
ಬೆಂಗಳೂರು, 05 ಮಾರ್ಚ್ (ಹಿ.ಸ.):
ಆ್ಯಂಕರ್:ಇಸ್ರೇಲ್ ಹಾಗೂ ಇರಾನ ನಡುವಿನ ಯುದ್ಧ ಪರಿಸ್ಥಿತಿಯಿಂದಾಗಿ ದುಬೈನಲ್ಲಿ ಸಿಲುಕಿದ್ದ 50 ಕನ್ನಡಿಗರು ಇಂದು ಬೆಳಗ್ಗೆ ಸುರಕ್ಷಿತವಾಗಿ ಬೆಂಗಳೂರಿಗೆ ಆಗಮಿಸಿದರು.
ಬಳ್ಳಾರಿ ಜಿಲ್ಲೆಯ 35 ಮಂದಿ ಹಾಗೂ ಚಿತ್ರದುರ್ಗ ಜಿಲ್ಲೆಯ 15 ಮಂದಿ ಸೇರಿ ಒಟ್ಟು 50 ಮಂದಿ ಮಾ.4ರಂದು ಶಾರ್ಜಾದಿಂದ ಕೊಚ್ಚಿನ್ ತಲುಪಿದ್ದರು. ಯುದ್ಧದ ತೀವ್ರತೆಯಿಂದಾಗಿ ವಿಮಾನ ಸಂಚಾರದಲ್ಲಿ ಉಂಟಾದ ವ್ಯತ್ಯಯದಿಂದ ಅವರು ದುಬೈನಲ್ಲಿ ಕೆಲ ದಿನಗಳು ಸಿಲುಕಿದ್ದರು. ಬಳಿಕ ಶಾರ್ಜಾ ಮಾರ್ಗವಾಗಿ ಕೊಚ್ಚಿನ್‌ಗೆ ಆಗಮಿಸಿದ ಅವರನ್ನು ಅಲ್ಲಿಂದ ಬೆಂಗಳೂರಿಗೆ ತರಲು ವಿಶೇಷ ವ್ಯವಸ್ಥೆ ಮಾಡಲಾಯಿತು.
ಬಳ್ಳಾರಿ ಶಾಸಕ ಬಿ.ನಾಗೇಂದ್ರ ಅವರು ಕೊಚ್ಚಿನ್‌ನಿಂದ ಬೆಂಗಳೂರಿಗೆ ವಿಶೇಷ ವಿಮಾನ ವ್ಯವಸ್ಥೆ ಕಲ್ಪಿಸಿದರು. ಅದರಂತೆ ಇಂದು 50 ಮಂದಿ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿದರು.
ವಿಮಾನ ನಿಲ್ದಾಣದಲ್ಲಿ ಶಾಸಕ ನಾಗೇಂದ್ರ ಅವರು ಆಗಮಿಸಿದವರನ್ನು ಆತ್ಮೀಯವಾಗಿ ಬರಮಾಡಿಕೊಂಡರು. ಸಂಕಷ್ಟದ ಸಮಯದಲ್ಲಿ ನೆರವಾದ ಶಾಸಕರ ಕಾರ್ಯಕ್ಕೆ ಕನ್ನಡಿಗರು ಕೃತಜ್ಞತೆ ಸಲ್ಲಿಸಿದರು. ಸುರಕ್ಷಿತವಾಗಿ ಸ್ವದೇಶಕ್ಕೆ ಮರಳಿದ ಹಿನ್ನೆಲೆಯಲ್ಲಿ ಕುಟುಂಬ ಸದಸ್ಯರೊಂದಿಗೆ ಭಾವುಕರಾಗಿ ಸೇರಿಕೊಂಡರು.
---------------
ಹಿಂದೂಸ್ತಾನ್ ಸಮಾಚಾರ್ / Rakesh Mahadevappa