ಕಬಡ್ಡಿ ಕ್ರೀಡೆಗೆ ಜಾತ್ರಾ ವೇದಿಕೆ , ಯುವಜನತೆಗೆ ಸಿ.ಪಿ.ಐ ಜೂಲಿಕಟ್ಟಿ ಸಂದೇಶ
ಗದಗ, 29 ಮಾರ್ಚ್ (ಹಿ.ಸ.) ಆ್ಯಂಕರ್:- ಇತಿಹಾಸ ಪ್ರಸಿದ್ಧ ಜಗದ್ಗುರು ತೋಂಟದಾರ್ಯ ಮಠದ 2026ನೇ ಸಾಲಿನ ಜಾತ್ರಾ ಮಹೋತ್ಸವದ ಅಂಗವಾಗಿ ಆಯೋಜಿಸಲಾದ ಕಬಡ್ಡಿ ಪಂದ್ಯಾವಳಿ ಉತ್ಸಾಹಭರಿತವಾಗಿ ನಡೆಯಿತು. ಕ್ರೀಡೆಗಳ ಮಹತ್ವವನ್ನು ಯುವಜನತೆ ಮರೆಯಬಾರದು ಎಂದು ಸಿ.ಪಿ.ಐ ಎಲ್.ಕೆ. ಜೂಲಿಕಟ್ಟಿ ಕರೆ ನೀಡಿದರು. ಆಧುನ
ಫೋಟೋ


ಗದಗ, 29 ಮಾರ್ಚ್ (ಹಿ.ಸ.)

ಆ್ಯಂಕರ್:- ಇತಿಹಾಸ ಪ್ರಸಿದ್ಧ ಜಗದ್ಗುರು ತೋಂಟದಾರ್ಯ ಮಠದ 2026ನೇ ಸಾಲಿನ ಜಾತ್ರಾ ಮಹೋತ್ಸವದ ಅಂಗವಾಗಿ ಆಯೋಜಿಸಲಾದ ಕಬಡ್ಡಿ ಪಂದ್ಯಾವಳಿ ಉತ್ಸಾಹಭರಿತವಾಗಿ ನಡೆಯಿತು. ಕ್ರೀಡೆಗಳ ಮಹತ್ವವನ್ನು ಯುವಜನತೆ ಮರೆಯಬಾರದು ಎಂದು ಸಿ.ಪಿ.ಐ ಎಲ್.ಕೆ. ಜೂಲಿಕಟ್ಟಿ ಕರೆ ನೀಡಿದರು.

ಆಧುನಿಕ ಜೀವನಶೈಲಿಯ ಒತ್ತಡದಿಂದ ದೈಹಿಕ ಹಾಗೂ ಮಾನಸಿಕ ಆರೋಗ್ಯ ಕುಂಠಿತವಾಗುತ್ತಿರುವ ಹಿನ್ನೆಲೆಯಲ್ಲಿ, ಕ್ರೀಡೆಗಳು ದಿವ್ಯ ಔಷಧಗಳಂತೆ ಕಾರ್ಯನಿರ್ವಹಿಸುತ್ತವೆ. ಆದ್ದರಿಂದ ಯುವಕರು ಕ್ರೀಡೆಗಳತ್ತ ಹೆಚ್ಚು ಗಮನ ಹರಿಸಬೇಕು ಎಂದು ಅವರು ಹೇಳಿದರು. ಜಾತ್ರೆಯ ಅಂಗವಾಗಿ ನಡೆದ ಕಬಡ್ಡಿ ಪಂದ್ಯಾವಳಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಗೆಲುವಿಗಿಂತ ಭಾಗವಹಿಸುವಿಕೆ ಮತ್ತು ಕ್ರೀಡಾ ಸ್ಫೂರ್ತಿಗೆ ಹೆಚ್ಚಿನ ಮಹತ್ವ ನೀಡಬೇಕು ಎಂದು ಸಲಹೆ ನೀಡಿದರು.

ತೋಂಟದಾರ್ಯ ಮಠದ ಜಾತ್ರೆ ಸಮಾಜಮುಖಿ ಹಾಗೂ ಸಾಂಸ್ಕೃತಿಕ ಪರಂಪರೆಯ ಪ್ರತೀಕವಾಗಿದ್ದು, ಕ್ರೀಡೆಗಳಿಗೆ ಸಹ ವೇದಿಕೆ ಒದಗಿಸಿರುವುದು ಶ್ಲಾಘನೀಯ ಕಾರ್ಯ ಎಂದು ಅವರು ಅಭಿಪ್ರಾಯಪಟ್ಟರು. ಈ ವರ್ಷದ ಜಾತ್ರೆಯಲ್ಲಿ ವಿವಿಧ ಅರ್ಥಪೂರ್ಣ ಕಾರ್ಯಕ್ರಮಗಳು ಮತ್ತು ಸ್ಪರ್ಧೆಗಳು ನಡೆಯುತ್ತಿದ್ದು, ಕಬಡ್ಡಿ ಪಂದ್ಯಾವಳಿಯೂ ಅದರಲ್ಲಿ ಪ್ರಮುಖ ಆಕರ್ಷಣೆಯಾಯಿತು.

ಜಯಕರ್ನಾಟಕ ತಂಡಕ್ಕೆ ಪ್ರಥಮ ಸ್ಥಾನ

ಪಂದ್ಯಾವಳಿಯಲ್ಲಿ ಒಟ್ಟು 21 ತಂಡಗಳು ಭಾಗವಹಿಸಿದ್ದು, ಮೆಣಸಗಿಯ ಜಯಕರ್ನಾಟಕ ಕಬಡ್ಡಿ ತಂಡ ಪ್ರಥಮ ಸ್ಥಾನ ಪಡೆದುಕೊಂಡಿತು. ರೋಣದ ಬಿ.ಸಿ. ರಮೇಶ್ ತಂಡ ದ್ವಿತೀಯ ಸ್ಥಾನ ಪಡೆದು ರನ್ನರ್-ಅಪ್ ಆಗಿ ಹೊರಹೊಮ್ಮಿತು. ಡಂಬಳದ ಮಾರುತೇಶ್ವರ ಕಬಡ್ಡಿ ತಂಡ ಮತ್ತು ಮೆಣಸಗಿಯ ಲಿಂಗಬಸವೇಶ್ವರ ಕಬಡ್ಡಿ ತಂಡಗಳು ಕ್ರಮವಾಗಿ ತೃತೀಯ ಮತ್ತು ಚತುರ್ಥ ಸ್ಥಾನಗಳನ್ನು ಪಡೆದವು.

ಪಂದ್ಯಾವಳಿಗಳು ಪ್ರೇಕ್ಷಕರ ಗಮನ ಸೆಳೆದವು. ವಿಜೇತ ತಂಡಗಳಿಗೆ ಪ್ರಶಸ್ತಿ ಫಲಕ ಮತ್ತು ನಗದು ಬಹುಮಾನ ನೀಡಿ ಗೌರವಿಸಲಾಯಿತು.

ನಿರ್ಣಾಯಕರಾಗಿ ಬಿ.ಎಚ್. ಹಡಪದ, ಎಸ್.ಡಿ. ಮಾದರ, ಎಂ.ಆರ್. ಪೂಜಾರ, ಮುತ್ತು ಪ್ರದಾನಿ ಹಾಗೂ ಎಸ್.ಆರ್. ಗಣಾಚಾರಿ ಕಾರ್ಯನಿರ್ವಹಿಸಿದರು.

ಕಾರ್ಯಕ್ರಮದಲ್ಲಿ ಜಾತ್ರಾ ಸಮಿತಿಯ ಅಧ್ಯಕ್ಷ ವಿನಾಯಕ ಮಾನ್ವಿ, ಉಪಾಧ್ಯಕ್ಷ ಶಿವಯ್ಯ ನಾಲ್ವತ್ವಾಡಮಠ, ಸುಭಾಷ ಚನ್ನಪ್ಪನವರ, ಸುಧಾ ಹುಚ್ಚಣ್ಣವರ, ಕೋಶಾಧ್ಯಕ್ಷ ವಿರುಪಾಕ್ಷಪ್ಪ ದಲಾಲಿ, ಸಹ ಕೋಶಾಧ್ಯಕ್ಷ ವೀರಣ್ಣ ಗಡಗಿ, ಕಾರ್ಯದರ್ಶಿ ಚೇತನ ಅಂಗಡಿ ಸೇರಿದಂತೆ ಹಲವರು ಹಾಗೂ ಶ್ರೀಮಠದ ಭಕ್ತರು, ಕ್ರೀಡಾಭಿಮಾನಿಗಳು ಉಪಸ್ಥಿತರಿದ್ದರು.

---------------

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande