ಎಸ್.ಎಸ್.ಎಲ್.ಸಿ. ಹಿಂದಿ ತೃತೀಯ ಭಾಷೆ ಪರೀಕ್ಷೆಗೆ ೨೦೩ ವಿದ್ಯಾರ್ಥಿಗಳು ಗೈರು ಹಾಜರು.
ಎಸ್.ಎಸ್.ಎಲ್.ಸಿ. ಹಿಂದಿ ತೃತೀಯ ಭಾಷೆ ಪರೀಕ್ಷೆಗೆ ೨೦೩ ವಿದ್ಯಾರ್ಥಿಗಳು ಗೈರು ಹಾಜರು.
ಕೋಲಾರದ ಅಂಜುಮಾನ್ ಅಲಮಿನ್ ಪ್ರೌಢಶಾಲೆ ಪರೀಕ್ಷಾ ಕೇಂದ್ರದಲ್ಲಿ ಎಸ್.ಎಸ್.ಎಲ್.ಸಿ. ಹಿಂದಿ ಪರೀಕ್ಷೆಗೆ ವಿದ್ಯಾರ್ಥಿಗಳು ಹಾಜರಾದರು.


ಕೋಲಾರ, ೩೧ ಮಾರ್ಚ್ (ಹಿ.ಸ):

ಆ್ಯಂಕರ್ : ಸರ್ಕಾರ ತೇರ್ಗಡೆಗೆ ತೃತೀಯ ಭಾಷೆ ಅಂಕ ಮಾನದಂಡವಲ್ಲ ಎಂದು ಘೋಷಿಸಿದ ಬೆನ್ನಲ್ಲೆ ಜಿಲ್ಲೆಯ ೬೫ ಕೇಂದ್ರಗಳಲ್ಲಿ ನಡೆದ ಎಸ್ಸೆಸ್ಸೆಲ್ಸಿ ತೃತೀಯ ಭಾಷೆಗಳಾದ ಹಿಂದಿ,ಇಂಗ್ಲೀಷ್,ಕನ್ನಡದ ೫ನೇ ದಿನದ ಪರೀಕ್ಷೆ ಮಂಗಳವಾರ ಯಾವುದೇ ಗೊಂದಲಗಳಿಗೆ ಅವಕಾಶವಿಲ್ಲದಂತೆ ಅತ್ಯಂತ ಯಶಸ್ವಿಯಾಗಿ ನಡೆದಿದ್ದು ೨೦೩ ವಿದ್ಯಾರ್ಥಿಗಳು ಗೈರಾಗಿದ್ದಾರೆ ಎಂದು ಡಿಡಿಪಿಐ ಅಲ್ಮಾಸ್ ಫರ್ವೀನ್ ತಾಜ್ ತಿಳಿಸಿದರು.

ಪರೀಕ್ಷೆ ಮುಗಿದ ನಂತರ ಮಾಧ್ಯಮಗಳಿಗೆ ಮಾಹಿತಿ ನೀಡಿದ ಅವರು, ತೃತೀಯ ಭಾಷೆ ಪರೀಕ್ಷೆಗೆ ಹೆಸರು ನೊಂದಾಯಿಸಿದ್ದ ೧೮೭೬೮ ಹೊಸ ವಿದ್ಯಾರ್ಥಿಗಳ ಪೈಕಿ ೧೮೫೬೫ ಮಂದಿ ಹಾಜರಾಗಿದ್ದು, ೨೦೩ ಮಂದಿ ಗೈರಾಗಿದ್ದರು. ಪರೀಕ್ಷೆ ಯಾವುದೇ ಗೊಂದಲಗಳಿಲ್ಲದೇ ಸುಗಮವಾಗಿ ನಡೆದಿದ್ದು, ಶೇ.೯೮.೯೨ ಹಾಜರಿ ಇದೆ. ಸಿಸಿ ಕ್ಯಾಮರಾ,ವೆಬ್ ಕಾಸ್ಟಿಂಗ್ ಕಣ್ಗಾವಲಿನಲ್ಲಿ ನಡೆಯುತ್ತಿರುವ ೪ನೇ ವರ್ಷದ ಪರೀಕ್ಷೆ ಇದಾಗಿದ್ದು, ಜಿಲ್ಲೆಯ ಎಲ್ಲ ಪರೀಕ್ಷಾ ಕೇಂದ್ರಗಳಲ್ಲೂ ಸಿಸಿ ಕ್ಯಾಮಾರ ಸುಸ್ಥಿತಿಯಲ್ಲಿಡಲಾಗಿದೆ. ಪರೀಕ್ಷಾ ಅವಧಿಯಲ್ಲಿ ವೆಬ್ ಕಾಸ್ಟಿಂಗ್ ಮೂಲಕ ಅಧಿಕಾರಿಗಳು ವೀಕ್ಷಿಸುತ್ತಿದ್ದು, ಯಾವುದೇ ಲೋಪ ಕಂಡು ಬರಲಿಲ್ಲ ಎಂದರು.

ಬಂಗಾರಪೇಟೆ ತಾಲ್ಲೂಕಿನ ೮ ಕೇಂದ್ರಗಳಲ್ಲಿ ಗಣಿತ ವಿಷಯಕ್ಕೆ ೨೪೭೬ ಮಂದಿ ನೊಂದಾಯಿಸಿದ್ದು, ೨೪೫೬ ಮಂದಿ ಹಾಜರಾಗಿ ೨೦ ಮಂದಿ ಗೈರಾಗಿದ್ದಾರೆ, ಕೆಜಿಎಫ್ ತಾಲ್ಲೂಕಿನ ೯ ಕೇಂದ್ರಗಳಲ್ಲಿ ೩೨೩೧ ಮಕ್ಕಳು ಹೆಸರು ನೊಂದಾಯಿಸಿದ್ದು, ೩೧೯೫ ಮಂದಿ ಹಾಜರಾಗಿ ೩೬ ಮಂದಿ ಗೈರಾಗಿದ್ದಾರೆ. ಕೋಲಾರ ತಾಲ್ಲೂಕಿನ ೧೮ ಕೇಂದ್ರಗಳಲ್ಲಿ ೪೭೬೪ ಮಂದಿ ಹೆಸರು ನೊಂದಾಯಿಸಿದ್ದು, ೪೭೨೩ ಮಂದಿ ಹಾಜರಾಗಿ ೪೧ ಮಂದಿ ಗೈರಾಗಿದ್ದಾರೆ. ಮಾಲೂರು ತಾಲ್ಲೂಕಿನ ೮ ಕೇಂದ್ರಗಳಲ್ಲಿ ೨೯೪೧ ಮಂದಿ ಹೆಸರು ನೊಂದಾಯಿಸಿದ್ದು, ೨೯೧೦ ಮಂದಿ ಹಾಜರಾಗಿದ್ದು, ೩೧ ಮಂದಿ ಗೈರಾಗಿದ್ದಾರೆ.

ಮುಳಬಾಗಿಲು ತಾಲ್ಲೂಕಿನ ೧೨ ಕೇಂದ್ರಗಳಲ್ಲಿ ೨೮೦೪ ಮಂದಿ ನೊಂದಾಯಿಸಿದ್ದು, ೨೭೫೦ ಮಂದಿ ಹಾಜರಾಗಿದ್ದು, ೫೪ ಮಂದಿ ಗೈರಾಗಿದ್ದಾರೆ, ಶ್ರೀನಿವಾಸಪುರ ತಾಲ್ಲೂಕಿನ ೧೦ ಕೇಂದ್ರಗಳಲ್ಲಿ ೨೫೫೨ ಮಂದಿ ಹೆಸರು ನೊಂದಾಯಿಸಿದ್ದು, ೨೫೩೧ ಮಂದಿ ಹಾಜರಾಗಿದ್ದು, ೨೧ ಮಂದಿ ಗೈರಾಗಿದ್ದಾರೆ. ಐದನೇ ದಿನದ ಪರೀಕ್ಷೆಯಲ್ಲಿ ಜಿಲ್ಲಾದ್ಯಂತ ಎಲ್ಲೂ ಯಾವುದೇ ಅವ್ಯವಹಾರಗಳು ನಡೆದ ಬಗ್ಗೆ ವರದಿಯಾಗಿಲ್ಲ, ಪರೀಕ್ಷೆ ಸುಗಮವಾಗಿ ನಡೆಸುವಲ್ಲಿ ಜಿಲ್ಲಾಧಿಕಾರಿಗಳು,ಜಿಪಂ ಸಿಇಒ, ಎಸ್ಪಿ ಅವರ ಮಾರ್ಗದರ್ಶನದಲ್ಲಿ ಜಿಲ್ಲಾಡಳಿತ, ಶಿಕ್ಷಣ ಇಲಾಖೆ, ಶಿಕ್ಷಕರು,ಪೋಷಕರು, ವಿದ್ಯಾರ್ಥಿಗಳು ಸಹಕಾರ ನೀಡಿದ್ದಾರೆ ಎಂದರು.

ಡಿಡಿಪಿಐ ಅಲ್ಮಾಸ್ ಫರ್ವೀನ್ ತಾಜ್, ಶಿಕ್ಷಣಾಧಿಕಾರಿ ಡಾ.ವೀಣಾ, ಎಸ್ಸೆಸ್ಸೆಲ್ಸಿ ನೋಡಲ್ ಅಧಿಕಾರಿ ಶಂಕರೇಗೌಡ, ಡಿವೈಪಿಸಿಗಳಾದ ರಾಜೇಶ್ವರಿ, ಸೈಹಿದಾ ನಾಹಿದಾ ಫಾತಿಮಾ, ಬಿಇಒಗಳಾದ ಮಧುಮಾಲತಿ ಪಡುವಣೆ, ವಿವಿಧ ತಾಲ್ಲೂಕುಗಳ ಬಿಇಒಗಳಾದ ಶಶಿಕಲಾ, ನಾರಾಯಣಸ್ವಾಮಿ, ಕೆಂಪಯ್ಯ, ರಾಮಚಂದ್ರ, ಮುನಿಲಕ್ಷö್ಮಯ್ಯ, ಎವೈಪಿಸಿ ಗಾಯತ್ರಿ, ವಿಷಯ ಪರಿವೀಕ್ಷಕರಾದ ಸಮೀವುಲ್ಲಾ, ಕ್ರಿಸ್ಟಿನಾಬಬಿತಾ,ತಾಲ್ಲೂಕು ನೋಡಲ್ ಅಧಿಕಾರಿ ಇಸಿಒ ರಾಧಾ ಮತ್ತಿತರರು ವಿವಿಧ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ನಗರದ ಅಂಜುಮಾನ್ ಶಾಲೆ ಕೇಂದ್ರದಲ್ಲಿ ಮುಖ್ಯ ಅಧೀಕ್ಷಕರಾಗಿ ವೇಣುಗೋಪಾಲ್, ಪ್ರಶ್ನೆಪತ್ರಿಕಾ ಪಾಲಕರಾಗಿ ಮಂಜುಳಾ, ಸ್ಥಾನಿಕ ಜಾಗೃತದಳ ಅಧಿಕಾರಿಯಾಗಿ ವಿ.ಮುರಳಿಮೋಹನ್ ಕಾರ್ಯನಿರ್ವಹಿಸಿದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande