ಜಿಂದಾಲ್ : ಮೂರು ಕರಡಿಗಳ ಯಶಸ್ವಿ ಸೆರೆ
ತೋರಣಗಲ್ಲು, 26 ಮಾರ್ಚ್ (ಹಿ.ಸ.) ಆ್ಯಂಕರ್ : ತೋರಣಗಲ್ಲಿನ ಜಿಂದಾಲ್ ವಿದ್ಯಾನಗರ ಟೌನ್ಶಿಪ್ ವ್ಯಾಪ್ತಿಯಲ್ಲಿ ಕಳೆದ ಹತ್ತು ತಿಂಗಳಿನಿಂದ ಬೀಡುಬಿಟ್ಟಿದ್ದ ತಾಯಿ ಕರಡಿ ಹಾಗೂ ಎರಡು ಮರಿಗಳನ್ನು `ರೇಡಿಯೋ ಕಾಲರ್’ ಬಳಸಿ, ಗುರುವಾರ ಯಶಸ್ವಿಯಾಗಿ ಸೆರೆಹಿಡಿಯಲಾಗಿದೆ. ಸೆರೆ ಹಿಡಿದಿರುವ ಕರಡಿಗಳನ್ನು ಕಾಡಿ
ಜಿಂದಾಲ್ : ಮೂರು ಕರಡಿಗಳ ಯಶಸ್ವಿ ಸೆರೆ


ಜಿಂದಾಲ್ : ಮೂರು ಕರಡಿಗಳ ಯಶಸ್ವಿ ಸೆರೆ


ತೋರಣಗಲ್ಲು, 26 ಮಾರ್ಚ್ (ಹಿ.ಸ.)

ಆ್ಯಂಕರ್ : ತೋರಣಗಲ್ಲಿನ ಜಿಂದಾಲ್ ವಿದ್ಯಾನಗರ ಟೌನ್ಶಿಪ್ ವ್ಯಾಪ್ತಿಯಲ್ಲಿ ಕಳೆದ ಹತ್ತು ತಿಂಗಳಿನಿಂದ ಬೀಡುಬಿಟ್ಟಿದ್ದ ತಾಯಿ ಕರಡಿ ಹಾಗೂ ಎರಡು ಮರಿಗಳನ್ನು `ರೇಡಿಯೋ ಕಾಲರ್’ ಬಳಸಿ, ಗುರುವಾರ ಯಶಸ್ವಿಯಾಗಿ ಸೆರೆಹಿಡಿಯಲಾಗಿದೆ. ಸೆರೆ ಹಿಡಿದಿರುವ ಕರಡಿಗಳನ್ನು ಕಾಡಿಗೆ ಬಿಡುಗಡೆ ಮಾಡಲಾಗಿದೆ.

ಈ ಕಾರ್ಯಾಚರಣೆಯಲ್ಲಿ ಮೊದಲ ಬಾರಿಗೆ ಅತ್ಯಾಧುನಿಕ ‘ಆಟೋಮ್ಯಾಟಿಕ್ ಮೊಬೈಲ್ ಆಪ್ ಆಧಾರಿತ ಕೇಜ್ ಲಾಕಿಂಗ್ ಸಿಸ್ಟಮ್' ಬಳಸುವ ಮೂಲಕ ಮೂರೂ ಕರಡಿಗಳನ್ನು ಏಕಕಾಲಕ್ಕೆ ಬಂಧಿಸಿರುವುದು ವಿಶೇಷವಾಗಿದೆ.

10 ತಿಂಗಳಿನಿಂದ ಈ ಕರಡಿಗಳ ಕುಟುಂಬ ಜಿಂದಾಲ್ ವಿದ್ಯಾನಗರ ಟೌನ್ಶಿಪ್ನಲ್ಲಿ ಕಾಣಿಸಿಕೊಳ್ಳುತ್ತಿತ್ತು. ಕಾರಣ ನಿವಾಸಿಗಳಲ್ಲಿ ಭೀತಿ ಉಂಟಾಗಿದ್ದರೂ, ಅರಣ್ಯ ಇಲಾಖೆಯ ಮುನ್ನೆಚ್ಚರಿಕೆಯಿಂದಾಗಿ ಯಾವುದೇ ಅಹಿತಕರ ಘಟನೆ ಸಂಭವಿಸಿರಲಿಲ್ಲ.

ಎಸಿಎಫ್ ಶರಣ್ ಕುಮಾರ್, ಆರ್ಎಫ್ಒಗಳಾದ ಸಯ್ಯದ್ ದಾದಾ ಖಲಂದರ್ ಮತ್ತು ಮಂಜುನಾಥ್, ಡಿಆರ್ಎಫ್ಒಗಳಾದ ಮೋಹನ್ ಹಾಗೂ ಗುರುಸ್ವಾಮಿ, ಬಿಎಫ್ಒಗಳಾದ ವೆಂಕಟೇಶ್ ಮತ್ತು ಶ್ರೀಧರ್ ಅವರ ತಂಡ ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿತ್ತು. ಇವರಿಗೆ ಪಶುವೈದ್ಯರಾದ ಡಾ. ಪ್ರಕೃತಿ ಹಾಗೂ ವೈಲ್ಡ್ ಲೈಫ್ ಎಸ್ಒಎಸ್ ಎನ್ಜಿಒ ಸಂಸ್ಥೆಯವರು ಸಾಥ್ ನೀಡಿದ್ದರು.

ಕರಡಿಗಳನ್ನು ಸೆರೆಹಿಡಿದ ತಾಯಿ ಕರಡಿಗೆ ಮುಂದಿನ ದಿನಗಳಲ್ಲಿ ಅದರ ಚಲನವಲನದ ಮೇಲೆ ನಿಗಾ ಇಡಲು ‘ರೇಡಿಯೋ ಕಾಲರ್' ಅಳವಡಿಸಿ, ಸುರಕ್ಷಿತ ಅರಣ್ಯ ಪ್ರದೇಶದಲ್ಲಿ ತಾಯಿ ಹಾಗೂ ಮರಿಗಳನ್ನು ಬಿಡುಗಡೆಗೊಳಿಸಲಾಗಿದೆ ಎಂದು ಬಳ್ಳಾರಿ ವಲಯ ಉಪ ಅರಣ್ಯ ಸಂರಕ್ಷಣಾಧಿಕಾರಿ ಕೆ.ಎನ್.ಬಸವರಾಜ್ ಅವರು ತಿಳಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande