
ಕೋಲಾರ, ೨೬ ಮಾರ್ಚ್ (ಹಿ.ಸ)
ಆಂಕರ್ : ಕರ್ನಾಟಕ ರಾಜ್ಯ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಕ್ಷೇಮ ಅಭಿವೃದ್ಧಿ ಸಂಘದ ಜಿಲ್ಲಾ ಘಟಕಕ್ಕೆ ೨೦೨೬-೨೯ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆಗಾಗಿ ನಡೆದ ಚುನಾವಣೆಯಲ್ಲಿ ನೂತನ ಅಧ್ಯಕ್ಷರಾಗಿ ಮಹೇಶ್ ಅವರು ೭೭ ಮತಗಳನ್ನು ಪಡೆದು ಆಯ್ಕೆಯಾಗಿದ್ದಾರೆ.
ಗುರುವಾರ ನಡೆದ ಜಿಲ್ಲೆಯ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ವಲಯದಲ್ಲಿ ತೀವ್ರ ಕುತೂಹಲ ಕೆರಳಿಸಿದ್ದ ಈ ಚುನಾವಣೆಯಲ್ಲಿ ಮಹೇಶ್ ಅವರು ೭೭ ಮತಗಳನ್ನು ಪಡೆಯುವ ಮೂಲಕ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ನಡೆದ ಪೈಪೋಟಿಯಲ್ಲಿ ಮಹೇಶ್ ಅವರು ೭೭ ಮತಗಳನ್ನು ಜಯಭೇರಿ ಸಾಧಿಸಿ ಪರಾಜಿತ ಅಭ್ಯರ್ಥಿ ೪೨ ಮತಗಳನ್ನು ಪಡೆದರು.
ಖಜಾಂಚಿ ಸ್ಥಾನಕ್ಕೆ ಸ್ಪರ್ಧಿಸಿದ್ದ ಸಂಪರಾಜ್ ಅವರು ೬೬ ಮತಗಳನ್ನು ಪಡೆಯುವ ಮೂಲಕ ಗೆಲುವು ಸಾಧಿಸಿದರು. ಇದೇ ವೇಳೆ ಮಂಗಳಾAಬ ಅವರು ೬೧ ಮತಗಳನ್ನು ಪಡೆದು ವಿಜೇತರಾದರು. ಉಳಿದಂತೆ ಪ್ರಮುಖ ಹುದ್ದೆಗಳಿಗೆ ಅವಿರೋಧ ಆಯ್ಕೆ ನಡೆದಿದ್ದು, ರಾಜ್ಯ ಪರಿಷತ್ ಸದಸ್ಯರಾಗಿ ದೀಪಾ, ಉಪಾಧ್ಯಕ್ಷರಾಗಿ ಮೋಹನ್, ಸಾಂಸ್ಕöÈತಿಕ ಕಾರ್ಯದರ್ಶಿಯಾಗಿ ಮುಳಬಾಗಿಲಿನ ಭವಾನಿ, ಸಂಘಟನಾ ಕಾರ್ಯದರ್ಶಿಗಳಾಗಿ ಮುಳಬಾಗಿಲಿನ ರಮೇಶ್ ಹಾಗೂ ಸುನಿತಾ ಮತ್ತು ಕ್ರೀಡಾ ಕಾರ್ಯದರ್ಶಿಯಾಗಿ ನಾಗರಾಜ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಗೆಲುವಿನ ನಂತರ ಸಂಘದ ಉದ್ದೇಶಗಳ ಬಗ್ಗೆ ಮಾತನಾಡಿದ ನೂತನ ಪದಾಧಿಕಾರಿಗಳು, ಜಿಲ್ಲೆಯ ಪಿಡಿಒಗಳ ಹಿತರಕ್ಷಣೆ ಮತ್ತು ಇಲಾಖೆಯ ಅಭಿವೃದ್ಧಿಗೆ ಶ್ರಮಿಸುವುದಾಗಿ ಘೋಷಿಸಿದರು.
ಕಳೆದ ಹತ್ತು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಸೇವಾ ಜೇಷ್ಠತಾ ಪಟ್ಟಿಯನ್ನು ಸರಿಪಡಿಸಲು ರಾಜ್ಯ ಮಟ್ಟದಲ್ಲಿ ಹೋರಾಟ ಮಾಡುವುದು ಮತ್ತು ಜಿಲ್ಲೆಯಲ್ಲಿ ಪಿಡಿಒಗಳು ಒತ್ತಡರಹಿತವಾಗಿ ಕೆಲಸ ಮಾಡಲು ಪೂರಕವಾದ ಮುಕ್ತ ವಾತಾವರಣ ನಿರ್ಮಿಸುವುದು ನಮ್ಮ ಮೊದಲ ಆದ್ಯತೆಯಾಗಿದೆ ಎಂದು ನೂತನ ಅಧ್ಯಕ್ಷ ಮಹೇಶ್ ತಿಳಿಸಿದರು.
ಇಡೀ ಜಿಲ್ಲೆಯ ಪಿಡಿಒಗಳು ಮತ್ತು ಆರ್ಡಿಪಿಆರ್ ಇಲಾಖೆಯ ಸೆಕ್ರೆಟರಿಗಳು, ಬಿಲ್ ಕಲೆಕ್ಟರ್ಗಳು, ಜಲಗಾರರು ಹಾಗೂ ಅಕೌಂಟೆಂಟ್ಗಳನ್ನು ಒಗ್ಗೂಡಿಸಿ ಸಂಘಟನೆಯನ್ನು ಬಲಪಡಿಸುವುದಾಗಿ ಅವರು ಭರವಸೆ ನೀಡಿದರು. ಸುಮಾರು ಶೇ. ೯೯ ರಷ್ಟು ಮತದಾನವಾಗುವ ಮೂಲಕ ಈ ಚುನಾವಣೆ ಅತ್ಯಂತ ಯಶಸ್ವಿಯಾಗಿ ನಡೆದಿದ್ದು, ಎಲ್ಲಾ ಪದಾಧಿಕಾರಿಗಳು ಒಗ್ಗಟ್ಟಿನಿಂದ ಕೆಲಸ ಮಾಡಲು ತೀರ್ಮಾನಿಸಿರುವುದಾಗಿ ಘೋಷಿಸಿದರು. ಆಯ್ಕೆ ಘೋಷಣೆಯಾಗುತ್ತಿದ್ದಂತೆ ನೂತನ ಅಧ್ಯಕ್ಷ ಮಹೇಶ್ ಬೆಂಬಲಿಗರು ವಿಜಯೋತ್ಸವ ಆಚರಿಸಿದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್