ಕೇಂದ್ರ ಪ್ರಾಯೋಜಿತ ಕಾರ್ಯಕ್ರಮಗಳಿಗೆ ಆರ್ಥಿಕ ನೆರವು ಕಲ್ಪಿಸಲು ಸೂಚನೆ
ಕೇಂದ್ರ ಪ್ರಾಯೋಜಿತ ಕಾರ್ಯಕ್ರಮಗಳಿಗೆ ಆರ್ಥಿಕ ನೆರವು ಕಲ್ಪಿಸಲು ಸೂಚನೆ
ಕೋಲಾರ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ. ಪ್ರವೀಣ್ ಬಾಗೇವಾಡಿ ಬ್ಯಾಂಕರ್ಗಳ ಸಭೆ ನಡೆಸಿದರು.


ಕೋಲಾರ: ಮಾರ್ಚ್ ೦೯ (ಹಿ.ಸ)

ಆಂಕರ್ : ‘ಕೇಂದ್ರ ಪ್ರಾಯೋಜಿತ ಕಾರ್ಯಕ್ರಮಗಳಿಗೆ ಸಂಬ0ಧಿಸಿದ ಸಾಲ ಸೌಲಭ್ಯಗಳನ್ನು ಬ್ಯಾಂಕ್ಗಳು ಫಲಾನುಭವಿಗಳಿಗೆ ಒದಗಿಸಬೇಕು. ಈ ಮೂಲಕ ಅವರ ಕಣ್ಣೀರು ಒರೆಸುವ ಮಾನವೀಯ ಪ್ರಯತ್ನ ಮಾಡಬೇಕು. ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಡಾ. ಪ್ರವೀಣ್ ಪಿ. ಬಾಗೇವಾಡಿ ಅವರು ಬ್ಯಾಂಕ್ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಕೋಲಾರ ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಲೀಡ್ ಬ್ಯಾಂಕ್ನ ಜಿಲ್ಲಾಮಟ್ಟದ ಪರಿಶೀಲನಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕೋಲಾರ ಜಿಲ್ಲೆಯಲ್ಲಿ ನಡೆಯುತ್ತಿರುವ ವಾಣಿಜ್ಯ ವಹಿವಾಟುಗಳಿಂದಾಗಿ ಇಲ್ಲಿನ ಬ್ಯಾಂಕ್ಗಳಿಗೆ ಹಣ ಹೆರಳವಾಗಿ ಹರಿದುಬರುತ್ತಿದೆ. ಇದಕ್ಕೆ ಪ್ರತಿಯಾಗಿ ಕೇಂದ್ರದ ಯೋಜನೆಗಳನ್ನು ಸರಿಯಾಗಿ ಜಾರಿಗೆ ತರದೇ ಹೋದರೆ ಹೇಗೆ. ಬಡವರಿಗೆ ಸಾಲಸೌಲಭ್ಯ ಕೊಡದಿದ್ದರೆ ಹೇಗೆ? ಎಂದು ಅವರು ಪ್ರಶ್ನೆ ಮಾಡಿದರು. ಅಲ್ಲದೆ, ಜನರಿಗೆ ಸೌಲಭ್ಯಗಳನ್ನು ಸಕಾಲದಲ್ಲಿ ಒದಗಿಸಬೇಕು’ ಎಂದು ಅವರು ಕಟ್ಟಪ್ಪಣೆ ವಿಧಿಸಿದರು.

ಬ್ಯಾಂಕ್ಗಳು ಸಾಮಾನ್ಯ ಜನರ ಬೆನ್ನೆಲುಬಾಗಬೇಕು. ಬ್ಯಾಂಕ್ಗಳು ನೀಡುವ ಸಾಲ ಸೌಲಭ್ಯಗಳು ಉಪಕಾರ ಮತ್ತು ವ್ಯವಹಾರವೇ ಹೊರತು, ದಾನ–ಧರ್ಮವಲ್ಲ. ಈ ಅಂಶವನ್ನು ಬ್ಯಾಂಕ್ ಅಧಿಕಾರಿಗಳು ಮನವರಿಕೆ ಮಾಡಿಕೊಳ್ಳಬೇಕು.ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳ ಕುರಿತ ಜನಸಾಮಾನ್ಯರಿಗೆ ಮಾಹಿತಿ ನೀಡಲು ಲೀಡ್ ಬ್ಯಾಂಕ್ ಅಧಿಕಾರಿಗಳಿಗೆ ತಿಳಿಸಿದರು.

ಇದೇ ವೇಳೆ ಉದ್ಯೊಗಿನಿ, ಪಿಎಂಇಜಿಪಿ, ಪಿಎಂ ಸ್ವನಿಧಿ ಸೇರಿದಂತೆ ವಿವಿಧ ಯೋಜನೆಗಳ ಪ್ರಗತಿ ಪರಿಶೀಲನೆ ಸಭೆ ನಡೆಸಿ ಮಾಹಿತಿ ಪಡೆದುಕೊಂಡರು.ಪ್ರಧಾನಮAತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆ ಮತ್ತು ಪ್ರಧಾನ ಸುರಕ್ಷ ಭೀಮಾ ಯೋಜನೆ ಪ್ರಗತಿ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಅವರು ಕಳೆದ ೨ ತಿಂಗಳುಗಳಿAದ ಯಾವುದೇ ಪ್ರಗತಿ ಆಗಿಲ್ಲ ಹೀಗೇ ಮುಂದುವರೆದರೆ ಮೇಲಧಿಕಾರಿಗಳಿಗೆ ವರದಿ ನೀಡಲಾಗುವುದು. ಆದ್ಯತೆಯ ವಲಯದ ಮುಂಗಡಗಳ ಕಾರ್ಯಕ್ಷಮತೆ, ಸರ್ಕಾರಿ ಪ್ರಾಯೋಜಿತ ಯೋಜನೆಗಳ ಅನುಷ್ಠಾನದ ಕುರಿತು ಬ್ಯಾಂಕರ್ಗಳ ಪರಿಶೀಲನೆಗಾಗಿ ತೊಂÊಮಾಸಿಕ ಸಭೆಯಲ್ಲಿಚರ್ಚಿಸಲಾಯಿತು.

ಎಲ್ಲಾ ಬ್ಯಾಂಕಗರ್ಳಿಗೆ ಎಲ್ಲಾ ಸರ್ಕಾರಿ ಯೋಜನೆಯ ಸಮಯದೊಳಗೆವಿಲೇವಾರಿ ಸಾಲಗಳನ್ನು ಮಾಡುವಂತೆ ಸೂಚಿಸಿದರು ಮತ್ತು ಕೃಷಿ ಸೇರಿದಂತೆ ಆದ್ಯತೆಯ ವಲಯದ ಸಾಲಗಳಲ್ಲಿ ಹೆಚ್ಚಿನ ಸಾಲವನ್ನು ನೀಡುವಂತೆ ಖಾಸಗಿ ವಲಯದ ಬ್ಯಾಂಕುಗಳಿಗೆ ಸೂಚಿಸಿದರು. ಅಟಲ್ ಪಿಂಚಣಿ ಯೋಜನೆಯಡಿ ಗುರಿಯನ್ನು ಸಾಧಿಸಿದ್ದಕ್ಕಾಗಿ ಸಿಇಒ ಬ್ಯಾಂಕರ್ಗಳನ್ನು ಅಭಿನಂದಿಸಿದರು. ಭದ್ರತಾ ಸುರಕ್ಷಾತಾ ಯೋಜನೆಗಳ (ಪಿಎಂಜೆಜೆಬಿವೈ ಮತ್ತು ಪಿಎಂಎಸ್ಬಿವೈ) ಅಡಿಯಲ್ಲಿ ಗರಿಷ್ಠ ಜನರನ್ನು ಒಳಗೊಳ್ಳುವಂತೆ ಬ್ಯಾಂಕರ್ಗಳಿಗೆ ಸಲಹೆ ನೀಡಿದರು. ಪ್ರಧಾನ್ ಮಂತ್ರ ಸುರಕ್ಷಾ ಯೋಜನೆಯ ವಾರ್ಷಿಕ ಪ್ರೀಮಿಯಂ ರೂ. ೨೦ ಮತ್ತು ಪ್ರಧಾನ್ ಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆಯಡಿಯಲ್ಲಿ ವಾರ್ಷಿಕ ಪ್ರೀಮಿಯಂ ರೂ. ೪೩೬(ಪ್ರತಿ ತ್ರೈಮಾಸಿಕಕ್ಕೆ ಪ್ರೋ-ರೇಟಾ ಆಧಾರ). ಗ್ರಾಹಕರು ಈ ಯೋಜನೆಗಳನ್ನು ಬಳಸಿಕೊಳ್ಳುವಂತೆ ವಿನಂತಿಸಿದರು.

ಸಭೆಯಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಬೆಂಗಳೂರು ಎಲ್ ಡಿ ಓ ವಿಜಯಶ್ರೀ, ಕೆನರಾ ಬ್ಯಾಂಕ್ನ ಪ್ರಾದೇಶಿಕ ವ್ಯವಸ್ಥಾಪಕ ಎಂ. ಅರುಣ್ ಕುಮಾರ್., ಲೀಡ್ ಬ್ಯಾಂಕ್ ವ್ಯವಸ್ಥಾಪಕ ಮಹದೇವ್ ಜೋಷಿ, ನಬಾರ್ಡ್ನ ಎಜಿಎಂ ಹಿಮಾಂಷು ಶುಕ್ಲಾ, ಆರ್ ಎಸ್ ಇ ಟಿ ಐ ನಿರ್ದೇಶಕರು ಡಾ. ಯಲ್ಲೇಶ್ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು, ವಿವಿಧ ಬ್ಯಾಂಕ್ಗಳ ಆರ್ಎಂ ಅಧಿಕಾರಿಗಳು ಹಾಜರಿದ್ದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande