗಿದ್ದಾರೆ ಎಂದರು.
ಅದೇ ರೀತಿಯಲ್ಲಿ ಪವನ್ ಕಲ್ಯಾಣ್ 540 (ಶೇ. 90) ಅಂಕಗಳು, ಸಿ. ಸೂರಜ್ ಕುಮಾರ್ 532 (ಶೇ. 88.66), ಬಿ. ಗಣೇಶ್ 525 (ಶೇ. 87.5), ಜೈನಮಂ ಕಂಕರಿಯ 523 (ಶೇ. 87.16), ಉಮ್ಮೆ ಮಲೆಹ 516 (ಶೇ. 86) ಮತ್ತು ಚೇತನ್ ಚೌಧರಿ 514 (ಶೇ. 85) ಅಂಕಗಳನ್ನು ಪಡೆದು ಡಿಸ್ಟಿಂಕ್ಷನ್ನಲ್ಲಿ ಪಾಸಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಉಳಿದಂತೆ 34 ವಿದ್ಯಾರ್ಥಿಗಳು ಪ್ರಥಮದರ್ಜೆ ಮತ್ತು 13 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ಪಾಸಾಗಿದ್ದಾರೆ. ಕಾಲೇಜಿನ ಶೇಕಡಾವಾರು ಫಲಿತಾಂಶವು 85.50 ರಷ್ಟು ಆಗಿದೆ.
ಉತ್ತಮ ಸಾಧನೆ ಮಾಡಿರುವ ಎಲ್ಲಾ ವಿದ್ಯಾರ್ಥಿಗಳಿಗೂ ಶುಭ ಹಾರೈಸಿರುವ ಕಾಲೇಜಿನ ಆಡಳಿತ ಮಂಡಳಿಯು, ವಿದ್ಯಾರ್ಥಿಗಳ ಸಾಧನೆ ಮತ್ತು ಭವಿಷ್ಯ ಬೆಳಗಲಿ ಎಂದು ಹಾರೈಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್