ನಾಳೆ ಪ್ರಧಾನಿ ಮೋದಿ ಗುಜರಾತ್ ಭೇಟಿ
ನವದೆಹಲಿ, 30 ಮಾರ್ಚ್ (ಹಿ.ಸ.): ಆ್ಯಂಕರ್: ಪ್ರಧಾನಿ ನರೇಂದ್ರ ಮೋದಿ ಅವರು ಮಾರ್ಚ್ 31ರಂದು ತಮ್ಮ ತವರು ರಾಜ್ಯ ಗುಜರಾತಗೆ ಒಂದು ದಿನದ ಭೇಟಿ ನೀಡಲಿದ್ದು, ಸೆಮಿಕಂಡಕ್ಟರ್ ಸ್ಥಾವರ ಸೇರಿದಂತೆ ₹20,000 ಕೋಟಿಗೂ ಹೆಚ್ಚು ಮೌಲ್ಯದ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ. ಪ್ರಧಾನ ಮಂತ್ರಿ ಕಚೇರಿ
Pm


ನವದೆಹಲಿ, 30 ಮಾರ್ಚ್ (ಹಿ.ಸ.):

ಆ್ಯಂಕರ್:

ಪ್ರಧಾನಿ ನರೇಂದ್ರ ಮೋದಿ ಅವರು ಮಾರ್ಚ್ 31ರಂದು ತಮ್ಮ ತವರು ರಾಜ್ಯ ಗುಜರಾತಗೆ ಒಂದು ದಿನದ ಭೇಟಿ ನೀಡಲಿದ್ದು, ಸೆಮಿಕಂಡಕ್ಟರ್ ಸ್ಥಾವರ ಸೇರಿದಂತೆ ₹20,000 ಕೋಟಿಗೂ ಹೆಚ್ಚು ಮೌಲ್ಯದ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ.

ಪ್ರಧಾನ ಮಂತ್ರಿ ಕಚೇರಿ ತಿಳಿಸಿರುವಂತೆ, ಈ ಭೇಟಿಯು ಆಧ್ಯಾತ್ಮಿಕತೆ, ಕೈಗಾರಿಕೆ ಹಾಗೂ ಮೂಲಸೌಕರ್ಯ ವಲಯಗಳನ್ನು ಒಳಗೊಂಡ ಹಲವು ಮಹತ್ವದ ಕಾರ್ಯಕ್ರಮಗಳನ್ನು ಒಳಗೊಂಡಿದೆ.

ಬೆಳಿಗ್ಗೆ 10 ಗಂಟೆಗೆ ಕೋಬಾ ತಿರ್ಥದಲ್ಲಿ ಮಹಾವೀರ ಜಯಂತಿ ಅಂಗವಾಗಿ “ಸಾಮ್ರಾಟ್ ಸಂಪ್ರತಿ ವಸ್ತುಸಂಗ್ರಹಾಲಯ”ವನ್ನು ಉದ್ಘಾಟಿಸಲಿದ್ದಾರೆ. ಜೈನ ಧರ್ಮದ ಪೋಷಕ ಚಕ್ರವರ್ತಿ ಸಂಪ್ರತಿಗೆ ಸಮರ್ಪಿತ ಈ ಮ್ಯೂಸಿಯಂನಲ್ಲಿ 2,000ಕ್ಕೂ ಹೆಚ್ಚು ಅಪರೂಪದ ಕಲಾಕೃತಿಗಳು ಹಾಗೂ ಹಸ್ತಪ್ರತಿಗಳು ಪ್ರದರ್ಶನಕ್ಕಿರಲಿವೆ.

ನಂತರ ಮಧ್ಯಾಹ್ನ ಅಹಮದಾಬಾದ್ ಸಮೀಪದ ಸನಂದ್ GIDCನಲ್ಲಿ “ಕಿಯೆನ್ಸ್ ಸೆಮಿಕಾನ್” ಸ್ಥಾವರವನ್ನು ಉದ್ಘಾಟಿಸಲಿದ್ದಾರೆ. ಇದು ದೇಶದ ಎರಡನೇ ವಾಣಿಜ್ಯ ಸೆಮಿಕಂಡಕ್ಟರ್ ಘಟಕವಾಗಿದ್ದು, ದಿನಕ್ಕೆ ಸುಮಾರು 6.33 ಮಿಲಿಯನ್ ಯೂನಿಟ್ ಉತ್ಪಾದನಾ ಸಾಮರ್ಥ್ಯ ಹೊಂದಿದೆ.

ಇದೇ ವೇಳೆ ವಿದ್ಯುತ್, ರೈಲ್ವೆ, ರಸ್ತೆ ಸಾರಿಗೆ, ಆರೋಗ್ಯ, ನಗರಾಭಿವೃದ್ಧಿ, ಬುಡಕಟ್ಟು ಮತ್ತು ಗ್ರಾಮೀಣಾಭಿವೃದ್ಧಿ ಸೇರಿದಂತೆ ಹಲವು ಕ್ಷೇತ್ರಗಳ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಾಗುತ್ತದೆ. ಅಹಮದಾಬಾದ್-ಧೋಲೇರಾ ಎಕ್ಸ್‌ಪ್ರೆಸ್‌ವೇ ಉದ್ಘಾಟನೆಗೂ ಕಾರ್ಯಕ್ರಮದಲ್ಲಿ ಸ್ಥಾನ ನೀಡಲಾಗಿದೆ.

ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಮಹತ್ವದ ಹೆಜ್ಜೆಯಾಗಿ ಖಾವ್ಡಾ ಪೂಲಿಂಗ್ ಸ್ಟೇಷನ್ ಸೌರಶಕ್ತಿ ಪ್ರಸರಣ ವ್ಯವಸ್ಥೆಯನ್ನು ಲೋಕಾರ್ಪಣೆ ಮಾಡಲಾಗುತ್ತದೆ. ರೈಲ್ವೆ ಕ್ಷೇತ್ರದಲ್ಲಿ ಕನ್ಲಾಸ್–ಜಾಮ್‌ನಗರ ಮತ್ತು ರಾಜ್‌ಕೋಟ್–ಕನ್ಲಾಸ್ ಮಾರ್ಗಗಳ ದ್ವಿಗುಣಗೊಳಿಸುವಿಕೆ ಪೂರ್ಣಗೊಂಡಿದ್ದು, ಹೊಸ ಖೇಡ್‌ಬ್ರಹ್ಮ–ಹಿಮ್ಮತ್‌ನಗರ–ಅಸರ್ವ ರೈಲು ಸೇವೆಗೆ ಚಾಲನೆ ನೀಡಲಾಗುತ್ತದೆ.

ಹಾಗೆಯೇ ರಾಣಿ ಕಿ ವಾವ್ ಹಾಗೂ ಶರ್ಮಿಷ್ಠಾ ಸರೋವರದಲ್ಲಿ ಲೈಟ್ ಅಂಡ್ ಸೌಂಡ್ ಶೋ ಉದ್ಘಾಟನೆ, ನಾಗರಿಕ ಆಸ್ಪತ್ರೆಗಳಲ್ಲಿ ರೋಗಿಗಳ ಸಂಬಂಧಿಕರಿಗೆ ರಾತ್ರಿ ಆಶ್ರಯಗಳು, ಹಾಗೂ ವೆಜಲ್‌ಪುರದಲ್ಲಿ ಬುಡಕಟ್ಟು ವಿದ್ಯಾರ್ಥಿಗಳಿಗಾಗಿ ವಸತಿ ನಿಲಯ ಉದ್ಘಾಟನೆ ಸೇರಿದಂತೆ ಹಲವು ಸಾಮಾಜಿಕ ಯೋಜನೆಗಳಿಗೂ ಚಾಲನೆ ದೊರೆಯಲಿದೆ.

ಈ ಭೇಟಿ ಗುಜರಾತ್ ರಾಜ್ಯದ ಕೈಗಾರಿಕಾ ಅಭಿವೃದ್ಧಿಗೆ ಜೊತೆಗೆ ಅದರ ಸಾಮಾಜಿಕ ಮತ್ತು ಸಾಂಸ್ಕೃತಿಕ ವಲಯಕ್ಕೂ ಹೊಸ ಉತ್ತೇಜನ ನೀಡಲಿದೆ.

---------------

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande