
ಗದಗ, 07 ಮಾರ್ಚ್ (ಹಿ.ಸ.)
ಆ್ಯಂಕರ್:- ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ಧರಾಮಯ್ಯನವರು ತಮ್ಮ 17ನೇ ಬಜೆಟ್ನ್ನು ಮಂಡಿಸಿದ್ದು ಇದೊಂದು ಯಾವುದೆ ಅಭಿವೃದ್ಧಿ ಇಲ್ಲದ, ಅಭಿವೃದ್ಧಿ ಶೂನ್ಯ ನಿರಾಶದಾಯಕ ಬಜೆಟ್ ಆಗಿದೆ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ರಾಜು ಕುರುಡಗಿ ರವರು ರಾಜ್ಯ ಸರ್ಕಾರದ ಬಜೆಟ್ನ್ನು ತೀವ್ರವಾಗಿ ಟೀಕಿಸಿದ್ದಾರೆ.
ಅವರು ಪತ್ರಿಕಾ ಹೇಳಿಕೆಯನ್ನು ಬಿಡುಗಡೆ ಮಾಡಿ ರಾಜ್ಯದ ಜನಕ್ಕೆ ನಿರಾಸೆ ಉಂಟು ಮಾಡಿದ ಕಾಂಗ್ರೇಸ್ ನೇತೃತ್ವದ ರಾಜ್ಯ ಸರ್ಕಾರದ ಬಜೇಟ್ ಕುರಿತು ಮಾತನಾಡಿದರು. ಚುನಾವಣಾ ಸಂದರ್ಭದಲ್ಲಿ ಘೋಷಿಸಿದ್ದ 5 ಗ್ಯಾರಂಟಿಗಳ ಜಾರಿಗೆ ಸಾಲ ಪಡೆಯಲು ಸರ್ಕಾರ ತೀರ್ಮಾನಿಸಿದೆ. ಸಾಲ ಮಾಡಿ ತುಪ್ಪ ತಿನ್ನಿಸುವ ಬಜೆಟ್ ಇದಾಗಿದೆ ಚುನಾವಣೆಯ ಬಳಿಕ ಕಾಂಗ್ರೇಸ್ ಜನ ವಿರೋಧಿ ನೀತಿ ಅನುಸರಿಸುತ್ತಿದೆ.
ಉತ್ತರ ಕರ್ನಾಟಕದ ಅನೇಕ ಯೋಜನೆಗಳಿಗೆ ಬಜೆಟ್ನಲ್ಲಿ ಮನ್ನಣೆ ನೀಡಿಲ್ಲಾ ನೀರಾವರಿ ಯೋಜನೆಗಳಿಗೆ, ಕೈಗಾರಿಕೆಗಳಿಗೆ, ಕೃಷಿಕ ರೈತರಿಗೆ ಅನುಕೂಲಕರವಾಗುವ ಯಾವುದೇ ಯೋಜನೆಗಳು ಬಜೆಟ್ನಲ್ಲಿ ಕಂಡು ಬಂದಿಲ್ಲಾ. ಯುವಕ-ಯುವತಿಯರಿಗೆ ಉದ್ಯೋಗ ಆಧಾರಿತ ಕೈಗಾರಿಕೆಗಳ ಯೋಜನೆ ಸೃಷ್ಠಿ ಶೂನ್ಯ. ಈ ಬಜೆಟ್ನಲ್ಲಿ ಅಲ್ಪಸಂಖ್ಯಾತರ ಓಲೈಕೆಗಾಗಿ ಬಹುಸಂಖ್ಯಾತರಿಗೆ ತೆರಿಗೆ ಕಟ್ಟುವ ಜನರಿಗೆ ಈ ಬಜೆಟ್ನಲ್ಲಿ ಅನ್ಯಾಯವಾಗಿದೆ.
ರಾಜ್ಯದಲ್ಲಿರುವದು ಅಲ್ಪಸಂಖ್ಯಾತರ ಸರ್ಕಾರವಾಗಿದೆ ಅಲ್ಪಸಂಖ್ಯಾತರಿಗಾಗಿ ಅಲ್ಪಸಂಖ್ಯಾತರಿಗೊಸ್ಕರ ಇರುವ ಬಜೆಟ್ ಇದಾಗಿದೆ. ಬೇರೆ ಕೋಮಿನವರು ಈ ಸರ್ಕಾರಕ್ಕೆ ಮತವನ್ನು ನೀಡಿಲ್ಲವೇ? ಬೇರೆ ಜಾತಿಯಲ್ಲಿ ಬಡವರಿಲ್ಲವೇ? ಎಸ್.ಸಿ,ಎಸ್.ಟಿ ಹಣವನ್ನು ಸರಿಯಾಗಿ ಉಪಯೋಗಿಸುವ ಬಗ್ಗೆ ಯಾವುದೆ ಸ್ಪಷ್ಟತೆ ಇಲ್ಲಾ. ರಾಜ್ಯದ ಅಭಿವೃದ್ಧಿ ಕಳೆದ 3 ವರ್ಷಗಳಿಂದ ಕಡಿಮೆಯಾಗುತ್ತ ಬಂದಿದೆ. ಒಂದು ರೀತಿ ಸರ್ಕಾರ ದಿವಾಳಿಯಾಗಿದೆ.
ಗ್ರಾಮೀಣ ರಸ್ತೆ ಸುಧಾರಣೆಗೆ ಯಾವುದೆ ಕ್ರಮವನ್ನು ತೆಗೆದುಕೊಂಡಿಲ್ಲಾ. ಸಾಲ ಮಾಡಿ ಮನೆ ನಡೆಸುವ ಸರ್ಕಾರ ಇದಾಗಿದೆ. ಆದಾಯ ಕೂಡಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ. ರಾಜ್ಯವನ್ನು ಹಿಂದಕ್ಕೆ ತೆಗೆದುಕೊಂಡು ಹೋಗುವ ಬಜೆಟ್ ಇದಾಗಿದೆ ಎಂದು ಬಿಜೆಪಿ ಗದಗ ಜಿಲ್ಲಾಧ್ಯಕ್ಷರಾದ ರಾಜು ಕುರುಡಗಿ ರವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / lalita MP