ನವ ಮಂಗಳೂರು ಬಂದರಿನ ಬರ್ತ್-9 ಪುನರಾಭಿವೃದ್ಧಿಗೆ ಕೇಂದ್ರ ಅನುಮೋದನೆ
ನವದೆಹಲಿ, 30 ಮಾರ್ಚ್ (ಹಿ.ಸ.): ಆ್ಯಂಕರ್: ಕರ್ನಾಟಕದ ನವ ಮಂಗಳೂರು ಬಂದರು ಪ್ರಾಧಿಕಾರ ಸೇರಿರುವ ಬರ್ತ್ ಸಂಖ್ಯೆ 9 ರ ಪುನರಾಭಿವೃದ್ಧಿ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರ ಅನುಮೋದಿಸಿದೆ. ದ್ರವ ಬೃಹತ್ ಸರಕು ನಿರ್ವಹಣಾ ಸಾಮರ್ಥ್ಯ ಹೆಚ್ಚಿಸುವುದು ಹಾಗೂ ಕಡಲ ದಕ್ಷತೆಯನ್ನು ಬಲಪಡಿಸುವುದು ಈ ಯೋಜನೆಯ ಮ
Port


ನವದೆಹಲಿ, 30 ಮಾರ್ಚ್ (ಹಿ.ಸ.):

ಆ್ಯಂಕರ್:

ಕರ್ನಾಟಕದ ನವ ಮಂಗಳೂರು ಬಂದರು ಪ್ರಾಧಿಕಾರ ಸೇರಿರುವ ಬರ್ತ್ ಸಂಖ್ಯೆ 9 ರ ಪುನರಾಭಿವೃದ್ಧಿ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರ ಅನುಮೋದಿಸಿದೆ. ದ್ರವ ಬೃಹತ್ ಸರಕು ನಿರ್ವಹಣಾ ಸಾಮರ್ಥ್ಯ ಹೆಚ್ಚಿಸುವುದು ಹಾಗೂ ಕಡಲ ದಕ್ಷತೆಯನ್ನು ಬಲಪಡಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.

ಕೇಂದ್ರ ಬಂದರುಗಳು, ಹಡಗು ಸಾಗಣೆ ಮತ್ತು ಜಲಮಾರ್ಗಗಳ ಸಚಿವಾಲಯ ಮಾಹಿತಿ ಪ್ರಕಾರ, ಈ ಯೋಜನೆಯನ್ನು DBFOT ಆಧಾರದ ಮೇಲೆ ಸಾರ್ವಜನಿಕ-ಖಾಸಗಿ ಸಹಭಾಗಿತ್ವ ಮಾದರಿಯಲ್ಲಿ ಜಾರಿಗೆ ತರಲಾಗುತ್ತದೆ. ಕಚ್ಚಾ ತೈಲ, ಪೆಟ್ರೋಲಿಯಂ ಉತ್ಪನ್ನಗಳು ಮತ್ತು ಎಲ್ ಪಿ ಜಿ ಸಾಗಣೆಗೆ ಅನುಕೂಲವಾಗುವಂತೆ ಹಳೆಯ ರಚನೆಯನ್ನು ಬದಲಾಯಿಸಿ ಆಧುನಿಕ ಮೂಲಸೌಕರ್ಯ ನಿರ್ಮಿಸಲಾಗುತ್ತದೆ.

ಯೋಜನೆಯಡಿಯಲ್ಲಿ, ಬರ್ತ್ ಆಳವನ್ನು 10.5 ಮೀಟರ್‌ನಿಂದ 14 ಮೀಟರ್‌ಗಳಿಗೆ ಹೆಚ್ಚಿಸಲಾಗಿದ್ದು, ಭವಿಷ್ಯದಲ್ಲಿ 19.8 ಮೀಟರ್‌ಗಳಿಗೆ ವಿಸ್ತರಿಸುವ ಅವಕಾಶ ಕಲ್ಪಿಸಲಾಗಿದೆ. ಇದರಿಂದ VLGC ಸೇರಿದಂತೆ 200,000 DWT ವರೆಗೆ ಸಾಮರ್ಥ್ಯದ ದೊಡ್ಡ ಹಡಗುಗಳನ್ನು ನಿರ್ವಹಿಸಲು ಸಾಧ್ಯವಾಗಲಿದೆ.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ದೇಶದ ಕಡಲ ಮೂಲಸೌಕರ್ಯ ಆಧುನೀಕರಣಕ್ಕೆ ಇದು ಮಹತ್ವದ ಹೆಜ್ಜೆಯಾಗಿದೆ ಎಂದು ಕೇಂದ್ರ ಬಂದರು, ಹಡಗು ಮತ್ತು ಜಲಮಾರ್ಗಗಳ ಸಚಿವ ಸರ್ಬಾನಂದ ಸೋನೋವಾಲ್ ತಿಳಿಸಿದ್ದಾರೆ.

₹438.29 ಕೋಟಿ ವೆಚ್ಚದ ಈ ಯೋಜನೆಯು ವರ್ಷಕ್ಕೆ 10.90 ಮಿಲಿಯನ್ ಟನ್‌ಗಳಷ್ಟು ಸರಕು ನಿರ್ವಹಣಾ ಸಾಮರ್ಥ್ಯ ಹೆಚ್ಚಿಸಲು ನೆರವಾಗಲಿದೆ. ಖಾಸಗಿ ಪಾಲುದಾರರನ್ನು ಸ್ಪರ್ಧಾತ್ಮಕ ಟೆಂಡರ್ ಮೂಲಕ ಆಯ್ಕೆ ಮಾಡಲಾಗುತ್ತಿದ್ದು, ಯೋಜನೆಗೆ 2 ವರ್ಷಗಳ ನಿರ್ಮಾಣ ಅವಧಿ ಹಾಗೂ ಒಟ್ಟು 30 ವರ್ಷಗಳ ರಿಯಾಯಿತಿ ಅವಧಿ ನಿಗದಿಯಾಗಿದೆ.

ಈ ಯೋಜನೆಯಡಿ ಆಧುನಿಕ ಯಂತ್ರೋಪಕರಣಗಳು, ಸ್ವಯಂಚಾಲಿತ ಮೂರಿಂಗ್ ವ್ಯವಸ್ಥೆಗಳು, ಸುಧಾರಿತ ಅಗ್ನಿಶಾಮಕ ವ್ಯವಸ್ಥೆ ಹಾಗೂ ಭದ್ರತಾ ನಿಯಂತ್ರಣ ವ್ಯವಸ್ಥೆಗಳು ಅಳವಡಿಸಲಾಗುತ್ತದೆ.

---------------

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande