
ಕೋಲಾರ, ೨೩ ಮಾರ್ಚ್ (ಹಿ.ಸ):
ಆ್ಯಂಕರ್: ಹುತಾತ್ಮರ ತ್ಯಾಗವನ್ನು ಯುವಜನರು ಸದಾ ಸ್ಮರಿಸಿ ದೇಶಭಕ್ತಿಯ ಮಾರ್ಗದಲ್ಲಿ ನಡೆಯಬೇಕು ಎಂದು ಇಟಿಸಿಎಂ ನರ್ಸಿಂಗ್ ಕಾಲೇಜು ಕೋಲಾರ ಪ್ರಾಂಶುಪಾಲರಾದ ಹರೀಶ್ ಕುಮಾರ್ ಎ ಆರ್ ಹೇಳಿದರು.
ನವ ಸಮಾಜ ಮತ್ತು ಪರಿಸರ ಅಭಿವೃದ್ಧಿ ಸಂಸ್ಥೆ, ಇಟಿಸಿಎಂ ನರ್ಸಿಂಗ್ ಕಾಲೇಜು ಕೋಲಾರ ರವರ ಸಹಯೋಗದಲ್ಲಿ ಮತ್ತು ಮೈ ಭಾರತ್ ಕೇಂದ್ರ, ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯದೊಂದಿಗೆ ಸೋಮವಾರ ಕೋಲಾರದಲ್ಲಿ ಶಹೀದ್ ದಿವಸ್ ಅಂಗವಾಗಿ ದೇಶಭಕ್ತಿಯ ಜಾಗೃತಿ ಮೂಡಿಸಲು ಜಾಗೃತಿ ರ್ಯಾಲಿಯನ್ನು ಹಮ್ಮಿಕೊಳ್ಳಲಾಗಿತ್ತು.
ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ತಮ್ಮ ಅಮೂಲ್ಯ ಪ್ರಾಣ ತ್ಯಾಗ ಮಾಡಿದ ಭಗತ್ ಸಿಂಗ್, ಸುಖದೇವ್ ಮತ್ತು ರಾಜಗುರು ಅವರ ತ್ಯಾಗ ಮತ್ತು ದೇಶಪ್ರೇಮವನ್ನು ಸ್ಮರಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಎನ್.ಎಸ್.ಎಸ್. ಸಂಯೋಜಕ ಶೇಷಾದ್ರಿ, ನವ ಸಮಾಜ ಮತ್ತು ಪರಿಸರ ಅಭಿವೃದ್ಧಿ ಸಂಸ್ಥೆಯ ಅಧ್ಯಕ್ಷ ಶಾಮ್ಸ್ ಎಂ. ಬಿ, ಕಾರ್ಯದರ್ಶಿ ಮುಸ್ತಫಾ, ಸದಸ್ಯೆ ಅಶ್ವಿನಿ, ವೈ.ಐ.ಡಿ.ಎಸ್ ಪ್ರಾಜೆಕ್ಟ್ ಕೋಆರ್ಡಿನೇಟರ್ ಆನಂದ ಮಹಾರಾಜ್, ಗೌಸ್ ಖಾನ್ ಬಿ ಸೇರಿದಂತೆ ವಿದ್ಯಾರ್ಥಿಗಳು, ಯುವಕರು ಹಾಗೂ ಸಂಘಟನೆಯ ಸದಸ್ಯರು ಭಾಗವಹಿಸಿದರು.ರ್ಯಾಲಿಯಲ್ಲಿ ದೇಶಭಕ್ತಿ ಘೋಷಣೆಗಳನ್ನು ಹಾಕಿ, ಶಹೀದರ ಆದರ್ಶಗಳನ್ನು ಯುವಜನರು ಅಳವಡಿಸಿಕೊಳ್ಳಬೇಕು ಎಂಬ ಸಂದೇಶ ನೀಡಲಾಯಿತು. ರ್ಯಾಲಿಯ ಜೊತೆಗೆ ಸ್ವಚ್ಛತೆ ಕಾರ್ಯಕ್ರಮವನ್ನು ಸಹ ಹಮ್ಮಿಕೊಳ್ಳಲಾಗಿದ್ದು, ಪರಿಸರ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸಲಾಯಿತು. ಕಾರ್ಯಕ್ರಮವು ಶಾಂತಿಯುತವಾಗಿ ಹಾಗೂ ಯಶಸ್ವಿಯಾಗಿ ನಡೆಯಿತು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್