
ನವದೆಹಲಿ, 25 ಮಾರ್ಚ್ (ಹಿ.ಸ.):
ಆ್ಯಂಕರ್:ಅಡುಗೆ ಅನಿಲ (ಎಲ್‌ಪಿಜಿ) ಕೊರತೆಯನ್ನು ಖಂಡಿಸಿ ಸಂಸತ್ ಭವನದ ಆವರಣದಲ್ಲಿ ಪ್ರತಿಪಕ್ಷಗಳ ಸಂಸದರು ತೀವ್ರ ಪ್ರತಿಭಟನೆ ನಡೆಸಿದರು. ಮಕರ ದ್ವಾರದ ಬಳಿ ಖಾಲಿ ಸಿಲಿಂಡರ್‌ಗಳ ಚಿತ್ರಗಳನ್ನು ಪ್ರದರ್ಶಿಸಿ, ಸರ್ಕಾರದ ವಿರುದ್ಧ ಘೋಷಣೆಗಳನ್ನು ಹಾಕಿದರು.
ಪ್ರತಿಭಟನೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ಮನೀಶ್ ತಿವಾರಿ, ಮಾಣಿಕಂ ಟ್ಯಾಗೋರ್, ಮಿಸಾ ಭಾರತಿ ಮತ್ತು ಧರ್ಮೇಂದ್ರ ಯಾದವ್ ಸೇರಿದಂತೆ ಹಲವಾರು ಪ್ರತಿ ಪಕ್ಷದ ಸದಸ್ಯರು ಭಾಗವಹಿಸಿದರು.
“ಖಾಲಿ ಸಿಲಿಂಡರ್‌ಗಳು, ಖಾಲಿ ಭರವಸೆಗಳು” ಎಂಬ ಘೋಷಣೆಗಳಿರುವ ಬ್ಯಾನರ್‌ಗಳನ್ನು ಹಿಡಿದುಕೊಂಡು, ದೇಶಾದ್ಯಂತ ಉಂಟಾಗಿರುವ ಎಲ್‌ಪಿಜಿ ಕೊರತೆಯ ಕುರಿತು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ತಕ್ಷಣವೇ ಅನಿಲ ಪೂರೈಕೆಯನ್ನು ಸಾಮಾನ್ಯಗೊಳಿಸಲು ಕ್ರಮ ಕೈಗೊಳ್ಳಬೇಕೆಂದು ಸಂಸದರು ಒತ್ತಾಯಿಸಿದರು.
---------------
ಹಿಂದೂಸ್ತಾನ್ ಸಮಾಚಾರ್ / Rakesh Mahadevappa