ಹೆಣ್ಣು ಎಲ್ಲರಿಗೂ ಸ್ಪೂರ್ತಿ ; ನಿವೃತ್ತ ಎಎಸ್ಐ ರವೀಂದ್ರನಾಥ್
ಹೆಣ್ಣು ಎಲ್ಲರಿಗೂ ಸ್ಪೂರ್ತಿ ; ನಿವೃತ್ತ ಎಎಸ್ಐ ರವೀಂದ್ರನಾಥ್
ಚುಟುಕು ಸಾಹಿತ್ಯ ಪರಿಷತ್ ಆಶ್ರಯದಲ್ಲಿ ಮಹಿಳಾ ದಿನಾಚರಣೆಯ ಅಂಗವಾಗಿ ಜಿಲ್ಲಾ ಅಂಗವಿಕಲರ ಕಲ್ಯಾಣ ಅಧಿಕಾರಿ ಆರ್ ಮಂಜುಳಾ ರವರನ್ನು ಸನ್ಮಾನಿಸಲಾಯಿತು.


ಕೋಲಾರ ೦೯ ಮಾರ್ಚ್(ಹಿ.ಸ)

ಆಂಕರ್ : ಮಹಿಳೆ ಎಂಬ ಬಲವೇ ಪುರುಷನಿಗೆ ಶಕ್ತಿ ತುಂಬುವ ಮಹಾ ಚೈತನ್ಯ ಎಂದು ನಿವೃತ್ತ ಎಎಸ್ಐ ರವೀಂದ್ರನಾಥ್ ಅಭಿಪ್ರಾಯಪಟ್ಟರು

ನಗರದ ಕೀಲುಕೋಟೆಯ ಅರುಣ್ ಲೇಔಟ್ನಲ್ಲಿ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ವತಿಯಿಂದ ಹಮ್ಮಿಕೊಂಡಿದ್ದ ಮಹಿಳಾ ದಿನಾಚರಣೆಯಲ್ಲಿ ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಕಲ್ಯಾಣ ಅಧಿಕಾರಿಯಾದ ಆರ್ ಮಂಜುಳಾ ಅವರನ್ನು ಅಭಿನಂದಿಸಿ ಮಾತಮಾಡಿದರು.

ಹೆಣ್ಣಿಲ್ಲದೆ ಜೀವವಿಲ್ಲ, ಹೆಣ್ಣಿಲ್ಲದೆ ಜೀವನವಿಲ್ಲ, ತನ್ನ ಸುತ್ತಲಿನ ಎಲ್ಲರಿಗೂ ಸ್ಫೂರ್ತಿ ನೀಡುವ ಶಕ್ತಿ ಮತ್ತು ದೃಢಸಂಕಲ್ಪ ಮಹಿಳೆ. ಮಹಿಳೆ ಕೇವಲ ಒಂದು ಕುಟುಂಬದ ಭಾಗವಲ್ಲ, ಸಮಾಜದ ಶಕ್ತಿ, ಸಂಸ್ಕೃತಿಯ ಸಾರಥಿ ಎಂದರು.

ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪಿ ನಾರಾಯಣಪ್ಪ ಮಾತಾನಾಡಿ ಮಹಿಳೆಯರ ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ಮತ್ತು ರಾಜಕೀಯ ಸಾಧನೆಗಳನ್ನು ಗೌರವಿಸುವ ಮತ್ತು ಲಿಂಗ ಸಮಾನತೆಗಾಗಿ ಜಾಗೃತಿ ಮೂಡಿಸುವ ದಿನ ಇದಾಗಿದೆ. ಇದು ಸಮಾನತೆ ಮತ್ತು ಮಹಿಳಾ ಸಬಲೀಕರಣಕ್ಕೆ ಒತ್ತು ನೀಡುತ್ತದೆ ಎಂದರು.

ಬೆಮೆಲ್ ಶ್ರೀನಿವಾಸ ಮಾತಾನಾಡಿ ಇತ್ತೀಚಿನ ದಿನಗಳಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ವಿರುದ್ಧ ಹೋರಾಟ ಮಾಡುವ ಹಾಗೂ ಮಹಿಳೆಯರ ಸಮಾನ ಹಕ್ಕುಗಳಿಗಾಗಿ ಹೋರಾಡುವ ಮಹಿಳಾ ಸಾಧಕಿಯರನ್ನು ಗೌರವಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದರು.

ಸ್ವರ್ಣಭೂಮಿ ಫೌಂಡೇಶನ್ ಅಧ್ಯಕ್ಷ ಬಿ.ಶಿವಕುಮಾರ್ ಮಾತಾನಾಡಿ ೧೯೦೦ರ ಆರಂಭದಲ್ಲಿ ಮಹಿಳಾ ಕಾರ್ಮಿಕರ ಚಳುವಳಿಗಳಿಂದ ಈ ದಿನ ಹೊರಹೊಮ್ಮಿದೆ ನಂತರ ೧೯೭೭ ರಲ್ಲಿ ವಿಶ್ವಸಂಸ್ಥೆಯು ಇದನ್ನು ಅಧಿಕೃತಗೊಳಿಸಿತು. ನಂತರದ ದಿನಗಳಲ್ಲಿ ವಿಶ್ವಸಂಸ್ಥೆ ಮಹಿಳೆಯರ ಸಾಧನೆಗಳನ್ನು ಕ್ರೀಡೆ, ವಿಜ್ಞಾನ, ರಾಜಕೀಯ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಗುರುತಿಸಿ ಇಂದು ಗುರುತಿಸುವ ಕಾರ್ಯ ನಮ್ಮದಾಗಬೇಕು ಎಂದರು.

ಟಿ ಸುಬ್ಬರಾಮಯ್ಯ ಮಾತಾನಾಡಿ ಪ್ರಪಂಚದಾದ್ಯAತ ಮಹಿಳೆಯರ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಅಂತಹ ಮಹಿಳೆಯರನ್ನು ಗುರುತಿಸುವ ಜವಾಬ್ದಾರಿ ನಮ್ಮೆಲ್ಲರದಾಗಬೇಕು

ಕವಿ ಡಾ. ಶರಣಪ್ಪ ಗಬ್ಬೂರು ಮಾತಾನಾಡಿ ಪ್ರಸ್ತುತ ದಿನಮಾನಗಳಲ್ಲಿ ಮಹಿಳೆ ಎಲ್ಲಾ ಕ್ಷೇತ್ರಗಳಲ್ಲಿ ತನ್ನನ್ನು ತಾನು ಗುರುತಿಸಿಕೊಂಡಿದ್ದಾಳೆ. ಪುರುಷ ಪ್ರಧಾನ ಸಮಾಜದಲ್ಲಿ ತನ್ನದೇ ಸ್ಥಾನವನ್ನು ಪಡೆಯುತ್ತಾ ದೇಶದ ಮುನ್ನೆಡೆಗೆ ತನ್ನ ಜ್ಞಾನವನ್ನು ಅರ್ಪಿಸಿಕೊಳ್ಳುತ್ತಿದ್ದಾಳೆ. ಹಾಗಾಗಿ ಇಂದಿನ ಎಲ್ಲಾ ಮಹಿಳೆಯರನ್ನು ಅಭಿನಂದಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದರು.

ಅಭಿನAದನೆಯನ್ನು ಸ್ವೀಕರಿಸಿ ಮಾತಾನಾಡಿದ ಜಿಲ್ಲಾ ಅಂಗವಿಕಲರ ಕಲ್ಯಾಣ ಅಧಿಕಾರಿ ಆರ್ ಮಂಜುಳಾ ರವರು ನನ್ನ ಅಧಿಕಾರಾವಧಿಯಲ್ಲಿ ಪ್ರಮಾಣಿಕವಾಗಿ ಕಾರ್ಯನಿರ್ವಹಿಸಿದ್ದೇನೆ ಎನ್ನುವ ಮನೋಭಾವವಿದೆ. ಸರ್ಕಾರದಿಂದ ಬರುವ ಎಲ್ಲಾ ಸೌಲಭ್ಯಗಳನ್ನು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಪ್ರಮಾಣಿಕವಾಗಿ ಕರಲಸ ಮಾಡಿದ್ದೇನೆ. ಇಂದಿನ ಮಹಿಳೆಯರು ಆಧುನಿಕ ಕಾಲಘಟ್ಟದಲ್ಲಿ ಎಲ್ಲಾ ಸ್ತರಗಳಲ್ಲಿ ಮುಂದುವರೆದಿದ್ದಾಳೆ. ಕುಟುಂಬದಿAದ ಹಿಡಿದು ಅಧಿಕಾರಿ ಗದ್ದುಗೆಯವರೆಗೂ ಅವಳ ಸೇವೆ ಅನನ್ಯವಾಗಿದೆ. ಹಾಗಾಗಿ ಇಂದಿನ ಪುರುಷ ಸಮಾಜ ಎಲ್ಲಾ ಮಹಿಳೆಯರನ್ನು ಗೌರವಿಸುವ ಮನೋಭಾವ ಬೆಳೆಸಬೇಕು. ಇತ್ತೀಚಿಗೆ ಮಹಿಳೆ ಮೇಲೆ ದಬ್ಬಾಳಿಕೆ, ದರ್ಪ, ಅತ್ಯಾಚಾರಗಳು ಹೆಚ್ಚಾಗಿ ನಡೆಯುತ್ತಿವೆ. ಮಹಿಳೆ ಹಗಲಿರುಳು ಶ್ರಮಿಸಿ ಇಂದಿನ ದಿನಗಳಲ್ಲಿ ದೇಶವನ್ನು ಅಭಿವೃದ್ಧಿಯ ಕಡೆಗೆ ಸಾಗಿಸುತ್ತಿರುವುದು ಅಭಿನಂದನಾರ್ಹ ವಿಷಯ ಎಂದರು.

ವೇದಿಕೆಯಲ್ಲಿ ಆರ್ ಮಂಜುಳಾ ಅಧಿಕಾರಿಯನ್ನು ಚುಟುಕು ಸಾಹಿತ್ಯ ಪರಿಷತ್ತಿನ ವತಿಯಿಂದ ಅಭಿನಂದಿಸಲಾಯಿತು. ಕಾರ್ಯಕ್ರಮದಲ್ಲಿ ಬಾಲಕೃಷ್ಣ, ಕೃಷ್ಣಪ್ಪ, ಭವನ್, ರಚಿತ, ಅಜಯ್, ಚಂಗಲ್, ಶಾಂತಮ್ಮ ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande