ಮೌಲ್ಯಾಧಾರಿತ ಸಮಾಜ ನಿರ್ಮಾಣ ಅಗತ್ಯ: ಬಿ.ಎಲ್. ಸಂತೋಷ್
ಮೈಸೂರು, 27 ಮಾರ್ಚ್ (ಹಿ.ಸ.): ಆ್ಯಂಕರ್: ಇಂದಿನ ಸಮಾಜವು ಕೇವಲ ನಿಯಮಾಧಾರಿತವಾಗಿರದೆ ಮೌಲ್ಯಾಧಾರಿತವಾಗಿರಬೇಕು ಎಂಬುದು ಕಾಲದ ಅಗತ್ಯವಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅಭಿಪ್ರಾಯಪಟ್ಟರು. ಪ್ರಜ್ಞಾ ಪ್ರವಾಹ ಕರ್ನಾಟಕ ವತಿಯಿಂದ ಮೈಸೂರಿನ ಕರ್ನಾಟಕ ರಾಜ್ಯ ಮುಕ್
BL santosh


ಮೈಸೂರು, 27 ಮಾರ್ಚ್ (ಹಿ.ಸ.):

ಆ್ಯಂಕರ್:

ಇಂದಿನ ಸಮಾಜವು ಕೇವಲ ನಿಯಮಾಧಾರಿತವಾಗಿರದೆ ಮೌಲ್ಯಾಧಾರಿತವಾಗಿರಬೇಕು ಎಂಬುದು ಕಾಲದ ಅಗತ್ಯವಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅಭಿಪ್ರಾಯಪಟ್ಟರು.

ಪ್ರಜ್ಞಾ ಪ್ರವಾಹ ಕರ್ನಾಟಕ ವತಿಯಿಂದ ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಲ್ಲಿ ಆಯೋಜಿಸಲಾದ ‘ಏಕಾತ್ಮ ಮಾನವ ದರ್ಶನ: ಭಾರತದ ವಿಶ್ವದೃಷ್ಟಿ’ ಅಂತಾರಾಷ್ಟ್ರೀಯ ವಿಚಾರ ಸಂಕಿರಣದ ಮೂರನೇ ದಿನದ ಅಂಗವಾಗಿ ನಡೆದ ವಿಶೇಷ ಸಂವಾದದಲ್ಲಿ ಅವರು ಮಾತನಾಡಿದರು.

ಪ್ರಭು ಶ್ರೀರಾಮನು ತನ್ನ ಮೌಲ್ಯಗಳಿಂದ ದೇವತ್ವವನ್ನು ಪಡೆದ ವ್ಯಕ್ತಿಯಾಗಿದ್ದು, ಯುಗಯುಗಾಂತರಕ್ಕೂ ಆದರ್ಶವಾಗಿದ್ದಾರೆ. ಇಂದಿನ ಸಮಾಜವು ನಿಯಮಗಳ ಆಧಾರದ ಮೇಲೆ ಸಾಗುತ್ತಿದ್ದರೂ, ಮೌಲ್ಯಗಳ ಆಧಾರಿತ ದಾರಿಯಲ್ಲಿ ಸಾಗಬೇಕಾದ ಅನಿವಾರ್ಯತೆ ಇದೆ ಎಂದು ಹೇಳಿದರು.

ಪಾಶ್ಚಾತ್ಯ ಚಿಂತನೆ ಮತ್ತು ಜೀವನಶೈಲಿಯ ಪ್ರಭಾವದಿಂದ ಭಾರತೀಯ ಸಮಾಜದ ಮನೋಭಾವ ಬದಲಾಗುತ್ತಿರುವುದು ದೊಡ್ಡ ಸವಾಲಾಗಿದೆ. ಸಮಾಜವನ್ನು ವಸಾಹತು ಮನೋಭಾವದಿಂದ ಮುಕ್ತಗೊಳಿಸುವ ಕಾರ್ಯ ಇನ್ನೂ ಅಪೂರ್ಣವಾಗಿದ್ದು, ಅದಕ್ಕಾಗಿ ಸಮಗ್ರ ಪ್ರಯತ್ನ ಅಗತ್ಯವಿದೆ ಎಂದು ತಿಳಿಸಿದರು.

ಸಿದ್ಧಾಂತವಿಲ್ಲದ ಮತದಾರರು ಸಿದ್ಧಾಂತವಿಲ್ಲದ ರಾಜಕೀಯ ವ್ಯವಸ್ಥೆಯನ್ನು ರೂಪಿಸುತ್ತಾರೆ. ಇದರಿಂದ ಭವಿಷ್ಯದಲ್ಲಿ ಅನೇಕ ಸಮಸ್ಯೆಗಳು ಉದ್ಭವಿಸಬಹುದು ಎಂದು ಎಚ್ಚರಿಕೆ ನೀಡಿದರು. ಉತ್ತಮ ಜನಪ್ರತಿನಿಧಿಗಳನ್ನು ರೂಪಿಸಲು ಮತದಾರರ ಜಾಗೃತಿ ಹೆಚ್ಚಾಗಬೇಕು ಎಂದು ಹೇಳಿದರು.

ರಾಜ್ಯದ ನಿಯಂತ್ರಣ ಕಡಿಮೆಯಾಗುತ್ತಾ ಸಮಾಜಕೇಂದ್ರಿತ ವ್ಯವಸ್ಥೆ ಬಲವಾಗಬೇಕು. ಮೌಲ್ಯಗಳಿಗೆ ಹೆಚ್ಚಿನ ಪ್ರಾಮುಖ್ಯತೆ ದೊರಕಬೇಕು ಎಂಬುದೇ ಸಮೃದ್ಧ ಸಮಾಜ ನಿರ್ಮಾಣದ ಮೂಲತತ್ವ ಎಂದು ಅವರು ಅಭಿಪ್ರಾಯಪಟ್ಟರು.

ವಿಚಾರ ಸಂಕಿರಣದಲ್ಲಿ ವಿವಿಧ ಕ್ಷೇತ್ರಗಳ ಗಣ್ಯರು ಭಾಗವಹಿಸಿದ್ದು, ಭಾರತೀಯ ದೃಷ್ಟಿಕೋನವನ್ನು ಆಧರಿಸಿದ ನೀತಿ ರೂಪಣೆ, ಶಿಕ್ಷಣ ಮತ್ತು ಸಮಾಜದ ಬೆಳವಣಿಗೆ ಕುರಿತು ಚರ್ಚೆಗಳು ನಡೆಯಿತು.

---------------

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande