ಉತ್ತಮ ಅಧ್ಯಯನದಿಂದ ಪರಿಣಿತಿ : ಡಾ. ಆರ್. ಮರೇಗೌಡ
ಕೊಪ್ಪಳ, 30 ಮಾರ್ಚ್ (ಹಿ.ಸ.) ಆ್ಯಂಕರ್: ತೊಂದರೆಯಿಂದ ಬರುವ ರೋಗಿಗಳ ಗುಣಮುಖ ಮಾಡುವ ಸೇವೆ ಬಹಳ ಶ್ರೇಷ್ಠ ಸೇವೆ ಯಾಗಿದೆ. ಉತ್ತಮ ಅಧ್ಯಯನ ಮಾಡುವುದರ ಮೂಲಕ ಕೋರ್ಸ್ ನ ಪರಿಣಿತಿ ಪಡೆಯಲು ಸಾಧ್ಯ ಎಂದರು. ಎಂದು ಶ್ರೀ ಗವಿಸಿದ್ದೇಶ್ವರ ವಿದ್ಯಾವರ್ಧಕ ಟ್ರಸ್ಟ್ ನ ಕಾರ್ಯದರ್ಶಿಗಳಾದ ಡಾ. ಆರ್ ಮರೇಗೌಡ ಹೇ
ಉತ್ತಮ ಅಧ್ಯಯನದಿಂದ ಪರಿಣಿತಿ : ಡಾ. ಆರ್. ಮರೇಗೌಡ


ಕೊಪ್ಪಳ, 30 ಮಾರ್ಚ್ (ಹಿ.ಸ.)

ಆ್ಯಂಕರ್: ತೊಂದರೆಯಿಂದ ಬರುವ ರೋಗಿಗಳ ಗುಣಮುಖ ಮಾಡುವ ಸೇವೆ ಬಹಳ ಶ್ರೇಷ್ಠ ಸೇವೆ ಯಾಗಿದೆ. ಉತ್ತಮ ಅಧ್ಯಯನ ಮಾಡುವುದರ ಮೂಲಕ ಕೋರ್ಸ್ ನ ಪರಿಣಿತಿ ಪಡೆಯಲು ಸಾಧ್ಯ ಎಂದರು. ಎಂದು ಶ್ರೀ ಗವಿಸಿದ್ದೇಶ್ವರ ವಿದ್ಯಾವರ್ಧಕ ಟ್ರಸ್ಟ್ ನ ಕಾರ್ಯದರ್ಶಿಗಳಾದ ಡಾ. ಆರ್ ಮರೇಗೌಡ ಹೇಳಿದರು.

ನಗರದ ಶ್ರೀ ಜಗದ್ಗುರು ಗವಿಸಿದ್ದೇಶ್ವರ ಪ್ಯಾರಮೆಡಿಕಲ್ ಕಾಲೇಜಿನಲ್ಲಿ 2025 -26ನೇ ಸಾಲಿನ ಹೊಸ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡ ಸ್ವಾಗತ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಶ್ರೀ ಗವಿಮಠವು ಅನ್ನ,ಅಕ್ಷರ,ಅರಿವು ಆರೋಗ್ಯ,ಆಧ್ಯಾತ್ಮ ಸೇವೆಗೆ ಶ್ಲಾಘನೇ ವ್ಯಕ್ತಪಡಿಸಿದ ಅವರು ವಿದ್ಯಾರ್ಥಿಗಳೇ ಕಾಲೇಜಿನ ಭವಿಷ್ಯ ತಾವು ಉತ್ತಮ ಕನಸುಗಳನ್ನು ಕಾಣಬೇಕು ಕನಸಿಗೆ ತಕ್ಕಂತೆ ಪ್ರಯತ್ನ ಪಡಬೇಕು ಅಂದಾಗ ಮಾತ್ರ ತಮ್ಮ ಗುರಿ ತಲುಪಲು ಸಾಧ್ಯ ಎಂದು ಕಿವಿಮಾತು ಮಾತು ಹೇಳಿದರು.

ತಾವು ಅಧ್ಯಯನ ಮಾಡುತ್ತಿರುವ ಪ್ಯಾರಾಮೆಡಿಕಲ್ ಕೋರ್ಸ್ ಬಹಳ ಪವಿತ್ರ ಸೇವೆಯ ಕೋರ್ಸ್ ಆಗಿದೆ. ತಾವೆಲ್ಲರೂ ಚೆನ್ನಾಗಿ ಅಭ್ಯಾಸ ಮಾಡಿ ಉತ್ತಮ ಸೇವೆಯ ಮೂಲಕ ಕೀರ್ತಿವಂತರಾಗಬೇಕೆಂದು ಎಂದು ಹೇಳಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಕೊಪ್ಪಳ ವೈಧ್ಯಕೀಯ ವಿಜ್ಞಾನ ಸಂಸ್ಥೆಯ ಅಂಗರಚನ ಶಾಸ್ತ್ರವಿಭಾಗದ ಸಹ ಪ್ರಾಧ್ಯಪಕರಾದ ಡಾ. ಮಂಜುನಾಥ್ ಎಸ್. ಹಲಗತ್ತಿ ಮಾತನಾಡಿ ತಾವೆಲ್ಲರೂ ಉತ್ತಮ ಅಭ್ಯಾಸದ ಕಡೆಗೆ ಗಮನ ಹರಿಸಬೇಕು. ಉತ್ತಮ ಅಧ್ಯಯನದಿಂದ ಮಾತ್ರ ತಾವು ಓದುವ ಕೋರ್ಸಿಗೆ ಸೇವೆಗೆ ನ್ಯಾಯ ಒದಗಿಸಲು ಸಾಧ್ಯವೆಂದು ಎಂದು ಹೇಳಿದರು.

ಶ್ರೀ ಗವಿಸಿದ್ದೇಶ್ವರ ನರ್ಸಿಂಗ್ ಕಾಲೇಜಿನ ಪ್ರಾಚಾರ್ಯರಾದ ಡಾ.ಮರ್ಸಿಲ್ ಎಸ್.ಹೂಲಗೇರಿ, ಪ್ಯಾರಾ ಮೆಡಿಕಲ್ ಕಾಲೇಜಿನ ಶೈಕ್ಷಣಿಕ ನಿರ್ದೇಶಕರಾದ ಪ್ರೊ. ನಾಗರಾಜ್ ಬೊಮ್ಮನಾಳ್, ಸಂಯೋಜಕಿ ಶಿಲ್ಪಾ ಹಾಗೂ ವಿದ್ಯಾರ್ಥಿಗಳು ಸಂದರ್ಭದಲ್ಲಿ ಇದ್ದರು.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande