ಅಸ್ಸಾಂ ಬಿಜೆಪಿ ಕಾರ್ಯಕರ್ತರೊಂದಿಗೆ ಪ್ರಧಾನಿ ಮೋದಿ ಸಂವಾದ
ನವದೆಹಲಿ, 30 ಮಾರ್ಚ್ (ಹಿ.ಸ.): ಆ್ಯಂಕರ್: ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ‘ನಮೋ ಆ್ಯಪ್’ ಮೂಲಕ ಅಸ್ಸಾಂನ ಬಿಜೆಪಿ ಬೂತ್ ಕಾರ್ಯಕರ್ತರೊಂದಿಗೆ ನೇರ ಸಂವಾದ ನಡೆಸಿ, ಮುಂಬರುವ ಚುನಾವಣೆಯಲ್ಲಿ ಬಿಜೆಪಿ-ಎನ್‌ಡಿಎಗೆ ಹ್ಯಾಟ್ರಿಕ್ ಗೆಲುವು ಸಾಧಿಸಲು ಶ್ರಮಿಸುವಂತೆ ಕರೆ ನೀಡಿದರು. “ಮೇರಾ ಬೂತ್ ಸಬ್ಸ
Pm


ನವದೆಹಲಿ, 30 ಮಾರ್ಚ್ (ಹಿ.ಸ.):

ಆ್ಯಂಕರ್:

ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ‘ನಮೋ ಆ್ಯಪ್’ ಮೂಲಕ ಅಸ್ಸಾಂನ ಬಿಜೆಪಿ ಬೂತ್ ಕಾರ್ಯಕರ್ತರೊಂದಿಗೆ ನೇರ ಸಂವಾದ ನಡೆಸಿ, ಮುಂಬರುವ ಚುನಾವಣೆಯಲ್ಲಿ ಬಿಜೆಪಿ-ಎನ್‌ಡಿಎಗೆ ಹ್ಯಾಟ್ರಿಕ್ ಗೆಲುವು ಸಾಧಿಸಲು ಶ್ರಮಿಸುವಂತೆ ಕರೆ ನೀಡಿದರು.

“ಮೇರಾ ಬೂತ್ ಸಬ್ಸೆ ಮಜ್ಬೂತ್” ಕಾರ್ಯಕ್ರಮದ ಅಂಗವಾಗಿ ನಡೆದ ಈ ಸಂವಾದದಲ್ಲಿ ಮಾತನಾಡಿದ ಪ್ರಧಾನಿ, ಅಭಿವೃದ್ಧಿ ಮತ್ತು ಒಳನುಸುಳುವಿಕೆ (ಇನ್‌ಫಿಲ್ಟ್ರೇಷನ್) ಅಸ್ಸಾಂ ಚುನಾವಣೆಯ ಪ್ರಮುಖ ವಿಷಯಗಳಾಗಿವೆ ಎಂದು ಹೇಳಿದರು. ವಿರೋಧ ಪಕ್ಷಗಳು ಒಳನುಸುಳುವಿಕೆಯನ್ನು ಉತ್ತೇಜಿಸುತ್ತಿವೆ ಎಂದು ಆರೋಪಿಸಿ, ಇದು ರಾಜ್ಯದ ಗುರುತು, ಭದ್ರತೆ ಮತ್ತು ಸಂಸ್ಕೃತಿಗೆ ನೇರವಾಗಿ ಸಂಬಂಧಿಸಿದೆ ಎಂದರು.

ಅಸ್ಸಾಂ ಹಿಂದೆ ಅಸ್ಥಿರತೆ, ಹಿಂಸಾಚಾರ ಮತ್ತು ದಂಗೆಗಳಿಂದ ಬಳಲುತ್ತಿದ್ದರೂ, ಕಳೆದ ದಶಕದಲ್ಲಿ ಬಿಜೆಪಿ ಡಬಲ್-ಎಂಜಿನ್ ಸರ್ಕಾರದಿಂದ ಶಾಂತಿ, ಅಭಿವೃದ್ಧಿ ಮತ್ತು ಭದ್ರತೆಯ ಹೊಸ ಯುಗ ಆರಂಭವಾಗಿದೆ ಎಂದು ಪ್ರಧಾನಿ ಹೇಳಿದರು. ಕಳೆದ 10 ವರ್ಷಗಳಲ್ಲಿ 12 ಪ್ರಮುಖ ಶಾಂತಿ ಒಪ್ಪಂದಗಳು ರಾಜ್ಯದ ಪರಿಸ್ಥಿತಿಯನ್ನು ಬದಲಾಯಿಸಿವೆ ಎಂದು ಅವರು ಉಲ್ಲೇಖಿಸಿದರು.

ಸಂವಾದದ ವೇಳೆ ವಿವಿಧ ಜಿಲ್ಲೆಗಳ ಕಾರ್ಯಕರ್ತರು ತಮ್ಮ ಅನುಭವಗಳನ್ನು ಹಂಚಿಕೊಂಡರು. ಯುವ ಮತದಾರರಿಗೆ ಹಿಂದಿನ ಅಶಾಂತಿಯ ಪರಿಸ್ಥಿತಿಯನ್ನು ತಿಳಿಸುವ ಜವಾಬ್ದಾರಿ ಬೂತ್ ಮಟ್ಟದ ಕಾರ್ಯಕರ್ತರ ಮೇಲಿದೆ ಎಂದು ಪ್ರಧಾನಿ ಸೂಚಿಸಿದರು. ಜೊತೆಗೆ ಭಜನಾ ಸಂಜೆ, ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಸರ್ಕಾರದ ಯೋಜನೆಗಳ ಕುರಿತು ಚರ್ಚೆಗಳು ನಡೆಸುವಂತೆ ಕರೆ ನೀಡಿದರು.

ಬೋಡೋಲ್ಯಾಂಡ್ ಪ್ರದೇಶದಲ್ಲಿ ಶಾಂತಿ ಸ್ಥಾಪನೆಯ ನಂತರ ಸಂಭವಿಸಿದ ಬದಲಾವಣೆಗಳನ್ನು ಪ್ರಧಾನಿ ಮೆಚ್ಚಿ, ಮಹಿಳಾ ಸಬಲೀಕರಣವೂ ಹೊಸ ಅಸ್ಸಾಂ ನಿರ್ಮಾಣದಲ್ಲಿ ಪ್ರಮುಖ ಪಾತ್ರವಹಿಸಿದೆ ಎಂದು ಹೇಳಿದರು. ಕೇಂದ್ರದ ವಿವಿಧ ಯೋಜನೆಗಳ ಫಲಾನುಭವಿಗಳನ್ನು ಗುರುತಿಸಿ ಮತದಾನಕ್ಕೆ ಪ್ರೇರೇಪಿಸುವಂತೆ ಕಾರ್ಯಕರ್ತರಿಗೆ ಸೂಚನೆ ನೀಡಿದರು.

ಒಳನುಸುಳುವಿಕೆ ಅಸ್ಸಾಂನ ಭೂಮಿ, ರೈತರ ಹಕ್ಕು, ಬುಡಕಟ್ಟು ಜೀವನ ಮತ್ತು ಮಹಿಳೆಯರ ಗೌರವಕ್ಕೆ ಸಂಬಂಧಿಸಿದ ಗಂಭೀರ ವಿಷಯವಾಗಿದ್ದು, ಇದರ ವಿರುದ್ಧ ಜಾಗೃತಿ ಮೂಡಿಸಲು ಕಾರ್ಯಕರ್ತರು ಸಕ್ರಿಯರಾಗಬೇಕು ಎಂದು ಪ್ರಧಾನಿ ಒತ್ತಾಯಿಸಿದರು.

ಅಸ್ಸಾಂನ ಬೂತ್ ಕಾರ್ಯಕರ್ತರು ಪಕ್ಷದ ಶಕ್ತಿ ಎಂದು ಹೇಳಿದ ಪ್ರಧಾನಿ, ದಾಖಲೆ ಮಟ್ಟದ ಮತದಾನ ಮತ್ತು ಗೆಲುವು ಸಾಧಿಸಲು ಸಮರ್ಪಿತವಾಗಿ ಕಾರ್ಯನಿರ್ವಹಿಸುವಂತೆ ಕರೆ ನೀಡಿದರು.

---------------

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande