
ಕೋಲಾರ, ೭ ಮಾರ್ಚ್ (ಹಿ.ಸ):
ಆಂಕರ್ : ಕಳಂಕ ತಾರತಮ್ಯ ಅಂಜಿಕೆ ಹಿಂಜರಿಕೆ ಮುಕ್ತ ಸಮಾಲೋಚನೆ ಇಲ್ಲದಿರುವುದು ಹಾಗೂ ತಿಳುವಳಿಕೆ ಕೊರತೆಯಿಂದ ಸವಾಲಾಗಿ ಪರಿಣಮಿಸಿರುವ ಮೂರ್ಛೆ ರೋಗದ ವಿರುದ್ಧ ಸಾರ್ವಜನಿಕವಾಗಿ ಜಾಗೃತಿ ಮೂಡಿಸುವುದರಿಂದ ಪರಿಹಾರ ರೂಪಿಸಲು ಸಾಧ್ಯ ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಹೇಳಿದರು.
ತಾಲೂಕಿನ ವೇಮಗಲ್ ಸರಕಾರಿ ಆಸ್ಪತ್ರೆಯಲ್ಲಿ ರೋಟರಿ ಸಂಸ್ಥೆ, ಆಸ್ಟೆರ್ ಆಸ್ಪತ್ರೆ, ಆರೋಗ್ಯ ಇಲಾಖೆವತಿಯಿಂದ ಕೋಲಾರ ಜಿಲ್ಲೆಯನ್ನು ಮೂರ್ಛೆ ರೋಗ ಮುಕ್ತ ಜಿಲ್ಲೆಯನ್ನಾಗಿಸಲು ಹಮ್ಮಿಕೊಂಡಿದ್ದ ಮೊದಲ ಮೂರ್ಛೆ ರೋಗ ತಪಾಸಣಾ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.
ಮೂರ್ಛೆ ರೋಗವು ಕಾಯಿಲೆ ಅಲ್ಲ. ಆದರೆ, ಪೂರ್ವಾಗ್ರಹ ಪೀಡಿತ ಹುಸಿ ಕಲ್ಪನೆಗಳಿಂದ ಉಂಟಾಗಿರುವ ಮನಸ್ಥಿತಿ ಅಡೆತಡೆಗಳಿಂದ ರೋಗ ನಿವಾರಣೆ ಸವಾಲಾಗಿದ್ದು, ಮುಕ್ತ ಸಮಾಲೋಚನೆ ಹಾಗೂ ಇಂತಹ ಶಿಬಿರಗಳ ಪ್ರಯೋಜನ ಪಡೆದುಕೊಂಡು ಮೂರ್ಛೆ ರೋಗವನ್ನು ನಿರ್ಮೂಲನೆ ಮಾಡಲು ಪ್ರತಿಯೊಬ್ಬರೂ ಸಹಕರಿಸಬೇಕು. ಕೋಲಾರ ಜಿಲ್ಲೆ ಸೇರಿದಂತೆ ರಾಜ್ಯ ಮಟ್ಟದಲ್ಲಿಯೂ ಮೂರ್ಛೆ ರೋಗಿಗಳ ನಿಖರ ಸಂಖ್ಯೆ ಕುರಿತು ಅಂಕಿ ಅಂಶಗಳಿಲ್ಲ, ಆದರೆ, ಮೂರ್ಛೆ ರೋಗವು ಸಾಮಾನ್ಯವಾಗಿದ್ದು ಬಹಿರಂಗಪಡಿಸುತ್ತಿಲ್ಲ, ರೋಟರಿ ಸಂಸ್ಥೆಯ ಸಹಯೋಗದಲ್ಲಿ ದೇಶದಲ್ಲಿಯೇ ಮೊಟ್ಟ ಮೊದಲ ಬಾರಿಗೆ ಕೋಲಾರ ಜಿಲ್ಲೆಯನ್ನು ಮೂರ್ಛೆ ರೋಗ ಮುಕ್ತ ಜಿಲ್ಲೆಯನ್ನಾಗಿಸಲು ಮೂರು ವರ್ಷಗಳ ಯೋಜನೆಗೆ ಇಂದು ವೇಮಗಲ್ನಲ್ಲಿ ಚಾಲನೆ ನೀಡುತ್ತಿದ್ದು, ಇದನ್ನು ಸದ್ಬಳಕೆ ಮಾಡಿಕೊಳ್ಳಬೇಕೆಂದು ಕೋರಿದರು.
ಮೂರ್ಛೆ ರೋಗ ಪರಿಣಿತ ವೈದ್ಯ ಡಾ.ಸತೀಶ್ ರುದ್ರಪ್ಪ ಮಾತನಾಡಿ, ಒಟ್ಟು ಜನಸಂಖ್ಯೆಯ ನಾಲ್ಕರಲ್ಲಿ ಒಬ್ಬರಿಂದ ಮೂರ್ಛೆ ರೋಗದ ಬಗ್ಗೆ ಮಾಹಿತಿ ಪಡೆಯಬಹುದಾಗಿದೆ, ದೇಶದಲ್ಲಿ ಸುಮಾರು ೧.೫೦ ಕೋಟಿ ಮಂದಿ ಈ ಸಮಸ್ಯೆಯಿಂದ ನರಳುತ್ತಿದ್ದಾರೆ, ಇದು ಸಾಮಾನ್ಯವಾಗಿ ಮೆದುಳಿನ ಸಮಸ್ಯೆಯಾಗಿದೆ ಕಾಯಿಲೆಯಲ್ಲ, ವಿವಿಧ ವಯೋಮಾನಗಳಲ್ಲಿ ಹಲವಾರು ರೂಪಗಳಲ್ಲಿ ಮೂರ್ಛೆ ರೋಗ ಕಾಣಿಸಿಕೊಳ್ಳಬಹುದಾಗಿದೆ, ಈ ರೋಗ ನಿವಾರಣೆಗಾಗಿಯೇ ಕಳೆದ ಐದು ವರ್ಷಗಳಿಂದ ರೋಗಿಗಳ ಮನೆ ಬಾಗಿಲಿಗೆ ರೋಟರಿ ಸಂಸ್ಥೆ ಸಹಯೋಗದಲ್ಲಿ ಚಿಕಿತ್ಸಾ ಸೌಲಭ್ಯ ಕಲ್ಪಿಸಿ ಸುಮಾರು ೪ ಸಾವಿರ ಮಂದಿಗೆ ಚಿಕಿತ್ಸೆ ಕೊಡಿಸಲಾಗಿದೆ. ಕೋಲಾರ ಜಿಲ್ಲೆಯಲ್ಲಿ ಈವರೆವಿಗೂ ೭ ತಪಾಸಣಾ ಶಿಬಿರಗಳನ್ನು ನಡೆಸುವ ಮೂಲಕ ೧೬೭೦ ಮಂದಿಗೆ ಚಿಕಿತ್ಸೆ ನೀಡಲಾಗಿದೆ, ಕೋಲಾರ ಜಿಲ್ಲೆಯನ್ನು ಪ್ರಾಯೋಗಿಕ ಯೋಜನೆಯಡಿ ಮೂರ್ಛೆ ರೋಗ ಮುಕ್ತ ಜಿಲ್ಲೆಯನ್ನಾಗಿಸಲು ಮುಂದಿನ ಮೂರು ವರ್ಷಗಳ ಅವಧಿಗೆ ಜಿಲ್ಲೆಯಾದ್ಯಂತ ಮೂರ್ಛೆ ರೋಗ ತಪಾಸಣಾ ಶಿಬಿರಗಳನ್ನು ತಿಂಗಳಿಗೊ0ದರ0ತೆ ಆಯೋಜಿಸಲಾಗುವುದು ಎಂದು ಪ್ರಕಟಿಸಿದರು. ಇದಕ್ಕಾಗಿಯೇ ವಿಶೇಷವಾಗಿ ಜಗತ್ತಿನಲ್ಲಿಯೇ ಮೊಟ್ಟ ಮೊದಲ ಬಾರಿಗೆ ಚಿಕಿತ್ಸಾ ವಾಹನವನ್ನು ರೂಪಿಸಿದ್ದು, ಈ ವಾಹನಕ್ಕೆ ವೇಮಗಲ್ನಲ್ಲಿಯೇ ಚಾಲನೆ ಸಿಗುತ್ತಿರುವುದು ಸಂತಸ ತಂದಿದೆ ಎಂದರು.
ರೋಟರಿ ಸಹಾಯಕ ರಾಜ್ಯಪಾಲ ಸಿ.ಎಂ.ಆರ್.ಶ್ರೀನಾಥ್ ಮಾತನಾಡಿ, ರೋಟರಿ ಸಂಸ್ಥೆಯು ಜಗತ್ತಿನಾದ್ಯಂತ ನಡೆಸಿರುವ ಪೊಲೀಯೋ ಮುಕ್ತ ಅಭಿಯಾನದ ಮಾದರಿಯಲ್ಲಿಯೇ ಮೊದಲ ಬಾರಿಗೆ ಮೂರ್ಛೆ ರೋಗ ಮುಕ್ತ ಕೋಲಾರ ಜಿಲ್ಲೆಯನ್ನಾಗಿಸಲು ರೋಟರಿ ಸಂಸ್ಥೆಯು ವೇಮಗಲ್ನಲ್ಲಿ ಚಾಲನೆ ನೀಡುತ್ತಿದೆ, ಇದಕ್ಕಾಗಿಯೇ ವಿಶೇಷವಾಗಿ ೧.೫೦ ಕೋಟಿ ರೂಪಾಯಿ ವೆಚ್ಛದ ಚಿಕಿತ್ಸಾ ವಾಹನವನ್ನು ಸಿದ್ಧಪಡಿಸಲಾಗಿದೆ, ಈ ಕಾರ್ಯಕ್ರಮದ ಮೂಲಕವೇ ಲೋಕಾರ್ಪಣೆಯಾಗುತ್ತಿ ೆಎಂದರು.
ಕಾರ್ಯಕ್ರಮದಲ್ಲಿ ಮೂರ್ಛೆ ರೋಗ ತಜ್ಞ ಡಾ.ರವೀಶ್, ರೋಟರಿ ರಾಜ್ಯಪಾಲ ಡಾ.ಅನಿಲಗುಪ್ತ, ವೇಮಗಲ್ ಪಟ್ಟಣ ಪಂಚಾಯ್ತಿ ಅಧ್ಯಕ್ಷೆ ಡಿ.ಅನೂಷಾ, ಉಪಾಧ್ಯಕ್ಷ ಸಿ.ಎಸ್.ವೆಂಕಟೇಶ್, ಮುಖ್ಯಾಧಿಕಾರಿ ಎಸ್.ಎಂ.ವೆ0ಕಟೇಶ್, ತಾಲೂಕು ಆರೋಗ್ಯಾಧಿಕಾರಿ ಡಾ.ಎ.ವಿ.ನಾರಾಯಣಸ್ವಾಮಿ, ಎಲ್ಜಿ ಫೌಂಡೇಷನ್ ಲಕ್ಷ÷್ಮಣಗೌಡ, ವೇಮಗಲ್ ಆಸ್ಪತ್ರೆಯ ಡಾ.ರವಿಕಿರಣ್, ಪಟ್ಟಣ ಪಂಚಾಯ್ತಿ ಸದಸ್ಯರಾದ ನಾಗೇಶ್, ಸುಜಾತಾ ಮುನಿರಾಜು, ಜೆಸಿಬಿ ರವಿ, ದೀಪಾ, ಶಿಲ್ಪಾ ಶಂಕರ್, ರೋಟರಿ ಜಿಲ್ಲಾ ರಾಜ್ಯಪಾಲ ಎಸ್.ಸುಧಾಕರ್, ರೋಟರಿ ಸೆಂಟ್ರಲ್ ಅಧ್ಯಕ್ಷ ಸೈನ್ಸ್ ನಾಗರಾಜ್, ರೋಟೆರೀಯನ್ನರಾದ ರಾಜ್ಕುಮಾರ್, ಕೆಎನ್ಎನ್ ಪ್ರಕಾಶ್, ರಮೇಶ್, ಮಂಜುನಾಥ್, ರಾಮಚಂದ್ರಗೌಡ, ಸಿ.ಆರ್.ಅಶೋಕ್, ಶ್ರೀನಾಥ್, ಪ್ರಭಾಕರ್ ಭಾಗಿಯಾಗಿದ್ದರು.ಇದೇ ಸಂದರ್ಭದಲ್ಲಿ ವೇಮಗಲ್ ಸುತ್ತಮುತ್ತಲಿನ ನೂರಾರು ಮಂದಿ ಮೂರ್ಛೆ ರೋಗ ತಪಾಸಣಾ ಶಿಬಿರದ ಪ್ರಯೋಜನ ಪಡೆದುಕೊಂಡರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್