ಈಶಾನ್ಯದಲ್ಲಿ ಆಹಾರ ಭದ್ರತೆಗೆ ಮತ್ತೊಂದು ಮೈಲಿಗಲ್ಲು:ಪ್ರಹ್ಲಾದ ಜೋಶಿ
ನವದೆಹಲಿ, 05 ಮಾರ್ಚ್ (ಹಿ.ಸ.): ಆ್ಯಂಕರ್:ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ದೂರದೃಷ್ಟಿಯ ನಾಯಕತ್ವದಲ್ಲಿ ಈಶಾನ್ಯ ಭಾರತದಲ್ಲಿ ಆಹಾರ ಭದ್ರತೆ ಹಾಗೂ ಸಂಪರ್ಕ ವ್ಯವಸ್ಥೆಯನ್ನು ಬಲಪಡಿಸುವ ಮಹತ್ವದ ಹೆಜ್ಜೆ ಇಡಲಾಗಿದೆ ಎಂದು ಕೇಂದ್ರ ಆಹಾರ ಮತ್ತು ಸಾರ್ವಜನಿಕ ವಿತರಣೆ ಸಚಿವ ಪ್ರಹ್ಲಾದ ಜೋಶಿ ಸಾಮಾಜಿಕ ಜಾ
Joshi


ನವದೆಹಲಿ, 05 ಮಾರ್ಚ್ (ಹಿ.ಸ.):

ಆ್ಯಂಕರ್:ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ದೂರದೃಷ್ಟಿಯ ನಾಯಕತ್ವದಲ್ಲಿ ಈಶಾನ್ಯ ಭಾರತದಲ್ಲಿ ಆಹಾರ ಭದ್ರತೆ ಹಾಗೂ ಸಂಪರ್ಕ ವ್ಯವಸ್ಥೆಯನ್ನು ಬಲಪಡಿಸುವ ಮಹತ್ವದ ಹೆಜ್ಜೆ ಇಡಲಾಗಿದೆ ಎಂದು ಕೇಂದ್ರ ಆಹಾರ ಮತ್ತು ಸಾರ್ವಜನಿಕ ವಿತರಣೆ ಸಚಿವ ಪ್ರಹ್ಲಾದ ಜೋಶಿ ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ತಿಳಿಸಿದ್ದಾರೆ.

ಪಂಜಾಬ್‌ನಿಂದ ಅಕ್ಕಿಯನ್ನು ಸಾಗಿಸಿಕೊಂಡು ಬಂದ ಭಾರತೀಯ ಆಹಾರ ನಿಗಮದ ಮೊದಲ ಅಕ್ಕಿ ರೇಕ್ ಮಿಜೋರಾಂನ ಸೈರಂಗ್ ರೈಲು ನಿಲ್ದಾಣಕ್ಕೆ ಯಶಸ್ವಿಯಾಗಿ ಆಗಮಿಸಿದೆ. ಇದು ರಾಜ್ಯದ ಆಹಾರ ಸರಬರಾಜು ವ್ಯವಸ್ಥೆಯಲ್ಲಿ ಐತಿಹಾಸಿಕ ಮೈಲಿಗಲ್ಲಾಗಿ ಪರಿಗಣಿಸಲಾಗುತ್ತಿದೆ.

ಸಾಯಿರಾಂಗ್‌ನಲ್ಲಿ ಹೊಸದಾಗಿ ನಿರ್ಮಿಸಲಾದ ಎಫ್ ಸಿಐ ಗೋದಾಮು ಈಗ ಸಂಗ್ರಹಣೆ ಮತ್ತು ವಿತರಣೆಯ ಪ್ರಮುಖ ಕೇಂದ್ರವಾಗಿ ಕಾರ್ಯನಿರ್ವಹಿಸಲಿದೆ. ಈ ಸೌಲಭ್ಯದಿಂದ ಮಿಜೋರಾಂ ಹಾಗೂ ಸಂಪೂರ್ಣ ಈಶಾನ್ಯ ಪ್ರದೇಶದಾದ್ಯಂತ ಆಹಾರ ಧಾನ್ಯಗಳ ಸುಗಮ, ವೇಗವಾದ ಮತ್ತು ಹೆಚ್ಚು ಪರಿಣಾಮಕಾರಿ ಪೂರೈಕೆ ಸಾಧ್ಯವಾಗಲಿದೆ ಎಂದು ತಿಳಿಸಿದ್ದಾರೆ.

ಈ ಬೆಳವಣಿಗೆ ಈಶಾನ್ಯ ರಾಜ್ಯಗಳ ಅಭಿವೃದ್ಧಿಗೆ ಹಾಗೂ ಮೂಲಸೌಕರ್ಯ ವೃದ್ಧಿಗೆ ಮತ್ತೊಂದು ಬಲವಾದ ಹೆಜ್ಜೆಯಾಗಿ ಗುರುತಿಸಲಾಗಿದೆ.

---------------

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande