ರೈತರನ್ನು ಶೋಷಣೆ ಮಾಡುತ್ತಿರುವ ಲೇವಾದೇವಿ ಸಂಸ್ಥೆ ವಿರುದ್ಧ ಕ್ರಮಕ್ಕೆ ಒತ್ತಾಯ
ರೈತರನ್ನು ಶೋಷಣೆ ಮಾಡುತ್ತಿರುವ ಲೇವಾದೇವಿ ಸಂಸ್ಥೆ ವಿರುದ್ಧ ಕ್ರಮಕ್ಕೆ ಒತ್ತಾಯ
ಕೆಜಿಎಫ್ ತಾಲ್ಲೂಕಿನ ಬೇತಮಂಗಲದಲ್ಲಿ ರೈತರು ಮತ್ತು ಸಾರ್ವಜನಿಕರು ಶೋಷಣೆ ಮಾಡುತ್ತಿರುವ ಲೇವಾದೇವಿ ಸಂಸ್ಥೆಯ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಸಹಕಾರ ಸಂಘಗಳ ಉಪ ನಿಬಂಧಕರಿಗೆ ರೈತ ಸಂಘದಿ0ದ ಮನವಿ ಸಲ್ಲಿಸಲಾಯಿತು.


ಕೋಲಾರ, ಮಾರ್ಚ್ ೦೯ :

ಆ್ಯಂಕರ್:ಬೇತಮಂಗಲ ಮತ್ತು ಸುತ್ತಮುತ್ತಲ ಗ್ರಾಮಗಳ ಸಾರ್ವಜನಿಕರಿಗೆ, ರೈತರಿಗೆ ಮೋಸ ಮಾಡಿರುವ ಬೇತಮಂಗಲದ ‘ಮಾತಾಜಿ ಪಾನ್ ಬ್ರೋಕರ್’ ಸಂಸ್ಥೆಯ ವಿರುದ್ಧ ಕಾನೂನು ಕ್ರಮಕ್ಕೆ ಒತ್ತಾಯಿಸಿ ನಮ್ಮ ಕೋಲಾರ ರೈತ ಸಂಘವು ಸಹಕಾರ ಸಂಘಗಳ ಉಪ ನಿಬಂಧಕರಿಗೆ ದೂರು ನೀಡಿದರು.

ಕೋಲಾರ ಜಿಲ್ಲೆ, ಕೆ.ಜಿ.ಎಫ್ ತಾಲ್ಲೂಕಿನ ಬೇತಮಂಗಲದಲ್ಲಿರುವ ‘ಮಾತಾಜಿ ಪಾನ್ ಬ್ರೋಕರ್’ ಮಾಲೀಕರಾದ ಕಲ್ಯಾಣ್ಸಿಂಗ್ ಬಿನ್ ದುರ್ಗಾ ರಾಮ್ಜಿ ಇವರು ಕೆ.ಜಿ.ಎಫ್ ರಸ್ತೆಯ ಬೇತಮಂಗಲದಲ್ಲಿ ಗೋಲ್ಡ್ ಶಾಪ್ ಅನ್ನು ಸರ್ಕಾರದ ಗಮನಕ್ಕೆ ತರದೆ ಮುಚ್ಚಿದ್ದು, ಗಿರಿವಿ ಅಂಗಡಿ ವ್ಯವಹಾದಲ್ಲಿ ಹಲವಾರು ಮಂದಿಗೆ ಮೋಸ ಮಾಡಿ ಈಗ ಮಹಾಲಕ್ಷಿö್ಮ ಬೆಟ್ಟೆ ಅಂಗಡಿಯನ್ನು ಇದೇ ಬೇತಮಂಗಲದಲ್ಲಿ ತೆರೆದು ವ್ಯಾಪಾರ ನಡೆಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಬೇತಮಂಗಲ ಸುತ್ತಮುತ್ತ ಗ್ರಾಮಸ್ಥರಿಗೆ ಆಭರಣಗಳನ್ನು ಗಿರಿವಿ ಇಟ್ಟುಕೊಂಡು ಬಿಳಿ ಚೀಟಿಗಳನ್ನು ನೀಡಿ ಸರ್ಕಾರಕ್ಕೆ ತೆರಿಗೆ ಕಟ್ಟದೆ ವಂಚನೆ ಮಾಡಿಕಾನೂನು ಉಲ್ಲಂಘನೆ ಮಾಡಿದ್ದಾರೆ. ಸುಮಾರು ೬ ಕೆ.ಜಿ.ಯಷ್ಟು ಚಿನ್ನದ ಒಡವೆಗಳನ್ನು ಗಿರಿವಿ ಇಟ್ಟುಕೊಂಡು ಈಗ ಅಂಗಡಿಯನ್ನು ಮುಚ್ಚಿದ್ದಾನೆ. ಸುಮಾರು ೧೫ ವರ್ಷಗಳಿಂದ ಗಿರಿವಿ ಇಟ್ಟಿರುವವರು ನೂತನ ಬಟ್ಟೆ ಅಂಗಡಿಯ ಬಳಿ ಹೋಗಿ ಕೇಳಿದರೆ, ನಾಳೆ, ತಿಂಗಳು ಎಂದು ಸಬೂಬು ಹೇಳಿಕೊಂಡು ಯಾಮಾರಿಸುತ್ತಿದ್ದಾರೆ. ಈತನ ವಿಚಾರವಾಗಿ ಹಲವಾರು ದೂರುಗಳು ಬಂದಿರುತ್ತದೆ. ಕೋಟಿಗಾನಹಳ್ಳಿ ವೆಂಕಟಮ್ಮ ಕೋಂ ಎತ್ತುಗಳಪ್ಪ ಇವರ ೭೯.೬ಗ್ರಾಂ ಚೈನ್, ಕೋಟಿಗಾನಹಳ್ಳಿ ರವಿ ಎಂಬುವರ ೧ ಬ್ರಾಸ್ಲೈಟ್, ೨ ಉಂಗುರ ೨೫ಗ್ರಾಂ ಚಿನ್ನವನ್ನು ಮತ್ತು ಅಂಕತಟ್ನಹಳ್ಳಿ ಶಂಕರಪ್ಪನವರ ೪೦ ಗ್ರಾಂ ನೆಕ್ಲೇಸ್, ಸುಂಡ್ರಪಾಳ್ಯ ವೆಂಕಟೇಶ್ ಎಂಬುವರ ೩೫ಗ್ರಾಂ ಚೈನ್. ಅಲ್ಲದೆ ಸುಮಾರು ದೂರುಗಳು ಕೇಳಿಬಂದಿವೆ.

‘ಮಾತಾಜಿ ಪಾನ್ ಬ್ರೋಕರ್’ ವಿರುದ್ಧ ಕಾನೂನಾತ್ಮಕ ತನಿಖೆ ಮಾಡಿ, ಈತನ ಅಂಗಡಿ ಮತ್ತು ಮನೆಯನ್ನು ಜಪ್ತಿ ಮಾಡಿ, ಬಿಲ್ಲು ಬುಕ್ ಮತ್ತು ಲೆಡ್ಜರ್ಅನ್ನು ವಶಪಡಿಸಿಕೊಂಡು ತನಿಖೆ ಮಾಡಿ ಬೇರೆ ಯಾವುದೇ ಲೈಸೆನ್ಸ್ ನೀಡದಂತೆ ತಡೆ ಹಿಡಿದು ಇವರ ವಿರುದ್ಧ ಕೇಸು ದಾಖಲಿಸಿ, ಇವರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡು ಗಿರಿವಿ ಇಟ್ಟಿರುವ ಗ್ರಾಹಕರ ಒಡವೆಗಳನ್ನು ವಾಪಸ್ಸು ಕೊಡಲು ಸಂಘಟನಾಕಾರರು ಒತ್ತಾಯಿಸಿದ್ದಾರೆ.

ಈ ಸಂದರ್ಭದಲ್ಲಿ ಬಂಗಾರಪೇಟೆ ತಾಲ್ಲೂಕು ಅಧ್ಯಕ್ಷ ಆನಂದಗೌಡ, ಕೆಂಬೋಡಿ ನಾರಾಯಣಸ್ವಾಮಿ, ಕೃಷ್ಣಪ್ಪ, ತಮ್ಮೇಗೌಡ, ವೆಂಕಟಮ್ಮ, ರವಿ, ವೆಂಕಟೇಶಪ್ಪ, ಶಂಕರಪ್ಪ, ಸದಾನಂದ ಹಾಜರಿದ್ದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande