ಅಯೋಧ್ಯೆಯಲ್ಲಿ ರಾಮನವಮಿ ಸಂಭ್ರಮ
ಅಯೋಧ್ಯೆ, 27 ಮಾರ್ಚ್ (ಹಿ.ಸ.): ಆ್ಯಂಕರ್: ಉತ್ತರ ಪ್ರದೇಶದ ಅಯೋಧ್ಯೆ ಯ ಶ್ರೀ ರಾಮ ಜನ್ಮಭೂಮಿ ದೇವಸ್ಥಾನದಲ್ಲಿ ರಾಮನವಮಿ ಹಬ್ಬವನ್ನು ಅಪಾರ ಭಕ್ತಿ ಮತ್ತು ವೈಭವದೊಂದಿಗೆ ಆಚರಿಸಲಾಯಿತು. ಚೈತ್ರ ಮಾಸದ ಶುಕ್ಲ ಪಕ್ಷದ ನವಮಿ ದಿನದಂದು ಮಧ್ಯಾಹ್ನ 12 ಗಂಟೆಗೆ ಭಗವಾನ್ ಶ್ರೀ ರಾಮ ಅವರ ಸಾಂಕೇತಿಕ ಜನನವನ್ನು
ರಾಮನ ಹಣೆಗೆ ಸೂರ್ಯ ತಿಲಕ


ಅಯೋಧ್ಯೆ, 27 ಮಾರ್ಚ್ (ಹಿ.ಸ.):

ಆ್ಯಂಕರ್:

ಉತ್ತರ ಪ್ರದೇಶದ ಅಯೋಧ್ಯೆ ಯ ಶ್ರೀ ರಾಮ ಜನ್ಮಭೂಮಿ ದೇವಸ್ಥಾನದಲ್ಲಿ ರಾಮನವಮಿ ಹಬ್ಬವನ್ನು ಅಪಾರ ಭಕ್ತಿ ಮತ್ತು ವೈಭವದೊಂದಿಗೆ ಆಚರಿಸಲಾಯಿತು. ಚೈತ್ರ ಮಾಸದ ಶುಕ್ಲ ಪಕ್ಷದ ನವಮಿ ದಿನದಂದು ಮಧ್ಯಾಹ್ನ 12 ಗಂಟೆಗೆ ಭಗವಾನ್ ಶ್ರೀ ರಾಮ ಅವರ ಸಾಂಕೇತಿಕ ಜನನವನ್ನು ಆಚರಿಸಲಾಯಿತು.

ಶ್ರೀ ರಾಮನ ಜನನದ ನಂತರ ದೇವಸ್ಥಾನದಲ್ಲಿ ಭಕ್ತಿಭಾವದಿಂದ ಆರತಿ ನೆರವೇರಿಸಲಾಯಿತು. ಇದೇ ವೇಳೆ ಸೂರ್ಯನ ಕಿರಣಗಳು ಶ್ರೀ ರಾಮ ಲಲ್ಲಾ ವಿಗ್ರಹದ ತಲೆಯ ಮೇಲೆ ಬೀಳುವ ಮೂಲಕ ವಿಶೇಷ “ಸೂರ್ಯಾಭಿಷೇಕ” ದೃಶ್ಯ ಕಂಡುಬಂತು. ಬಳಿಕ ವಿಗ್ರಹಕ್ಕೆ ಪಂಚಾಮೃತ ಅಭಿಷೇಕವೂ ನಡೆಯಿತು.

ಶ್ರೀರಾಮನ ಜನನ ಕ್ಷಣದೊಂದಿಗೆ ಇಡೀ ಅಯೋಧ್ಯೆ ನಗರ ಪಟಾಕಿಗಳ ಸದ್ದುಗಳಿಂದ ಮೊಳಗಿತು. ರಾಮ ಜನ್ಮೋತ್ಸವದ ಅಂಗವಾಗಿ ನಗರದಲ್ಲಿ ಎಲ್ಲೆಡೆ ಭಕ್ತರ ಸಂಭ್ರಮ, ಜಯಘೋಷಗಳು ಮೊಳಗಿದವು. ದೇಶದ ವಿವಿಧ ಭಾಗಗಳಿಂದ ಸಾವಿರಾರು ಭಕ್ತರು ಆಗಮಿಸಿ ಈ ಮಹೋತ್ಸವದಲ್ಲಿ ಭಾಗವಹಿಸಿದರು.

ದೇವಾಲಯದ ಮುಖ್ಯ ಮಾರ್ಗಗಳಲ್ಲಿ ಸಂತರು ಭಕ್ತರ ಮೇಲೆ ಹೂವುಗಳನ್ನು ಸುರಿದು ಆಶೀರ್ವದಿಸಿದ ದೃಶ್ಯಗಳು ಕಂಡುಬಂದವು. ಇಡೀ ಅಯೋಧ್ಯೆ ನಗರವು ಭಕ್ತಿಯ ಮೆರಗು ಪಡೆದು ಹಬ್ಬದ ವಾತಾವರಣದಲ್ಲಿ ತೇಲಿತು.

---------------

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande