
ಗದಗ, 29 ಮಾರ್ಚ್ (ಹಿ.ಸ.)
ಆ್ಯಂಕರ್:- ಅಮೇರಿಕ, ಇಸ್ರೆಲ್ ಮತ್ತು ಇರಾನ್ ಯುದ್ಧದ ಕಾರಣದಿಂದಾಗಿ ತೈಲ ಬೆಲೆಗಳು ಪ್ರತಿ ಬ್ಯಾರಲ್ಗೆ 100 ಡಾಲರ್ ಮೇಲೆ ದಾಟಿದ್ದರೂ ಕೂಡ ಭಾರತದಲ್ಲಿ ಪೆಟ್ರೋಲ್, ಡಿಸೈಲ್ ಬೆಲೆಗಳನ್ನು ಏರಿಸದೇ ಪೆಟ್ರೋಲ್ನ ಮೇಲೆ ಹೆಚ್ಚುವರಿ ಅಬಕಾರಿ ಸುಂಕವನ್ನು ಲೀಟರ್ಗೆ 13 ರೂ ಯಿಂದ 3 ರೂ ಗೆ ಹಾಗು ಡಿಸೈಲ್ ಮೇಲಿನ ಸುಂಕವನ್ನು 10 ರೂ ಯಿಂದ 0 ಕ್ಕೆ ಇಳಿಸಿದ ಕೇಂದ್ರ ಸರ್ಕಾರದ ನಡೆಗೆ ಜಿಲ್ಲಾ ಬಿಜೆಪಿ ವಕ್ತಾರರಾದ ಎಂ.ಎಂ.ಹಿರೇಮಠರವರು ಅಭಿನಂದನೆಗಳನ್ನು ಸಲ್ಲಿಸಿರುವರು.
ಅವರಿಂದು ಪತ್ರಿಕಾ ಹೇಳಿಕೆಯನ್ನು ಬಿಡುಗಡೆ ಮಾಡಿ ಅಮೇರಿಕ, ಇಸ್ರೇಲ್ ಹಾಗು ಇರಾನ್ ದೇಶಗಳ ಯುದ್ಧದಿಂದಾಗಿ ಯುದ್ಧಕ್ಕಿಂತ ಪೂರ್ವದಲ್ಲಿ 75 ಡಾಲರ್ಗೆ 1 ಬ್ಯಾರಲ್ ಸಿಗುತ್ತಿದ್ದ ತೈಲದ ಬೆಲೆ110 ಡಾಲರ್ ವರೆಗೆ 1 ಬ್ಯಾರಲ್ ಸಿಗುತ್ತಿದ್ದು, ಇಷ್ಟೊಂದು ಅಂತರದ ಬೆಲೆ ಏರಿಕೆ ಜಾಗತಿಕ ಮಟ್ಟದಲ್ಲಿ ಆದರು ಕೂಡ ಕೇಂದ್ರ ಸರ್ಕಾರ ಜನರಿಗೆ ಯಾವುದೇ ಹೊರೆಯನ್ನು ಮಾಡದೇ ಅಬಕಾರಿ ಸುಂಕವನ್ನು ಇಳಿಸಿ ಸುಮಾರು 1.75 ಲಕ್ಷ ಕೋಟಿ ಆದಾಯವನ್ನು ನಷ್ಟ ಮಾಡಿಕೊಂಡು ಜನರಿಗೆ ನೆಮ್ಮದಿಯನ್ನು ಕೇಂದ್ರ ಸರ್ಕಾರ ನೀಡಿದೆ. ಬೇರೆ, ಬೇರೆ ದೇಶಗಳಲ್ಲಿ ಈಗಾಗಲೇ ಪೆಟ್ರೋಲ್, ಡಿಸೈಲ್ ಧರವನ್ನು ಶೇ 20% ರಿಂದ 50% ತನಕ ಬೆಲೆ ಏರಿಕೆಯನ್ನು ಮಾಡಿರುವರು. ಪ್ರತಿ ಬ್ಯಾರಲ್ಗೆ 100 ಡಾಲರ್ಗಿಂತ ಹೆಚ್ಚಾಗಿದ್ದರೂ ಚಿಲ್ಲರೆ ಪಂಪ್ ಧರಗಳಲ್ಲಿ ಯತಾ ಸ್ಥಿತಿಯನ್ನೆ ಭಾರತ ಕಾಪಾಡಿಕೊಂಡು ಬಂದಿದೆ. ಇದರಿಂದಾಗಿ ತೈಲ ಕಂಪನಿಗಳು ನಷ್ಟ ಅನುಭವಿಸುವಂತಾಗಿ ಅವುಗಳ ಬಂಡವಾಳದ ಮೇಲೆ ಪರಿಣಾಮ ಬೀರಲು ಪ್ರಾರಂಭವಾಗಿತ್ತು. ಹೀಗಾಗಿ ಹೊರೆ ತೆಗ್ಗಿಸಲು ಸರ್ಕಾರ ಅಬಕಾರಿ ಸುಂಕ ಕಡಿತಗೊಳಿಸಿದೆ.
ಒಂದು ವೇಳೆ ಕೇಂದ್ರ ಸರ್ಕಾರ ಸುಂಕ ಕಡಿತಗೊಳಿಸದೆ ಇದ್ದಲ್ಲಿ ಪ್ರತಿ ಪೆಟ್ರೋಲ್ ಧರ ಪ್ರತಿ ಲೀಟರ್ ಗೆ 26 ರೂ ಹಾಗು ಡಿಸೈಲ್ ಧರ ಹೆಚ್ಚಳವಾಗುವ ಸಾಧ್ಯತೆ ಇತ್ತು. ಇದರಿಂದಾಗಿ ಭಾರತದ ಚಿಲ್ಲರೆ ಪೆಟ್ರೋಲ್, ಡಿಸೈಲ್ ಬೆಲೆ ಏರಿಸದೆ ಸ್ಥಿರತೆಯನ್ನು ಕಾಪಾಡಿ ನಾಗರಿಕರ ಹಿತವನ್ನು ಕೇಂದ್ರ ಸರ್ಕಾರ ರಕ್ಷಿಸಿದೆ. ಭಾರತ ದೇಶವು ಎಲ್ಲ ದೇಶಗಳೊಂದಿಗೆ ಒಳ್ಳೆಯ ಸಂಬಂಧವನ್ನು ಇಟ್ಟುಕೊಂಡಿದ್ದರಿಂದ ಈಗ 41 ದೇಶಗಳಿಂದ ಪೆಟ್ರೋಲ್ ಹಾಗು ಡಿಸೈಲ್ನ್ನು ಆಮದು ಮಾಡಿಕೊಳ್ಳುತ್ತಿರುವುದು. ಇರಾನ್ದೊಂದಿಗೆ ಒಳ್ಳೆಯ ಸಂಬಂಧ ಇಟ್ಟುಕೊಂಡಿದ್ದರಿಂದ ಹಾರ್ಮೊಜ್ ಜನಸಂಧಿಯಿಂದ ಭಾರತದ ಗ್ಯಾಸ್ ತುಂಬಿದ ಹಡಗುಗಳು ನಿರಾಳವಾಗಿ ಭಾರತಕ್ಕೆ ಬರುತ್ತಿರುವುದರಿಂದ ಗ್ಯಾಸ್ ಸಮಸ್ಯೆ ಕೂಡ ಬಹಳಷ್ಟು ಕಡಿಮೆಯಾಗಿದೆ.
ಪ್ರಧಾನಿ ನರೇಂದ್ರ ಮೋದಿಯವರ ದೂರದೃಷ್ಟಿಯಿಂದ ದೇಶದಲ್ಲಿ ಯಾವುದೇ ರೀತಿಯ ತೊಂದರೆಯಾಗದಂತೆ ಹಾಗು ಬೆಲೆ ಏರಿಕೆಯಾಗದಂತೆ ಹಾಗು ಯಾವುದೇ ಕೊರತೆ ಉಂಟಾಗದಂತೆ ಜನರ ಬದುಕಿಗೆ ತೊಂದರೆಯಾಗದಂತೆ ಕ್ರಮವನ್ನು ತೆಗೆದುಕೊಂಡು ಭಾರತದ ಜನ ನಿಟ್ಟಿಸುರು ಬಿಡುವಂತಾಗಿದೆ. ಈಗಾಗಲೇ ವಾಣಿಜ್ಯ ಎಲ್ಪಿಜಿ ಸಿಲಿಂಡರ್ಗಳ ಪೂರೈಕೆಯನ್ನು ಶೇ. 70% ಹೆಚ್ಚಿಗೆ ಮಾಡಿ ಹೊಟೇಲ್ ಉದ್ಯಮಗಳಿಗೆ ಸಾಕಷ್ಟು ಎಲ್ಪಿಜಿ ಸಿಲಿಂಡರ್ ಪೂರೈಕೆ ಮಾಡುತ್ತಿರುವದು ಸಂತಸದ ವಿಷಯ. ಉಕ್ಕು, ಆಟೋಮೊಬೈಲ್, ಜವಳಿ, ರಾಸಾಯಿನಿಕ, ಪ್ಲಾಸ್ಟಿಕನಂತ ಉದ್ಯಮೆಗಳಿಗೆ ಹೆಚ್ಚಿನ ರೀತಿಯ ಗ್ಯಾಸ್ ಸಿಲಿಂಡರ್ ಪೂರೈಸಿ ಕೈಗಾರಿಕೆಗಳಿಗೆ ಬಹಳಷ್ಟು ಒಳ್ಳಯದಾಗಿದೆ ಎಂದು ಜಿಲ್ಲಾ ಬಿಜೆಪಿ ವಕ್ತಾರರಾದ ಎಂ.ಎಂ.ಹಿರೇಮಠರವರು ಕೇಂದ್ರ ಸರ್ಕಾರಕ್ಕೆ ಅಭಿನಂದನೆಗಳನ್ನು ಸಲ್ಲಿಸಿರುವರು.
---------------
ಹಿಂದೂಸ್ತಾನ್ ಸಮಾಚಾರ್ / lalita MP