
ಕೋಲಾರ ೦೮, ಮಾರ್ಚ್ (ಹಿ.ಸ) :
ಆ್ಯಂಕರ್:ಜಿಲ್ಲೆಯ ಸಮಸ್ಯೆಗಳಿಗೆ ಸ್ಪಂದಿಸದ ಉಸ್ತುವಾರಿ ಸಚಿವರನ್ನು ಬದಲಾವಣೆ ಮಾಡಿ ಸ್ಥಳೀಯ ಶಾಸಕರಿಗೆ ಉಸ್ತುವಾರಿ ನೀಡಿ ರೈತ ಕೂಲಿ ಕಾರ್ಮಿಕರ ಸಮಸ್ಯೆಗಳಿಗೆ ಸ್ಪಂಧಿಸಿಬೇಕೆಂದು ರೈತ ಸಂಘದ ರಾಜ್ಯ ಉಪಾಧ್ಯಕ್ಷ ನಾರಾಯಣಗೌಡ ಮುಖ್ಯಮಂತ್ರಿಗಳನ್ನು ಒತ್ತಾಯಿಸಿದರು.
ಜಿಲ್ಲೆಯ ಸಮಸ್ಯೆಗಳ ಬಗ್ಗೆ ರೈತ ಪರ ದಲಿತಪರ ಸಂಘಟನೆಗಳು ಹಾಗೂ ರೈತ ಕೂಲಿಕಾರ್ಮಿಕರ ಸಮಸ್ಯೆ ಆಲಿಸಲು ಕನಿಷ್ಠ ೬ ತಿಂಗಳಿಗೊಮ್ಮ ಸಭೆ ಕರೆದು ವರಧಿ ಸಿದ್ದಪಡಿಸಿಕೊಂಡು ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತಂದು ಬಗೆಹರಿಸಬೇಕಾದ ಉಸ್ತುವಾರಿ ಸಚಿವರು ಕೆ.ಡಿ.ಪಿ ಹಾಗೂ ಜಯಂತಿಗಳ ಸಮಯದಲ್ಲಿ ಕಾಣಿಸಿಕೊಂಡು ನಾಪತ್ತೆಯಾದರೆ ಮತ್ತೆ ಕಾಣಿಸಿಕೊಳ್ಳುವುದು ಸ್ಥಳೀಯ ಕಾರ್ಯಕ್ರಮಗಳಿಗೆ ಬಂದು ಹೋಗುವ ಸಚಿವರು ಕೋಲಾರ ಜಿಲ್ಲೆಗೆ ನಾಮಕ ಅವ್ಯವಸ್ಥೆ ಉಸ್ತುವಾರಿ ಸಚಿವರು ಆಗಿದ್ದಾರೆಂದು ಆರೋಪಿಸಿದರು.
ಲಕ್ಷಾಂತರ ರೈತ ಕುಟುಂಬಗಳ ಜೀವನಾಡಿಯಾಗಿರುವ ಡಿ.ಸಿ.ಸಿ ಬ್ಯಾಂಕ್ ಹಾಲು ಒಕ್ಕೂಟ ದಿನೆ ದಿನೇ ಭ್ರಷ್ಠಾಚಾರದ ಕೂಪವಾಗಿದೆ ಪ್ರಾಮಾಣಿಕವಾಗಿ ಸಾಲ ಮರುಪಾವತಿ ಮಾಡಿರುವ ರೈತರ ಶ್ರೀ ಶಕ್ತಿ ಸಂಘಗಳಿಗೆ ಸಾಲ ನೀಡುತ್ತಿಲ್ಲ ರೈತರ ಹೆಸರಿನಲ್ಲಿ ಲೂಟಿ ಮಾಡುವ ಅಧಿಕಾರಿಗಳು ಕ್ರಮ ಕೈಗೊಳ್ಳಲು ಮುಂದಾಗುವ ತನಿಖಾಧಿಕಾರಿಗಳಿಗೆ ಆತ್ಮಹತ್ಯೆ ಬೆದರಿಕೆ ಹಾಕುವ ಜೊತೆಗೆ ಹಾಲು ಒಕ್ಕೂಟ ರೈತರ ಪಾಲಿಗೆ ಕಹಿಯಾಗಿ ಹಾಗೂ ಎರಡು ಸಂಸ್ಥೆಗಳು ಉಳಿವಿಗಾಗಿ ಸಚಿವರು ಏಕೆ ಮುಂದಾಗುತ್ತಿಲ್ಲವೆಂದು ಪ್ರಶ್ನೆ ಮಾಡಿದ್ದಾರೆ.
ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ ಮಾತನಾಡಿ ಜಿಲ್ಲೆಯ ಸಮಸ್ಯೆಗಳನ್ನು ಆಲಿಸಲು ಸಮಯ ಇಲ್ಲದೆ ಇದ್ದರೆ ಏಕೆ ಕೋಲಾರ ಉಸ್ತುವಾರಿ ವಹಿಸಿಕೊಳ್ಳಬೇಕಾಗಿತ್ತು ಸಮಸ್ಯೆಗಳ ಬಗ್ಗೆ ಮನವಿ ಸಲ್ಲಿಸಲು ಬರುವ ರೈತ ಸಂಘದ ಕಾರ್ಯಕರ್ತರಿಗೆ ಸಮಯವು ಕೊಡುವುದಿಲ್ಲ ಆಲಿಸುವುದಿಲ್ಲ ಅತಂಹ ಸಚಿವರು ನಮಗೆ ಬೇಕೆ? ರೈತರ ನೊರೊಂದು ಸಮಸ್ಯೆ ಇದೆ ಮಾರುಕಟ್ಟೆ ಜಾಗದ ಸಮಸ್ಯೆ ಅನಧಿಕೃತ ನರ್ಸರಿಗಳು ನಕಲಿ ಬಿತ್ತನೆ ಬೀಜಗಳು ಕೀಟ ನಾಶಗಳ ಹಾವಳಿ ರಸ್ತೆಗೆ ಭೂಮಿ ಕಳೆಕೊಂಡಿರುವ ರೈತರ ಪರಿಹಾರದ ಸಮಸ್ಯೆ ಬೇಸಿಗೆ ಪ್ರಾರಂಭವಾಗಿದ್ದು ಕುಡಿಯುವ ನೀರು ಜಾನುವಾರಗಳಿಗೆ ಮೇವಿನ ಸಮಸ್ಯೆ ಗಂಭೀರವಾಗಿದ್ದರು ತಲೆ ಕೆಡಿಸಿಕೊಳ್ಳದ ಉಸ್ತುವಾರಿ ಸಚಿವರಾದ ಬೈರತಿ ಸುರೇಶರವರನ್ನು ಬದಲಾವಣೆ ಮಾಡಿ ಜಿಲ್ಲೆಯ ಸಮಸ್ಯೆಗಳ ಬಗ್ಗೆ ಆರಿವು ಇರುವ ಸ್ಥಳೀಯ ಹಿರಿಯ ಶಾಸಕರಿಗೆ ಕೋಲಾರ ಉಸ್ತುವಾರಿ ನೀಡಿ ಎಂದು ಮಾನ್ಯ ಮುಖ್ಯಮಂತ್ರಿಗಳನ್ನು ಒತ್ತಾಯಿಸಿದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್