ಸನಾತನ ವೀರಶೈವ ಗುರುಕುಲ ಮಠ : `ಚೈತ್ರ ಸಂಸ್ಕøತ’ ಶಿಬಿರ
ಬಳ್ಳಾರಿ, 30 ಮಾರ್ಚ್ (ಹಿ.ಸ.) ಆ್ಯಂಕರ್: ಶ್ರೀ ಸನಾತನ ವೀರಶೈವ ಗುರುಕುಲ ಮಠ ಮತ್ತು ಸಂಸ್ಕೃತ ಭಾರತಿ ಕರ್ನಾಟಕ ಉತ್ತರಂದಿಂದ ಡಾ. ಜೆ.ಎಂ.ಪಂಪಾಪತಿ ಶಾಸ್ತ್ರಿಗಳ ಅಧ್ಯಕ್ಷತೆಯಲ್ಲಿ ರೇಣುಕಾ ನಗರದಲ್ಲಿನ ರೇಣುಕಾಚಾರ್ಯ ಕಲ್ಯಾಣ ಮಂಟಪದಲ್ಲಿ ಮಕ್ಕಳಿಗಾಗಿ `ಚೈತ್ರ ಸಂಸ್ಕøತ’ ಶಿಬಿರವನ್ನು ಏ.3 ರಿಂದ 14
ಸನಾತನ ವೀರಶೈವ ಗುರುಕುಲ ಮಠ : `ಚೈತ್ರ ಸಂಸ್ಕøತ’ ಶಿಬಿರ


ಬಳ್ಳಾರಿ, 30 ಮಾರ್ಚ್ (ಹಿ.ಸ.)

ಆ್ಯಂಕರ್: ಶ್ರೀ ಸನಾತನ ವೀರಶೈವ ಗುರುಕುಲ ಮಠ ಮತ್ತು ಸಂಸ್ಕೃತ ಭಾರತಿ ಕರ್ನಾಟಕ ಉತ್ತರಂದಿಂದ ಡಾ. ಜೆ.ಎಂ.ಪಂಪಾಪತಿ ಶಾಸ್ತ್ರಿಗಳ ಅಧ್ಯಕ್ಷತೆಯಲ್ಲಿ ರೇಣುಕಾ ನಗರದಲ್ಲಿನ ರೇಣುಕಾಚಾರ್ಯ ಕಲ್ಯಾಣ ಮಂಟಪದಲ್ಲಿ ಮಕ್ಕಳಿಗಾಗಿ `ಚೈತ್ರ ಸಂಸ್ಕøತ’ ಶಿಬಿರವನ್ನು ಏ.3 ರಿಂದ 14 ವರೆಗೆ ಏರ್ಪಡಿಸಿದೆ.

ಶಿಬಿರದ ನಿರ್ದೇಶಕರಾದ ಮಹಾಂತೇಶ್ ಅವರು ಈ ಮಾಹಿತಿ ನೀಡಿದ್ದು, ಈ ಶಿಬಿರಲ್ಲಿ 8 ರಿಂದ 15 ವರ್ಷದ ಮಕ್ಕಳು ಪಾಲ್ಗೊಳ್ಳಬಹುದು. ನಿತ್ಯ ಬೆಳಿಗ್ಗೆ 9.30 ರಿಂದ ಮಧ್ಯಾಹ್ನ 2 ವರೆಗೆ ತರಬೇತಿ ನೀಡಲಾಗುತ್ತದೆ.

ಸಂಸ್ಕೃತ ಶ್ಲೋಕ, ವೇದಪಾಠ ಸಂಸ್ಕøತ ಕಥೆ, ಸಿದ್ಧಾಂತ ಶಿಖಾಮಣಿ, ಸಂಸ್ಕøತ ಸಂಭಾಷಣೆ, ಕುಂಬಾರಿಕೆ, ಕ್ರೀಡೆ, ಯೋಗ, ಸಂಸ್ಕøತ ನಾಟಕ ಪ್ರದರ್ಶನ, ಗುರು ಭಜನಾ ಕಲಿಕೆ ಜೊತೆಗೆ ಒಂದು ದಿನದ ಪ್ರಕೃತಿ ಪ್ರವಾಸವನ್ನು ಶಿಬಿರದಲ್ಲಿ ಹಮ್ಮಿಕೊಳ್ಳಲಾಗುತ್ತಿದೆ.

ಶಿಬಿರದಲ್ಲಿ ಮಧ್ಯಾಹ್ನದ ಊಟದ ವ್ಯವಸ್ಥೆ ಇದೆ. ವಿವರಗಳಿಗಾಗಿ ಮೊಬೈಲ್ ಸಂಖ್ಯೆ : 8867185807 ಗೆ ಕರೆ ಮಾಡಿರಿ.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande