
ಕೋಲಾರ, ೨೬ ಮಾರ್ಚ್ (ಹಿ.ಸ)
ಆಂಕರ್ : ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಆಶ್ರಯದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಬಂಗಾರಪೇಟೆಯಲ್ಲಿ ಆಯೋಜಿಸಿದ್ದ ಫವರ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ನಗರದ ಸರ್ಕಾರಿ ಮಹಿಳಾ ಕಾಲೇಜಿನ ವಿದ್ಯಾರ್ಥಿನಿಯರಾದ ಮಾನಸ ವಿ ಅಂತಿಮ ಬಿಬಿಎ ೫೭ ಕೆಜಿ ತೂಕದ ವಿಭಾಗದಲ್ಲಿ ಪ್ರಥಮ ಬಹುಮಾನ ಗಳಿಸುವ ಮೂಲಕ ಒಟ್ಟಾರೆ ಕಾಲೇಜಿಗೆ ತೃತೀಯ ಸ್ಥಾನ ಲಭಿಸಿದೆ. ಉಳಿದಂತೆ ಪ್ರಥಮ ಬಿಬಿಎ ತರಗತಿಯ ಎಲ್.ಗೌರಮ್ಮ ೬೯ ಕೆಜಿ ತೂಕದ ವಿಭಾಗದಲ್ಲಿ ದ್ವಿತೀಯ ಬಹುಮಾನ, ಪ್ರಥಮ ಬಿಎಸ್ಸಿಯ ಅಂಬಿಕಾ ಎನ್ ೮೪ ಕೆಜಿ ತೂಕದ ವಿಭಾಗದಲ್ಲಿ ದ್ವಿತೀಯ ಬಹುಮಾನ ಪಡೆದಿದ್ದಾರೆ.
ಒಟ್ಟು ೧೧ ಅಂಕಗಳನ್ನು ಪಡೆದುಕೊಂಡು ತೃತಿಯ ಬಹುಮಾನವನ್ನು ಕಾಲೇಜು ಪಡೆದುಕೊಂಡಿದೆ. ಈ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಕಾಲೇಜಿನ ಪ್ರಾಂಶುಪಾಲ ಪ್ರೊ. ಕೆ.ಎನ್.ಶ್ರೀನಿವಾಸ ಗೌಡ, ದೈಹಿಕ ಶಿಕ್ಷಣ ನಿರ್ದೇಶಕ ಡಾ. ಸುಬ್ರಮಣಿ ಎನ್,ಕ್ರೀಡಾ ಸಮಿತಿಯ ಸದಸ್ಯರು ಮತ್ತು ಕಾಲೇಜಿನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗದವರು ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್